ಬದುಕಿದು ಅನಿಶ್ಚಿತ...

Upayuktha
0


ಜೀವನವೆಂಬುದು ಒಂದು ಸುದೀರ್ಘ ಪಯಣ. ಈ ಬದುಕಿನ ಹಾದಿಯಲ್ಲಿ  ನಾವು ಹಲವು ಹಂತಗಳು, ಅನುಭವಗಳು ಮತ್ತು ಸವಾಲುಗಳನ್ನು ಎದುರಿಸುತ್ತಾ ಮುಂದೆ ಸಾಗುತ್ತೇವೆ. ಅದು‌ ಹುಟ್ಟು, ಬಾಲ್ಯ, ಯೌವನ, ವೃದ್ಧಾಪ್ಯ ಹೀಗೆ ಜೀವನದ ಪ್ರತಿಯೊಂದು ಘಟ್ಟವು  ಒಂದೊಂದು  ನಿಲ್ದಾಣಗಳಿದ್ದಂತೆ. ಪ್ರತಿಯೊಂದು ಘಟನೆಗಳು ನಮಗೆ ಹೊಸ ಅನುಭವಗಳು ನೀಡುತ್ತಾ ನವನವೀನ  ಪಾಠಗಳನ್ನು ಕಲಿಸುತ್ತದೆ.


ಜೀವನದುದ್ದದ ಮಾರ್ಗದಲ್ಲಿ  ಸುಖ-ದುಃಖ, ಏಳು-ಬೀಳುಗಳು ಸಹಜ. ಕೆಲವೊಮ್ಮೆ ಸಂತೋಷದ  ಸಂಗತಿಗಳಿಂದ  ನಕ್ಕರೆ, ಮತ್ತೊಮ್ಮೆ ದುಃಖವು ಹೇಳದೆ ಹಿಂಬಾಲಿಸಿ ದುಃಖಕ್ಕೆ ಕಾರಣವಾಗುತ್ತದೆ.   ಖುಷಿ ಬಂದಾಗ ಹಿಗ್ಗದೆ, ದುಃಖವಾದಾಗ ಕುಗ್ಗದೆ ಸದಾ ಶಾಂತಚಿತ್ತರಾಗಿರುವುದೆ ಬದುಕಿನ ಮೂಲಮಂತ್ರ. ಯಾವುದೂ ಶಾಶ್ವತವಲ್ಲ ಎಂದರಿತು ಕಾಲಚಕ್ರದೊಂದಿಗೆ  ಜೀವನದಲ್ಲಿ ನಿರಂತರವಾಗಿ ಸಾಗಬೇಕು. 


