ಆ.8-ಅಲೋಶಿಯನ್ ಫೆಸ್ಟ್ 2026: ಪಿಯು ವಿದ್ಯಾರ್ಥಿಗಳಿಗೆ ರಾಷ್ಟ್ರ ಮಟ್ಟದ ಉತ್ಸವ

Upayuktha
0

 



ಮಂಗಳೂರು: ಸಂತ ಅಲೋಶಿಯಸ್‌ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಒಂದು ದಿನದ ರಾಷ್ಟ್ರೀಯ ಮಟ್ಟದ ಪ್ರತಿಭಾ ಉತ್ಸವ ಅಲೋಶಿಯನ್ ಫೆಸ್ಟ್ 2026ರ ಉದ್ಘಾಟನಾ ಸಮಾರಂಭವನ್ನು ವಿವಿಯ ಎಲ್.ಎಫ್. ರಸ್ಕಿನ್ಹಾ ಸಭಾಂಗಣ (LCRI ಬ್ಲಾಕ್) ನಲ್ಲಿ ಶನಿವಾರ, ಆಗಸ್ಟ್ 8ರಂದು ಬೆಳಗ್ಗೆ 9 ಗಂಟೆಗೆ ಆಯೋಜಿಸಲಾಗಿದೆ.


ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಶರಣ್ ಚಿಲಿಂಬಿ ಈ ಉತ್ಸವದ ಉದ್ಘಾಟನೆಯನ್ನು ನಡೆಸಲಿದ್ದಾರೆ. ಗೌರವ ಅತಿಥಿಯಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ಬಾಲ ಕಲಾವಿದ ಅತೀಶ್ ಎಸ್. ಶೆಟ್ಟಿ ಆಗಮಿಸಲಿದ್ದಾರೆ. ವಿವಿಯ ಕುಲಪತಿ ವಂ. ಡಾ. ಪ್ರವೀಣ್‌ ಮಾರ್ಟೀಸ್‌ ಎಸ್.ಜೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.


ಈ ಉತ್ಸವವು ‘ಹಬ್ಬಗಳ ಹಬ್ಬ’ ಹಾಗೂ ’ಸಾಂಸ್ಕೃತಿಕ ಹಬ್ಬ’ ಎಂಬ ಎರಡು ವಿಭಾಗಗಳಲ್ಲಿ ಆಯೋಜಿಸಲಾಗುವುದು. ಜನರಲ್ ಕ್ವಿಜ್, ಚರ್ಚಾಸ್ಪರ್ಧೆ, ಮಾಕ್ ಪ್ರೆಸ್, ಪ್ರಾಡಕ್ಟ್ ಲಾಂಚ್, ಫ್ಯಾಷನ್ ಶೋ, ಸ್ಪೋರ್ಟ್ಸ್ ಕ್ವಿಜ್, ರೀಲ್ಸ್ ಮೇಕಿಂಗ್, ಫೋಟೋ ಮತ್ತು ವೀಡಿಯೋಗ್ರಫಿ, ಕೂಕಿಂಗ್ ವಿಥೌಟ್ ಫೈರ್. ವಾಣಿಜ್ಯ ವಿಭಾಗಕ್ಕೆ, ಮ್ಯಾನೇಜ್ಮೆಂಟ್ ರೊಡೀಸ್, ಬ್ಯುಸಿನೆಸ್ ಮ್ಯಾನೇಜರ್, ಬ್ಯುಸಿನೆಸ್ ಕ್ವಿಜ್, ಶಾರ್ಕ್ ಟ್ಯಾಂಕ್, ಬೆಸ್ಟ್ ಮ್ಯಾನೇಜ್ಮೆಂಟ್ ಟೀಂ, ಮಾರ್ಕೆಟಿಂಗ್, ಕಾರ್ಪೊರೇಟ್ ವಾಕ್. ವಿಜ್ಞಾನ ವಿಭಾಗದಲ್ಲಿ ಸೈನ್ಸ್ ರಂಗೋಲಿ, ದಿ ಸೈನ್ಸ್ ಸ್ಟ್ಯಾಂಡ್‌ಪಾಯಿಂಟ್, ಸೈನ್ಸ್ ಎಸ್ಕೇಪ್ ರೂಮ್, ಸಿನಾಪ್ಸ್ (ಸೈನ್ಸ್ ಕ್ವಿಜ್), ಸೈನ್ಸ್ ಎಕ್ಸಿಬಿಷನ್. ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಐಟಿ ಮ್ಯಾನೇಜರ್, ಕೋಡಿಂಗ್, ಗೇಮಿಂಗ್.  ‘ಸಾಂಸ್ಕೃತಿಕ ಹಬ್ಬ’ದಲ್ಲಿ 7 ಸ್ಪರ್ಧೆಗಳಿದ್ದು, ಭರತನಾಟ್ಯ, ಜಾನಪದ ಗೀತೆ (ಏಕತಾನ), ಮೆಹೆಂದಿ, ಟ್ರಾಶನ್, ಕಸದಿಂದ ರಸ (Wealth out of Waste), ಥೀಮ್ ಆಧಾರಿತ ಪ್ರದರ್ಶನ ಮತ್ತು ವಿಜ್ಞಾನ ಪ್ರದರ್ಶನವಿರಲಿದೆ


ಸಮಾರೋಪ ಸಮಾರಂಭವು ಅಪರಾಹ್ನ 3.30 ಗಂಟೆಗೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ರೋಹನ್ ಕಾರ್ಪೊರೇಷನ್ ನಿರ್ದೇಶಕ ಡಿಯೋನ್ ಮೊಂತೇರೊ ಆಗಮಿಸಲಿದ್ದಾರೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂತ ಅಲೋಶಿಯಸ್‌ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ವಂ. ಡಾ. ಪ್ರವೀಣ್‌ ಮಾರ್ಟೀಸ್‌ ಎಸ್.ಜೆ. ವಹಿಸಲಿದ್ದಾರೆ.


ಪ್ರತಿ ವೈಯಕ್ತಿಕ ವಿಭಾಗದ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಫಲಕದೊಂದಿಗೆ ಗೌರವಿಸಲಾಗುವುದು. ಅತ್ಯುತ್ತಮ ಪ್ರದರ್ಶನ ನೀಡಿದ ಕಾಲೇಜು ತಂಡಕ್ಕೆ 'ಸಮಗ್ರ ವಿಜೇತ (Overall Championship)' ಫಲಕ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 'ರನ್ನರ್ಸ್-ಅಪ್' ಫಲಕ ನೀಡಿ ಗೌರವಿಸಲಾಗುವುದು.


ಹೆಚ್ಚಿನ ಮಾಹಿತಿಗಾಗಿ ಸಂಚಾಲಕರನ್ನು ಸಂಪರ್ಕಿಸಬಹುದು. ಡಾ. ದಿನೇಶ್ ನಾಯಕ್ (9449255056),  ಡಾ. ಡೆಶೆಲ್ ಫೆರ್ನಾಂಡಿಸ್ (9591429603)


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top