ಶಿಕ್ಷಕರು ನೀಡುವ ವಿದ್ಯಾದಾನಕ್ಕೆ ಬೆಲೆ ಕಟ್ಟಲಾಗದು: ಶಾಸಕ ಗುಡಗುಂಟಿ

Upayuktha
0

 



ಜಮಖಂಡಿ: ಶಿಕ್ಷಕರು ಮಕ್ಕಳಿಗೆ ನೀಡುವ ವಿದ್ಯಾದಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ದೇಶದ ಮುಂಚೂಣಿ ವ್ಯಕ್ತಿಗಳನ್ನು ರೂಪಿಸುವ ಶಿಕ್ಷಕರು ಮತ್ತು ಸಾಹಿತಿಗಳನ್ನು ಎತ್ತರದ ಸ್ಥಾನದಲ್ಲಿ ನೋಡಬೇಕು. ಶಿಕ್ಷಕರನ್ನು ಎಂದೂ ಏಕವಚನದಲ್ಲಿ ಸಂಬೋಧಿಸಬಾರದು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.


ಕನ್ನಡ ಸಾಹಿತ್ಯ ಪರಿಷತ್ತಿನ ಬಾಗಲಕೋಟೆ ಜಿಲ್ಲಾ, ಜಮಖಂಡಿ ತಾಲ್ಲೂಕು ಘಟಕಗಳು, ಸವದತ್ತಿಯ ಸಹೃದಯ ಸಾಹಿತ್ಯ ಪ್ರತಿಷ್ಠಾನ, ಸಾಹಿತ್ಯ ಸೌರಭ ವೇದಿಕೆ, ಬಸವ ಸಮಿತಿ ಹಾಗೂ ವೀರೇಶ್ವರ ಪ್ರಕಾಶನ ಜಮಖಂಡಿ ಇವುಗಳ ಆಶ್ರಯದಲ್ಲಿ ಇಲ್ಲಿನ ಬಸವ ಭವನದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ‘ಸೇವಾರತ್ನ’ ಪ್ರಶಸ್ತಿ ಪ್ರದಾನ ಹಾಗೂ ಡಾ.ಸಂಗಮೇಶ ಮಟೋಳಿ ವಿರಚಿತ ‘ಲೇಖನಗಳ ಸಂಚಯ’ ಕೃತಿ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಸವದತ್ತಿಯ ಸಹೃದಯ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ನಾಗೇಶ ಜೆ. ನಾಯಕ ಮುಖ್ಯ ಅತಿಥಿಯಾಗಿ ಮಾತನಾಡಿ, ಪ್ರಶಸ್ತಿಗಳು ಪ್ರಾಮಾಣಿಕರನ್ನು ಹುಡುಕಿಕೊಂಡು ಬರವುದು ಬಹಳ ಅಪರೂಪ. ಆದರೆ, ಅರ್ಜಿ ಆಹ್ವಾನಿಸದೆ ಪ್ರಾಮಾಣಿಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಸಂತಸದ ಸಂಗತಿ. ಪ್ರಶಸ್ತಿಗಳು ಹೆಗಲೇರಿದ ಮೇಲೆ ಶಿಕ್ಷಕರ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಮಕ್ಕಳಿಗೆ ಬೇಕಾಗುವ ಶಿಕ್ಷಕರಾಗಬೇಕು ಎಂದರು.


ಬೆಳಗಾವಿಯ ಆರ್‌ಪಿಡಿ ಕಾಲೇಜಿನ ಪ್ರಾಧ್ಯಾಪಕ ಡಾ.ಎಚ್.ಬಿ. ಕೋಲ್ಕಾರ ಕೃತಿ ಪರಿಚಯಿಸುತ್ತ ಮಾತನಾಡಿ, ಗ್ರಾಮೀಣ ನೆಲದ ಅಸ್ಮಿತೆ, ಸ್ಥಳೀಯ ಐತಿಹ್ಯಗಳು, ಸಾಧಕರ ಸಾಧನೆಗಳು ‘ಲೇಖನಗಳ ಸಂಚಯ’ ಕೃತಿಯ ಜೀವಾಳವಾಗಿವೆ ಎಂದರು.


ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕ ವೃತ್ತಿಯಲ್ಲಿ ನೈಪುಣ್ಯತೆ ಪಡೆದ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಬೆನ್ನುತಟ್ಟುವ ಕಾರ್ಯ ಶಿಕ್ಷಕರಲ್ಲಿ ಜೀವನೋತ್ಸಾಹ ತುಂಬಲು ಸಹಕಾರಿಯಾಗಿದೆ ಎಂದರು.


ಜಮಖಂಡಿ ಮತ್ತು ರಬಕವಿ-ಬನಹಟ್ಟಿ ತಾಲ್ಲೂಕುಗಳ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರು, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಹಾಗೂ ಪದವಿ ಕಾಲೇಜುಗಳ ಪ್ರಾಧ್ಯಾಪಕರು ಸೇರಿ ಒಟ್ಟು 64 ಜನ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.


ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಡೀ ಕಾರ್ಯಕ್ರಮದ ಪ್ರಾಯೋಜಕ, ನಿವೃತ್ತ ಪ್ರಾಚಾರ್ಯ ಡಾ.ಸಂಗಮೇಶ ಮಟೋಳಿ ಪೂರ್ವಪರ ನುಡಿ ಹಂಚಿಕೊಂಡರು. ಬಸವ ಸಮಿತಿ ಅಧ್ಯಕ್ಷ ಕಾಡು ಮಾಳಿ, ಕಸಾಪ ರಬಕವಿ-ಬನಹಟ್ಟಿ ತಾಲ್ಲೂಕು ಘಟಕದ ಅಧ್ಯಕ್ಷ ಮ.ಕೃ. ಮೇಗಾಡಿ, ಸವದತ್ತಿಯ ಸಹೃದಯ ಸಾಹಿತ್ಯ ಪ್ರತಿಷ್ಠಾನದ ಕಾರ್ಯದರ್ಶಿ ರಮೇಶ ತಳವಾರ ಇದ್ದರು.


ಮುಖ್ಯ ಶಿಕ್ಷಕ ಶಂಕರ ಲಮಾಣಿ ಪ್ರಾರ್ಥಿಸಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ತಳಕೇರಿ ಸ್ವಾಗತಿಸಿದರು. ಶಿಕ್ಷಕರಾದ ಪ್ರಭು ಹಿಡಕ, ಚಿದಾನಂದ ಜಡಿಮಠ ನಿರೂಪಿಸಿದರು. ಪ್ರಾಚಾರ್ಯೆ ಚಂದ್ರಕಲಾ ಜನಗೌಡ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top