‘ದಿಮಾಗಿ ನಕ್ಸಲಿಸಮ್’- ದೇಶವಿರೋಧಿ ಷಡ್ಯಂತ್ರ: ಯುವಜನತೆಯ ಜಾಗೃತಿಗೆ ಹಿಂದೂ ಜನಜಾಗೃತಿ ಸಮಿತಿ ಕರೆ

Upayuktha
0


ಬೆಂಗಳೂರು: ದೇಶದ ಪ್ರಗತಿ ಮತ್ತು ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರುತ್ತಿರುವ ‘ದಿಮಾಗಿ ನಕ್ಸಲಿಸಮ್’ (ಮಾನಸಿಕ ನಕ್ಸಲಿಸಮ್) ವಿರುದ್ಧ ಯುವಜನತೆ ಹಾಗೂ ನಾಗರಿಕರು ಅತ್ಯಂತ ಸತರ್ಕರಾಗಿರಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಚ್ಚರಿಸಿದಂತೆ, ನೇರ ಶಸ್ತ್ರಾಸ್ತ್ರಗಳ ಹೋರಾಟಕ್ಕಿಂತಲೂ ಈ ವೈಚಾರಿಕ ಹಾಗೂ ಬೌದ್ಧಿಕ ಭಯೋತ್ಪಾದನೆಯು ದೇಶದ ಭದ್ರತೆಗೆ ಅತ್ಯಂತ ಅಪಾಯಕಾರಿಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.


ಇತ್ತೀಚಿನ ದಿನಗಳಲ್ಲಿ ದೆಹಲಿಯ ಜಂತರ್ ಮಂತರ್ ಸೇರಿದಂತೆ ವಿವಿಧೆಡೆ ನಡೆದ ವಿದ್ಯಾರ್ಥಿ ಚಳವಳಿಗಳು ಮತ್ತು ಸಿಜೆಪಿ (CJP) ಆಂದೋಲನಗಳ ಹಿಂದೆ ವ್ಯವಸ್ಥಿತವಾದ ‘ದಿಮಾಗಿ ನಕ್ಸಲಿಸಮ್’ ಕೆಲಸ ಮಾಡುತ್ತಿದೆ. ಯುವಜನತೆಯ ಭಾವನೆಗಳು ಮತ್ತು ಪರೀಕ್ಷಾ ವ್ಯವಸ್ಥೆಯ ಸವಾಲುಗಳನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟುವುದು ಹಾಗೂ ರಾಷ್ಟ್ರೀಯ ಸಂಸ್ಥೆಗಳ ಮೇಲಿನ ವಿಶ್ವಾಸಾರ್ಹತೆಯನ್ನು ಕುಗ್ಗಿಸುವ ಷಡ್ಯಂತ್ರಗಳು ನಡೆಯುತ್ತಿವೆ. ನ್ಯಾಯವ್ಯವಸ್ಥೆ, ಸೇನೆ ಹಾಗೂ ಶಿಕ್ಷಣ ಸಂಸ್ಥೆಗಳಂತಹ ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳನ್ನು ವಿವಾದಕ್ಕೆ ಸಿಲುಕಿಸಿ ಸಮಾಜದಲ್ಲಿ ಅರಾಜಕತೆ ಸೃಷ್ಟಿಸುವುದೇ ಈ ಗುಂಪುಗಳ ಮುಖ್ಯ ಉದ್ದೇಶವಾಗಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲೂ ಇಂತಹ ವಿಚಾರಧಾರೆಗಳು ಹರಡುತ್ತಿದ್ದು, 'ಜೆನ್-ಝೀ' ಯುವ ಪೀಳಿಗೆಯು ಇಂತಹ ಸುಳಿಗೆ ಸಿಲುಕದೆ ನೈಜ ಇತಿಹಾಸ ಹಾಗೂ ರಾಷ್ಟ್ರಾಭಿಮಾನದೊಂದಿಗೆ ರಾಷ್ಟ್ರನಿರ್ಮಾಣದಲ್ಲಿ ಭಾಗಿಯಾಗಬೇಕಾಗಿದೆ.


ಈ ವೈಚಾರಿಕ ಷಡ್ಯಂತ್ರದ ಕುರಿತು ಸಾರ್ವಜನಿಕರಲ್ಲಿ ಮತ್ತು ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿಯು ‘CJP ಆಂದೋಲನದ ಹಿಂದೆ ದಿಮಾಗಿ ನಕ್ಸಲಿಸಂ ಕೈವಾಡವೇ?’ ಎಂಬ ವಿಶೇಷ ಚರ್ಚಾಕೂಟವನ್ನು ಆಯೋಜಿಸಿದೆ. ಈ ಕಾರ್ಯಕ್ರಮವು ಸೆಪ್ಟೆಂಬರ್ 3, 2026 ರಂದು ಬೆಂಗಳೂರಿನ ವಿ.ವಿ. ಪುರಂನಲ್ಲಿರುವ ವಾಸವಿ ಟೆಂಪಲ್ ಸ್ಟ್ರೀಟ್‌ನ ಮಾನಂದಿ ನಂಜುಂಡ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ. ಬೆಂಗಳೂರಿನ ಸಮಸ್ತ ಯುವಜನತೆ ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಬೇಕು ಎಂದು ಮೋಹನ್ ಗೌಡ ಅವರು ಮನವಿ ಮಾಡಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top