ಕಲಾರಾಧನೆ ಮಾನವ ಜೀವನದ ಪ್ರಮುಖ ಅಂಗ: ವೇ.ಮೂ. ವಿಶ್ವಕುಮಾರ ಜೋಯಿಸರು

Upayuktha
0

 



ಮಂಗಳೂರು: "ಕಲೆ ಎನ್ನುವುದು ಪ್ರತಿಯೋರ್ವನ ಬದುಕಿನಲ್ಲೂ ಪಾತ್ರವಹಿಸುತ್ತದೆ. ತನ್ನೊಳಗಿನ ಅಭಿವ್ಯಕ್ತಿಯನ್ನು ಪ್ರಕಟಗೊಳಿಸಲು ಅವನಲ್ಲಿ ಅಡಕವಾಗಿರುವ ನೈಪುಣ್ಯತೆ ಸಹಕರಿಸುತ್ತದೆ. ಶಾಸ್ತ್ರದಲ್ಲೇ ಇದು ಉಲ್ಲೇಖವಾಗಿದೆ. ಹಾಗಾಗಿ, ಅದು ಶಾಸ್ತ್ರೀಯವೇ ಆದರೆ ಅದಕ್ಕೆ ಅಳಿವಿಲ್ಲ. ಅವಿನಾಶಿಯಾಗಿರುವ ಕಲೆಗಳು ನಮ್ಮನ್ನು ಸಮಾಜಕ್ಕೆ ಪರಿಚಯಿಸುತ್ತದೆ. ಕಲೆಗಳಿಗೆ ಸಾರ್ವಭೌಮತ್ವ ಇದೆ.ನಮ್ಮ ಜೀವನದಲ್ಲಿ  ಪ್ರಮುಖ ಅಂಗವಾಗಿರುವ ಯಕ್ಷಗಾನಕ್ಕೆ ನಮ್ಮೆಲ್ಲರ ಬೆಂಬಲವಿರಲಿ" ಎಂದು ವೇ.ಮೂ. ವಿಶ್ವಕುಮಾರ ಜೋಯಿಸರು ಹೇಳಿದರು.


ಅವರು ಕೋಡಿಕಲ್ ನ ಸರಯೂ ಹಿರಿಯ ಸಭಾಭವನದಲ್ಲಿ ಆಟಿಯ ಆಟದ ಕೂಟದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಂಗ್ರಕೂಳೂರಿನ ನಿಕಟಪೂರ್ವ ಮನಪಾ ಸದಸ್ಯ ಕಿರಣ್ ಕುಮಾರ್ ಕೋಡಿಕಲ್ ಶುಭಹಾರೈಸಿದರು.


ಹಿರಿಯರಾದ ಕೊಂಚಾಡಿ ರಾಮಚಂದ್ರ ಭಟ್, ಗಣೇಶ್ ಮಯ್ಯ, ಶ್ರೀಮತಿ ಜಯಶ್ರೀ ಎಂ, ಸುಹಾಸ್ ರಾವ್ ಅತಿಥಿಗಳಾಗಿದ್ದರು. ಯಕ್ಷ ಗುರು ವರ್ಕಾಡಿ ರವಿ ಅಲೆ ವೂರಾಯ ಸ್ವಾಗತಿಸಿದರು. ದೀಪಕ್ ಶರ್ಮಾ ವಂದಿಸಿದರು.


ಬಳಿಕ ಅಶೋಕ್ ಬಿ. ಎನ್, ವರ್ಕಾಡಿ ಗಣೇಶ್ ಮಯ್ಯ, ವರ್ಕಾಡಿ ಮಧುಸೂದನ ಅಲೆವೂರಾಯ, ಗೌರವ್ ರಾವ್ ಸಹಯೋಗದೊಂದಿಗೆ ಮಂಡೋದರಿ ಪರಿಣಯ ಎಂಬ ಬಯಲಾಟ ನಡೆಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top