ಮಣಿಪಾಲ: ಪ್ರಸಿದ್ಧ ಸಾಂಸ್ಕೃತಿಕ ಸಂಸ್ಥೆಯಾದ ಮಂಗಳ ಕಲಾ ಸಾಹಿತ್ಯ ವೇದಿಕೆ ಪರ್ಕಳ ಇದರ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಕೆಳ ಪರ್ಕಳದ ಗಣೇಶ್ ಕುಲಾಲ್ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಮುಂಬರುವ ವರ್ಷದ ಚಟುವಟಿಕೆಗಳನ್ನು ಮುನ್ನಡೆಸಲು ಪದಾಧಿಕಾರಿಗಳ ನೂತನ ತಂಡವನ್ನು ಕೂಡ ರಚಿಸಲಾಗಿದೆ.
ನೂತನ ಗೌರವಾಧ್ಯಕ್ಷರಾಗಿ ಪರ್ಕಳದ ಕೆ. ಪ್ರಕಾಶ್ ಶಣೈ ಹಾಗೂ ಕಾರ್ಯದರ್ಶಿಯಾಗಿ ಕಬ್ಯಾಡಿಯ ಸಂದೀಪ್ ನಾಯ್ಕ್ ಆಯ್ಕೆಯಾಗಿದ್ದಾರೆ. ಪರ್ಕಳದ ಮಂಜುನಾಥ ಉಪಾಧ್ಯ ಸಂಚಾಲಕರಾಗಿ, ಹಿರೇಬೆಟ್ಟುವಿನ ಗೋಪಿ ಸಹ ಸಂಚಾಲಕರಾಗಿ ಮತ್ತು ಸಣ್ಣಕ್ಕಿಬೆಟ್ಟುವಿನ ಗಣೇಶ್ ಕೋಶಾಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸಣ್ಣಕ್ಕಿಬೆಟ್ಟುವಿನ ಅನಂತ ರಾಮ ನಾಯಕ್ ಹಾಗೂ ರಾಜೇಶ್ ನಾಯಕ್ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಜೊತೆ ಕಾರ್ಯದರ್ಶಿಗಳಾಗಿ ನಗರಬೆಟ್ಟುವಿನ ಸುಧೀರ್ ಕುಮಾರ್, ಸಣ್ಣಕ್ಕಿಬೆಟ್ಟುವಿನ ಕೃಷ್ಣ ನಾಯಕ್ ಮತ್ತು ಕಬ್ಯಾಡಿಯ ಸುಧಾಕರ್ ನಾಯಕ್ ಆಯ್ಕೆಯಾಗಿದ್ದಾರೆ. ಸಂಘಟನಾ ಕಾರ್ಯದರ್ಶಿಗಳಾಗಿ ಸಣ್ಣಕ್ಕಿಬೆಟ್ಟುವಿನ ರಾಘವೇಂದ್ರ ನಾಯಕ್, ಕಬ್ಯಾಡಿಯ ಗುರುಪ್ರಸಾದ್ ಹಾಗೂ ನಡಿದಾರೆಯ ಬಸವರಾಜ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಆಲಂಬಿಯ ಉದಯ್ ಕುಮಾರ್, ಸಣ್ಣಕ್ಕಿಬೆಟ್ಟುವಿನ ಸಂತೋಷ್ ಕುಮಾರ್ ಹಾಗೂ ಚಕ್ರತೀರ್ಥದ ಶ್ರೀನಿವಾಸ್ ನಾಯಕ್ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಪೋಷಕರಾಗಿ ಶ್ರೀಧರ್ ಭಟ್ ನೆಲ್ಲಿಕಟ್ಟೆ ಹಿರೇಬೆಟ್ಟು, ಸರ್ವೋದಯ ಶೆಟ್ಟಿಗಾರ್ ಪರ್ಕಳ, ಮೋಹನ್ ದಾಸ್ ನಾಯಕ್ ಪರ್ಕಳ ಹಾಗೂ ಭುವನ ಪ್ರಸಾದ್ ಹೆಗ್ಡೆ ಮಣಿಪಾಲ ಆಯ್ಕೆಯಾಗಿದ್ದಾರೆ. ಗೌರವ ಸಲಹೆಗಾರರಾಗಿ ಶ್ರೀನಿವಾಸ ಉಪಾಧ್ಯ ಪರ್ಕಳ, ಅಶೋಕ್ ಸಣ್ಣಕ್ಕಿಬೆಟ್ಟು, ಮೌನೇಶ ಆಚಾರ್ಯ ಪರ್ಕಳ, ರವಿರಾಜ್ ಆಚಾರ್ಯ ಪರ್ಕಳ, ನಟರಾಜ್ ಪರ್ಕಳ ಮತ್ತು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ನೇಮಕಗೊಂಡಿದ್ದಾರೆ.
ಅಲ್ಲದೆ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರಾಘವೇಂದ್ರ ಪ್ರಭು ಮಾಣಿಬೆಟ್ಟು, ನಾಗರಾಜ್ ಪ್ರಭು, ರಾಜೇಶ್ವರ ಶೆಟ್ಟಿಗಾರ್, ಗಜೇಂದ್ರ ಆಚಾರ್ಯ ಬಾಳ್ಕಟ್ಟ, ಪ್ರಸಾದ್ ನಾಯಕ್ ಸಣ್ಣಕ್ಕಿಬೆಟ್ಟು ಹಾಗೂ ಸತೀಶ್ ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆ. ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕ್ಷೇತ್ರದಲ್ಲಿ ವೇದಿಕೆಯನ್ನು ಇನ್ನಷ್ಟು ಸಕ್ರಿಯವಾಗಿ ತೊಡಗಿಸಿಕೊಂಡು, ನೂತನ ಯೋಜನೆಗಳನ್ನು ಹಮ್ಮಿಕೊಳ್ಳುವುದಾಗಿ ನೂತನ ಪದಾಧಿಕಾರಿಗಳು ತಿಳಿಸಿದ್ದಾರೆ.


