ಮಂಗಳೂರಿನಲ್ಲಿ ಆದಿತ್ಯ ಬಿರ್ಲಾ ಹೌಸಿಂಗ್ ಫೈನಾನ್ಸ್ನ ಹೊಸ ಶಾಖೆ ಆರಂಭ

Upayuktha
0

ರಾಜ್ಯದಲ್ಲಿ ಸೇವಾ ವ್ಯಾಪ್ತಿ ವಿಸ್ತರಣೆ; ಒಟ್ಟು ಶಾಖೆಗಳ ಸಂಖ್ಯೆ ಈಗ 18ಕ್ಕೆ ಏರಿಕೆ 

ಆರಂಭಿಕ ಕೊಡುಗೆ: ಶೂನ್ಯ ಲಾಗಿನ್ ಶುಲ್ಕ ಮತ್ತು ₹ 50 ಲಕ್ಷದವರೆಗೆ ತಕ್ಷಣ ಸಾಲ ಮಂಜೂರಾತಿ  



ಮಂಗಳೂರು:
  ಗೃಹ  ಹಣಕಾಸಿನ ಪ್ರಮುಖ ಸಂಸ್ಥೆಯಾಗಿರುವ ಹಾಗೂ ಆದಿತ್ಯ ಬಿರ್ಲಾ ಕ್ಯಾಪಿಟಲ್ ಲಿಮಿಟೆಡ್ನ ಅಂಗಸಂಸ್ಥೆಯಾಗಿರುವ ಆದಿತ್ಯ ಬಿರ್ಲಾ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಎಬಿಎಚ್ಎಫ್ಎಲ್), ದೇಶದಾದ್ಯಂತ ತನ್ನ ವಿತರಣಾ ಜಾಲ  ವಿಸ್ತರಿಸುವ ಯೋಜನೆಯ ಭಾಗವಾಗಿ ಮಂಗಳೂರಿನಲ್ಲಿ ಹೊಸ ಶಾಖೆ  ಆರಂಭಿಸಿದೆ.ಈ ಹೊಸ ಶಾಖೆಯೊಂದಿಗೆ ಕರ್ನಾಟಕದಲ್ಲಿ ‘ಎಬಿಎಚ್ಎಫ್ಎಲ್’ನ ಒಟ್ಟು ಶಾಖೆಗಳ ಸಂಖ್ಯೆ ಈಗ 18ಕ್ಕೆ ಏರಿಕೆಯಾಗಿದೆ. ಇದರಿಂದ ಹೆಚ್ಚಿನ ಬೆಳವಣಿಗೆಯ ಸಾಧ್ಯತೆ ಇರುವ ಮಾರುಕಟ್ಟೆಗಳಲ್ಲಿ ಸಂಸ್ಥೆಯ ವಹಿವಾಟಿಗೆ ಈಗ ಮತ್ತಷ್ಟು ಬಲಬಂದಿದ್ದು, ಗ್ರಾಹಕರಿಗೆ ಸೇವೆ ಸುಲಭವಾಗಿ ಲಭ್ಯವಾಗಲಿದೆ.



ಮಂಗಳೂರಿನಲ್ಲಿ ನಗರ ಮೂಲಸೌಕರ್ಯಗಳ ವಿಸ್ತರಣೆ, ಸ್ವಂತ ಮನೆ ಹೊಂದುವ ಆಸಕ್ತಿ ಹೆಚ್ಚುತ್ತಿರುವುದು, ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿವೇಶನ, ಮನೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದ ಗೃಹ ನಿರ್ಮಾಣ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ.ವಿಮಾನ ನಿಲ್ದಾಣ, ಬಂದರು ಮತ್ತು ರಸ್ತೆ ಸಂಪರ್ಕದ ಅಭಿವೃದ್ಧಿಯಿಂದ ಮಂಗಳೂರು ಆಸುಪಾಸಿನಲ್ಲಿ ಸಂಪರ್ಕ ವ್ಯವಸ್ಥೆಯೂ ಮತ್ತಷ್ಟು ಸುಧಾರಣೆಗೊಳ್ಳುತ್ತಿದೆ. ಇದರಿಂದ ಮಂಗಳೂರು ನಗರವು ಪ್ರಮುಖ ಪ್ರಾದೇಶಿಕ ಕೇಂದ್ರವಾಗಿ ಬೆಳೆಯುತ್ತಿದ್ದು, ಹೊಸ ವಸತಿ ಪ್ರದೇಶಗಳ ಅಭಿವೃದ್ಧಿಗೂ ಉತ್ತೇಜನ ದೊರೆಯುತ್ತಿದೆ.


