ಎಸ್ ಡಿ ಎಂ ಪ.ಪೂ ಕಾಲೇಜಿನಲ್ಲಿ ಗುರುಪೂರ್ಣಿಮಾ ಕಾರ್ಯಕ್ರಮ

Upayuktha
0


' ಭಾರತೀಯ ಪರಂಪರೆಯಲ್ಲಿ ಪ್ರಾಚೀನ ಕಾಲದಿಂದಲೂ ಗುರುವಿಗೆ ವಿಶೇಷ ಸ್ಥಾನ ನೀಡಲಾಗಿದೆ. ತಂದೆ ತಾಯಿಯನ್ನು ಬಿಟ್ಟರೆ ಗುರುವಿಗೆ ಉನ್ನತ ಸ್ಥಾನ ನೀಡಲಾಗಿದೆ. ಹಿಂದೆ ಗುರುಶಿಷ್ಯ ಪರಂಪರೆಯ ಅವಿಚ್ಛಿನ್ನ ಪದ್ಧತಿ ಇತ್ತು. ಈಗ ಅದು ಇಲ್ಲದಿದ್ದರೂ ವಿದ್ಯಾರ್ಥಿಗಳು ಗುರುಗಳನ್ನು ಸ್ಮರಿಸುವ ಕೆಲಸ ಮಾಡಬೇಕು. 

ವೇದವ್ಯಾಸರನ್ನು ಭಾರತದ ಪ್ರಥಮ ಗುರುವೆಂದು ಗುರುಪೂರ್ಣಿಮಾ ದಿನದಂದು ಅವರನ್ನು ಸ್ಮರಿಸುವ ಕಾರ್ಯ ಸ್ತುತ್ಯರ್ಹ ' ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ. ಹೇಳಿದರು. 


ಇವರು ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಂ  ಆಯೋಜಿಸಿದ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ವೇದವ್ಯಾಸರ ಬಗ್ಗೆ ಭಿತ್ತಿಪತ್ರಿಕೆ ಅನಾವರಣಗೊಳಿಸಿ ಶುಭ ಹಾರೈಸಿದರು. ತದನಂತರ ಸಂಸ್ಕೃತ ಭಾಷಾ ವಿದ್ಯಾರ್ಥಿಗಳು ವಿವಿಧ ತರಗತಿಗಳಲ್ಲಿ ಗುರುಪೂರ್ಣಿಮಾದ ಮಹತ್ತ್ವ ಹಾಗೂ ವೇದವ್ಯಾಸರ ಬಗ್ಗೆ ಮಾಹಿತಿಗಳನ್ನು ನೀಡಿದರು ಹಾಗೆಯೇ ಎಲ್ಲ ಉಪನ್ಯಾಸಕರಿಗೆ ಶುಭಾಶಯ ಪತ್ರದೊಂದಿಗೆ ಶುಭಾಶಯ ಕೋರಿದರು. 


ಈ ಸಂದರ್ಭದಲ್ಲಿ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನಕುಮಾರ್ ಐತಾಳ್ ಹಾಗೂ ಸಂಸ್ಕೃತ ಸಂಘದ ಅಧ್ಯಕ್ಷೆ ಅಕ್ಷರ ,  ಪ್ರಧಾನ ಕಾರ್ಯದರ್ಶಿ ಸ್ಪೂರ್ತಿ , ಸಹ ಕಾರ್ಯದರ್ಶಿ ಟಿ.ಪಿ ಹಿತಾ, ಸಂಸ್ಕೃತ ಅಂತರಾಧ್ಯಯನ  ವೃತ್ತಂ ಇದರ ಸಂಯೋಜಕರಾದ ಕವನಾ ಸಿ ಜೈನ್ ಹಾಗೂ ಭೂಮಿಕಾ ಎಸ್.ಕೆ ಉಪಸ್ಥಿತರಿದ್ದರು. 


ವಿದ್ಯಾರ್ಥಿನಿ ಅಹಲ್ಯಾ ಬೆಂಡೆ ನಿರೂಪಿಸಿ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top