ಪಾಣಾಜೆ ಸುಬೋಧ ಪ್ರೌಢಶಾಲೆಗೆ ಮಾರ್ನಿಂಗ್ ಸ್ಟಾರ್ ಕ್ರಿಕೆಟ್ ಕ್ಲಬ್ ವತಿಯಿಂದ ಕೊಡುಗೆ

Upayuktha
0

 

ಪಾಣಾಜೆ: ಪಾಣಾಜೆ ಸುಬೋಧ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸುಧೀರ್ ಎಸ್ ಪಿ ಅವರ ಮನವಿ ಮೇರೆಗೆ ಮಾರ್ನಿಂಗ್ ಸ್ಟಾರ್  ಕ್ರಿಕೆಟ್ ಕ್ಲಬ್ ಉರ್ವ ಮಂಗಳೂರು ಇದರ ಸದಸ್ಯರು ಆಗಮಿಸಿ ಶಾಲೆಗೆ ಬ್ಯಾಂಡ್ ಸೆಟ್, ಕ್ರಿಕೆಟ್ ಬ್ಯಾಟ್ 4, ಟೆನ್ನಿಸ್ ಬಾಲ್ ಎರಡು  ಬಾಕ್ಸ್, ವಿಕೆಟ್ 6 ವಾಲಿಬಾಲ್ ಹಾಗೂ ನೆಟ್ ನ್ನು ಕೊಡುಗೆಯಾಗಿ ನೀಡಿದರು.


ಕ್ಲಬ್ಬಿನ ಸದಸ್ಯರಾದ ದೀಪಕ್ ಮಣಿಪಾಲ, ತಾರಾನಾಥ ಭಂಡಾರಿ ಕೊಡಿಯಾಲಬೈಲ್, ಗಿರೀಶ್ ಪೈ ಮಂಗಳೂರು, ಸದಾಶಿವ ಮಂಗಳೂರು, ವಿಜಯ ಕಾಮತ್ ಮಂಗಳೂರು ಹಾಗೂ ರಾಕೇಶ್ ಮಂಗಳೂರು ಆಗಮಿಸಿದ್ದರು. ಕ್ಲಬ್ಬಿನ ಸದಸ್ಯರನ್ನು ಶಾಲು ಸ್ಮರಣಿಕೆ ನೀಡಿ ಗೌರವಿಸಲಾಯಿತು. 


ಸುಧೀರ್ ಎಸ್ ಪಿ ಸ್ವಾಗತಿಸಿ ವಂದಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಖಜಾಂಜಿ ಎ ಎನ್ ಕೊಳಂಬೆ, ಸದಸ್ಯರಾದ ಸದಾಶಿವ ಎಸ್ ವಿ ಮುಖ್ಯ ಶಿಕ್ಷಕಿ ನಿರ್ಮಲ ಕೆ, ಶಿಕ್ಷಕರು ಹಾಗೂ ಮಕ್ಕಳು ಹಾಜರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top