ಈ ಹಿನ್ನೆಲೆಯಲ್ಲಿ ಸಂಬಳ ಪಡೆಯುವ ಉದ್ಯೋಗಿಗಳು, ಸ್ವಯಂ ಉದ್ಯೋಗಿಗಳು, ಉದ್ಯಮಿಗಳು ಮತ್ತು ಅನಿವಾಸಿ ಭಾರತೀಯರು (ಎನ್ಆರ್ಐ) ಮನೆ ಖರೀದಿಸಲು, ನಿರ್ಮಿಸಲು ಅಥವಾ ನವೀಕರಿಸಲು ಸಾಲದ ಸೌಲಭ್ಯಗಳಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಹೊಸ ಶಾಖೆಯ ಮೂಲಕ ಮಂಗಳೂರಿನ ಗ್ರಾಹಕರಿಗೆ ಅವರ ಅಗತ್ಯಗಳಿಗೆ ತಕ್ಕ ಗೃಹ ನಿರ್ಮಾಣದ ಸೇವೆಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಗುರಿಯನ್ನು ‘ಎಬಿಎಚ್ಎಫ್ಎಲ್’ ಹೊಂದಿದೆ.ವಿವಿಧ ವರ್ಗದ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ‘ಎಬಿಎಚ್ಎಫ್ಎಲ್’ - ವಿವಿಧ ಬಗೆಯ ವಸತಿ ಹಣಕಾಸು ಸೌಲಭ್ಯಗಳನ್ನು ಒದಗಿಸುತ್ತದೆ. ಇವುಗಳಲ್ಲಿ- ಕೈಗೆಟುಕುವ ವಸತಿ ಸಾಲಗಳು,  ಪ್ರೈಮ್ ಹೌಸಿಂಗ್ ಸಾಲಗಳು, ಗೃಹ  ನಿರ್ಮಾಣ ಸಾಲಗಳು , ಆಸ್ತಿಯ ಮೇಲಿನ ಸಾಲಗಳು ಮುಂತಾದವು ಸೇರಿವೆ.ಈ ಸೌಲಭ್ಯಗಳು ಸಂಬಳ ಪಡೆಯುವವರು, ಸ್ವಯಂ ಉದ್ಯೋಗಿ ವೃತ್ತಿಪರರು, ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು ಮತ್ತು ಹೊಸದಾಗಿ ಆದಾಯ ಗಳಿಸುತ್ತಿರುವ ವಿವಿಧ ವರ್ಗದ ಗ್ರಾಹಕರಿಗೆ ಸುಲಭವಾಗಿ ದೊರೆಯಲಿವೆ.


ಸುವ್ಯವಸ್ಥಿತ ಡಿಜಿಟಲ್ ಸೌಲಭ್ಯದ ನೆರವಿನಿಂದ ‘ಎಬಿಎಚ್ಎಫ್ಎಲ್’- ಸಾಲ ಸೌಲಭ್ಯ ಪಡೆಯಲು ಸರಳ ಸೇರ್ಪಡೆ ಪ್ರಕ್ರಿಯೆ, ತ್ವರಿತ ಸಾಲ ಮಂಜೂರಾತಿ ಹಾಗೂ ಸಾಲ  ನೀಡುವ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ  ಒದಗಿಸುತ್ತಿದ್ದು, ಗ್ರಾಹಕರಿಗೆ ಉತ್ತಮ ಅನುಭವ ನೀಡುವ ಗುರಿ ಹೊಂದಿದೆ.ಹೊಸ ಶಾಖೆಯ ಆರಂಭದ ಅಂಗವಾಗಿ ‘ಎಬಿಎಚ್ಎಫ್ಎಲ್’ ವಿಶೇಷ ಕೊಡುಗೆ  ನೀಡುತ್ತಿದೆ. ಇದೇ ಆಗಸ್ಟ್ 21ರಿಂದ ಆಗಸ್ಟ್ 31ರವರೆಗೆ  ಗ್ರಾಹಕರಿಗೆ ಶೂನ್ಯ ಲಾಗಿನ್ ಶುಲ್ಕ ಹಾಗೂ ₹ 50 ಲಕ್ಷದವರೆಗೆ ತಕ್ಷಣ ಸಾಲ ಮಂಜೂರಾತಿ  ಸೌಲಭ್ಯ ನೀಡಲಿದೆ. ಈ ಕೊಡುಗೆ ಬಳಸಿಕೊಂಡು ಗ್ರಾಹಕರು ತ್ವರಿತವಾಗಿ ಮತ್ತು ಹೆಚ್ಚು ಕೈಗೆಟುಕುವ ರೀತಿಯಲ್ಲಿ ಸಾಲ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ.


