ಬೆಂಗಳೂರು: ನಗರದ ಬಸವನಗುಡಿಯಲ್ಲಿರುವ ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯದಲ್ಲಿ 2026-2027ರ ಶೈಕ್ಷಣಿಕ ವರ್ಷದ ‘ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘ’ದ ಉದ್ಘಾಟನಾ ಸಮಾರಂಭವನ್ನು ಆಗಸ್ಟ್ 11ರಂದು ಆಯೋಜಿಸಲಾಗಿದೆ.
ಬಿ.ಎಂ.ಎಸ್. ಶಿಕ್ಷಣ ದತ್ತಿಯ ಪ್ರಧಾನ ಪೋಷಕರು, ದಾನಿಗಳು ಹಾಗೂ ಅಧ್ಯಕ್ಷರಾದ ಡಾ. ಬಿ.ಎಸ್. ರಾಗಿಣಿ ನಾರಾಯಣ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ಜಾನಪದ ಗಾಯಕಿ ಹಾಗೂ ಕಲಾವಿದೆ ಸವಿತಕ್ಕ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ಬಿ.ಎಂ.ಎಸ್.ಇ.ಟಿ ಯ ಆಜೀವ ಸದಸ್ಯ ಹಾಗೂ ಅಧ್ಯಕ್ಷ ಡಾ. ಪಿ. ದಯಾನಂದ ಪೈ, ಬಿ.ಎಂ.ಎಸ್.ಇ.ಟಿ ಟ್ರಸ್ಟಿ ಹಾಗೂ ಬಿ.ಎಂ.ಎಸ್.ಸಿ.ಸಿ.ಎಂ.ನ ಅವಿರಾಮ್ ಶರ್ಮಾ, ಬಿ.ಎಂ.ಎಸ್.ಇ.ಟಿ ನಿರ್ದೇಶಕ ವಿಂಗ್ ಕಮಾಂಡರ್ ಆರ್.ಎ. ರಾಘವನ್ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ರಘುಕುಮಾರ ಎನ್ ಅವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