 ಪಯಣದಲ್ಲಿ  ಹಾದಿಯುದ್ದಕ್ಕೂ  ಅನೇಕ ಜನರನ್ನು ಭೇಟಿಯಾಗುತ್ತೇವೆ. ಕೆಲವರು ನಮ್ಮ ಬದುಕಿಗೆ ಸಂತೋಷ ಮತ್ತು ಪ್ರೇರಣೆಯನ್ನು ನೀಡಿದರೆ, ಇನ್ನು ಕೆಲವರು ಮೋಸ ವಂಚನೆಯಿಂದ ಜೀವನಕ್ಕೆ  ಅಮೂಲ್ಯ  ಪಾಠಗಳನ್ನು ಕಲಿಸುತ್ತಾರೆ. ಇನ್ನೂ ಕೆಲವು ಸಂಬಂಧಗಳು ಜೀವನಪೂರ್ತಿ ನಮ್ಮೊಂದಿಗೆ ಉಳಿಯುತ್ತವೆ, ಕೆಲವು  ಕಾಲಕ್ರಮೇಣ ದೂರವಾಗುತ್ತವೆ. ಆದರೆ ನೆನಪಿಡಬೇಕು  ಪ್ರತಿಯೊಬ್ಬ ವ್ಯಕ್ತಿಯೂ ನಮ್ಮ ಜೀವನ ಪಯಣದಲ್ಲಿ ಯಾವುದೋ ಒಂದು ರೀತಿಯಲ್ಲಿ ಸದಾ ನಮ್ಮೊಂದಿಗೆ  ಇರುವುದುಂಟು. ಜೀವನದಲ್ಲಿ ಎದುರಾಗುವ ಕಷ್ಟ-ಕಾರ್ಪಣ್ಯಗಳು‌  ನಮ್ಮನ್ನು ಕುಗ್ಗಿಸಬಾರದು  ಬದಲಾಗಿ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಸಮಸ್ಯೆಗಳಿಂದ  ಹೆದರುವ ಬದಲು ಧೈರ್ಯದಿಂದ ಎದುರಿಸಬೇಕು. ಸೋಲು ಎದುರಾದಾಗ ನಿರಾಶೆಯಾಗದೆ ಅದರಿಂದ ಪಾಠ ಕಲಿತು ಅದನ್ನೆ ಮೆಟ್ಟಿಲಾಗಿಸಕೊಳ್ಳಬೇಕು. ಯಾಕಂದ್ರೆ ಯಶಸ್ಸಿನ ದಾರಿಯಲ್ಲಿ ಸೋಲು ಮತ್ತು ಸವಾಲುಗಳು ಸಹ ಪ್ರಯಾಣಿಕರಿದ್ದಂತೆ.  ಜೀವನದಲ್ಲಾಗುವ ಕೇಲವು   ತಪ್ಪುಗಳಿಂದಲೂ ನಾವು ಕಲಿಯಬೇಕು. ಪುನಃ  ಅವುಗಳನ್ನು ಸರಿಪಡಿಸಿಕೊಳ್ಳುವುದು ನಿಜವಾದ ಬೆಳವಣಿಗೆ. ನಮ್ಮ ಪ್ರತಿಯೊಂದು ಆಲೋಚನೆ, ಮಾತು ಮತ್ತು ಕೃತ್ಯ ನಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಒಳ್ಳೆಯದನ್ನು ಯೋಚಿಸಿ, ಒಳ್ಳೆಯದನ್ನು ಮಾಡಿ, ಇತರರಿಗೆ ಉಪಕಾರವಾಗುವ ರೀತಿಯಲ್ಲಿ ಬದುಕಲು ಪ್ರಯತ್ನಿಸಬೇಕು.


ಜೀವನದ ಅಂತಿಮದಲ್ಲಿ  ನಾವು ಎಷ್ಟು ಸಂಪತ್ತು ಗಳಿಸಿದ್ದೇವೆ ಅಥವಾ ಎಷ್ಟು ಸಾಧನೆ ಮಾಡಿದ್ದೇವೆ ಎಂಬುದಕ್ಕಿಂತ, ನಾವು ಹೇಗೆ ಬದುಕಿದ್ದೇವೆ ಎಂಬುದೇ ಹೆಚ್ಚು ಮಹತ್ವದ್ದು. ನಮ್ಮಿಂದ ಇತರರಿಗೆ ಎಷ್ಟು ಸಂತೋಷ, ಸಹಾಯ ಮತ್ತು ಪ್ರೇರಣೆ ದೊರಕಿತು ಎಂಬುದೇ ನಮ್ಮ ಬದುಕಿನ ನಿಜವಾದ ಮೌಲ್ಯವನ್ನು ನಿರ್ಧರಿಸುತ್ತದೆ.


ಹೀಗಾಗಿ ಜೀವನವನದ  ಪಯಣವನ್ನು ಭಯದಿಂದಲ್ಲ, ಧೈರ್ಯದಿಂದ; ದ್ವೇಷದಿಂದಲ್ಲ, ಪ್ರೀತಿಯಿಂದ; ನಿರಾಶೆಯಿಂದಲ್ಲ, ಆಶಾವಾದದಿಂದ ಸಾಗಿಸಬೇಕು.


- ಸ್ವಾತಿ ಶಿವಲಿಂಗಪ್ಪ ಬುಳ್ಳಾ 

ಪತ್ರಿಕೋದ್ಯಮ ವಿಭಾಗ, ಬಸವೇಶ್ವರ ಕಲಾ‌ ಮಹಾವಿದ್ಯಾಲಯ,ಬಾಗಲಕೋಟೆ




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top