ಅಸಹಾಯಕ ಮಹಿಳೆಯರು, ಅನಾರೋಗ್ಯ ಪೀಡಿತರಿಗೆ ನೆರವು ನೀಡುವುದು ಶ್ಲಾಘನೀಯ: ಪ್ರೊ. ಕೃಷ್ಣಮೂರ್ತಿ

Upayuktha
0


ಸುರತ್ಕಲ್: ಸಾಮುದಾಯಿಕ ಜೀವನ ಕ್ರಮದಲ್ಲಿ ಪರಸ್ಪರ ಸಹಾಯದ ಮೂಲಕ ಸರ್ವರಿಗೂ ಉತ್ತಮ ಬಾಳ್ವೆ ನೀಡುವ ಸದಾಶಯವಿದೆ. ಸಮಾಜದ ಒಳಿತಿಗಾಗಿ ಸ್ಪಂದನೆಯ ಮನೋಭಾವನೆ ಅಗತ್ಯವಿದ್ದು, ಆಸಹಾಯಕ ಮಹಿಳೆಯರಿಗೆ ಹಾಗೂ ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು ನೀಡುವ ಉದಾತ್ತ ಚಿಂತನೆ ಶ್ಲಾಘನೀಯ ಎಂದು ಸುರತ್ಕಲ್ ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ನುಡಿದರು.


ಅವರು ಮೊಗವೀರ ಸಮಾಜ ಮುಂಬಾಯಿಯ ಸಮಾಜ ಸೇವಕ ಕೆ. ಎಲ್. ಬಂಗೇರ ಅವರು ತಮ್ಮ ತಂದೆ-ತಾಯಿ ಬೈಕಂಪಾಡಿ ಲಕ್ಷ್ಮಣ ಬಂಗೇರ ಮತ್ತು ಸುಂದರಿ ಪುತ್ರನ್ ಅವರ ನೆನಪಿನಲ್ಲಿ, ಪಣಂಬೂರು ಮೊಗವೀರ ಮಹಾಸಭಾ ಚಿತ್ರಾಪುರ ಕುಳಾಯಿ ಮೂಲಕ ಆರ್ಥಿಕವಾಗಿ ಅಸಹಾಯಕ ಮಹಿಳೆಯರಿಗೆ ಹಾಗೂ ಅನಾರೋಗ್ಯ ಪೀಡಿತರಿಗೆ ನೀಡಲಾಗುತ್ತಿರುವ ಆರ್ಥಿಕ ನೆರವನ್ನು ವಿತರಿಸಿ ಮಾತನಾಡುತ್ತಿದ್ದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಣಂಬೂರು ಮೊಗವೀರ ಮಹಾಸಭೆಯ ಅಧ್ಯಕ್ಷ ಪಿ. ಮಾಧವ ಸುವರ್ಣ ಅವರು, "ಮೊಗವೀರ ಸಮಾಜವು ಸಹಕಾರ ಆಶಯದ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ದಾನಿ ಕೆ. ಎಲ್. ಬಂಗೇರ ಅವರು ಸಮಾಜದ ಬಂಧುಗಳ ನೋವಿಗೆ ಸ್ಪಂದಿಸಿ ನಿರಂತರ ಆರ್ಥಿಕ ಕೊಡುಗೆ ನೀಡುತ್ತಿದ್ದಾರೆ. ಇಂತಹ ಮಾನವೀಯ ಮೌಲ್ಯಗಳು ಇಂದಿನ ಸಮಾಜಕ್ಕೆ ಅತ್ಯಗತ್ಯ ಹಾಗೂ ಅನುಕರಣೀಯ ಆದರ್ಶವಾಗಿದೆ" ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಪಣಂಬೂರು ಊರಿನ ಗುರಿಕಾರ ಅಮರನಾಥ್ ಸುವರ್ಣ, ಉಪಾಧ್ಯಕ್ಷ ಜಗನ್ನಾಥ್ ಪುತ್ರನ್, ಮಾಜಿ ಕಾರ್ಯದರ್ಶಿ ನಾಗೇಶ್ ಪುತ್ರನ್, ಕೋಶಾಧಿಕಾರಿ ರೋಹಿದಾಸ್ ಸಾಲ್ಯಾನ್ ಸೇರಿದಂತೆ ಕುಮಾರ್ ಬಂಗೇರ, ರಮೇಶ್ ಪುತ್ರನ್, ಪ್ರಕಾಶ್ ಸಾಲ್ಯಾನ್, ಭರತ್ ಕುಮಾರ್, ನೂತನ್ ಕಾಂಚನ್, ಅನೀಶ್ ಸಾಲ್ಯಾನ್ ಮತ್ತು ನರೇಶ್ ಕುಂದರ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಪುರುಷೋತ್ತಮ ಕೋಟ್ಯಾನ್ ವಂದಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top