ವಹಿವಾಟು ಹಾಗೂ ಶಾಖೆ ವಿಸ್ತರಣೆಯ ಕುರಿತು ಮಾತನಾಡಿರುವ ಆದಿತ್ಯ ಬಿರ್ಲಾ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ  ಪಂಕಜ್ ಗಾಡ್ಗಿಲ್ ಅವರು, ‘ಕರ್ನಾಟಕವು ನಮಗೆ ಪ್ರಮುಖ ಬೆಳವಣಿಗೆಯ ಮಾರುಕಟ್ಟೆಯಾಗಿದೆ.  ಉತ್ತಮ ಬೇಡಿಕೆ ಮತ್ತು ಸ್ವಂತ ಮನೆ ಹೊಂದುವ ಜನರ ಹೆಚ್ಚುತ್ತಿರುವ ಆಸಕ್ತಿಯ ಹಿನ್ನೆಲೆಯಲ್ಲಿ, ಗ್ರಾಹಕರ ಜೊತೆಗಿನ ನಮ್ಮ ಒಡನಾಟವನ್ನು ಮತ್ತಷ್ಟು ಗಾಢಗೊಳಿಸಲು ಪ್ರಾದೇಶಿಕ ಮಟ್ಟದಲ್ಲಿ ನಮ್ಮ ಉಪಸ್ಥಿತಿಯನ್ನು ವಿಸ್ತರಿಸುತ್ತಿದ್ದೇವೆ. ಹೆಚ್ಚುತ್ತಿರುವ ನಮ್ಮ ವಿತರಣಾ ಜಾಲವನ್ನು ಸದೃಢ ಡಿಜಿಟಲ್ ಸಾಮರ್ಥ್ಯಗಳ ಜೊತೆಗೆ ಸಂಯೋಜಿಸುವ ಮೂಲಕ, ಗ್ರಾಹಕರ ಸ್ವಂತ ಮನೆ ಹೊಂದುವ ಕನಸಿನ ಪಯಣವನ್ನು ಹೆಚ್ಚು ಸರಳ, ತ್ವರಿತ ಮತ್ತು  ಅಡಚಣೆ ಮುಕ್ತಗೊಳಿಸುವುದು ನಮ್ಮ ಧ್ಯೇಯವಾಗಿದೆ” ಎಂದು ಹೇಳಿದ್ದಾರೆ.‘ಸಂತಸದ ಗೃಹ ಸಾಲ ಪಯಣ’- ಎಂಬ ತನ್ನ ಭರವಸೆಗೆ ಅನುಗುಣವಾಗಿ ‘ಎಬಿಎಚ್ಎಫ್ಎಲ್’ ಕೈಗೊಂಡಿರುವ ಈ ವಿಸ್ತರಣೆಯು ಗ್ರಾಹಕ ಕೇಂದ್ರಿತ ಸೇವೆ, ಹೊಣೆಗಾರಿಕೆಯ ಸಾಲ ವಿತರಣೆ ಮತ್ತು ಹಣಕಾಸು ಒಳಗೊಳ್ಳುವಿಕೆಗೆ ಸಂಸ್ಥೆ ನೀಡುತ್ತಿರುವ ನಿರಂತರ ಆದ್ಯತೆಯನ್ನು ಮತ್ತಷ್ಟು ಬಲಪಡಿಸುತ್ತದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top