ರೋಟರಿ ಮೆಟ್ರೋದಿಂದ ಅಲಂಬನ ವೃದ್ಧಾಶ್ರಮಕ್ಕೆ ₹6.5 ಲಕ್ಷದ ನೆರವು

Upayuktha
0


ಮಂಗಳೂರು ರೋಟರಿ ಕ್ಲಬ್ ಮಂಗಳೂರು ಮೆಟ್ರೊ ಸಂಸ್ಥೆ ವತಿಯಿಂದ "ಚಿರಂತನ ಚ್ಯಾರಿಟೇಬಲ್ ಟ್ರಸ್ಟ್" ನಡೆಸುವ ವಿಟ್ಲ ವೃದ್ಧಾಶ್ರಮ ಆಲಂಬನಕ್ಕೆ 6.5 ಲಕ್ಷ ರೂಪಾಯಿ ಮೌಲ್ಯದ ವಿದ್ಯುತ್ ಸಾಮಾಗ್ರಿಗಳ ಕೊಡುಗೆಯನ್ನು  ಡಿಸ್ಟ್ರಿಕ್ಟ್ ಗವರ್ನರ್ ರೊಟೇರಿಯನ್ ಸತೀಶ್ ಬೋಳಾರ್ ಹಸ್ತಾಂತರಿಸಿದರು. 


ರೋಟರಿ ಕ್ಲಬ್ ಮಂಗಳೂರು ಮೆಟ್ರೋ ಅಧ್ಯಕ್ಷ ರೋಟೆರಿಯನ್ ಶ್ಯಾಮ್ ಪ್ರಕಾಶ್ ರೊಟೇರಿಯನ್ ಗಳಾದ ಸಹಾಯಕ ಗವರ್ನರ್ ಡಾ. ಅರವಿಂದ್ ಪಿ.,  ಮಾಜಿ ಜಿಲ್ಲಾ ಗವರ್ನರ್ ಪಿ. ರಂಗನಾಥ್ ಭಟ್, ಕಾರ್ಯದರ್ಶಿ ರೊಟೇರಿಯನ್ ನರೇಂದ್ರ ಪ್ರಭು ಜೊತೆಯಾದರು. 


ಮಾಜಿ ಜಿಲ್ಲಾ ಗವರ್ನರ್ ಪಿ. ರಂಗನಾಥ್ ಭಟ್  ತನ್ನ ಕ್ಲಬ್ ನ ಪರವಾಗಿ ರುಪಾಯಿ ಒಂದು ಲಕ್ಷದ ದೇಣಿಗೆಯನ್ನು ನೀಡಿದರು. ರೋಟರಿ ಕ್ಲಬ್ ವಿಟ್ಲದ ಅಧ್ಯಕ್ಷರಾದ ರೊಟೇರಿಯನ್ ಕ್ಯಾಪ್ಟನ್ ದಾಸಪ್ಪ ಪೂಜಾರಿ,  ಕಾರ್ಯದರ್ಶಿ ರೊಟೇರಿಯನ್ ಕ್ಲಿಫರ್ಡ್ ವೇಗಸ್ ಭಾಗಿಯಾದರು. ರೋಟರಿ ಕ್ಲಬ್   ಮಂಗಳೂರು ಮೆಟ್ರೊ ಹಾಗೂ ರೋಟರಿ ಕ್ಲಬ್ ವಿಟ್ಲದ ಹಲವು ಸದಸ್ಯರುಗಳು ಹಾಗೂ ಬಂಟ್ವಾಳದ ರೊಟೇರಿಯನ್ ರಿತೇಶ್ ಬಾಳಿಗ ಉಪಸ್ಥಿತರಿದ್ದರು .


ಚಿರಂತನದ ಆಡಳಿತ ಟ್ರಸ್ಟೀ  ಭಾರಾವಿ ದೇರಾಜೆ  ಸಂಸ್ಥೆ ನಡೆದು ಬಂದ ದಾರಿಯನ್ನು ತಿಳಿಸುತ್ತಾ ಪ್ರಸ್ತುತ ಸಾಲಿನಲ್ಲಿನ ರೋಟರಿ ಕ್ಲಬ್ ಬೆಳ್ತಂಗಡಿಯ  ಡಾ. ಗೋವಿಂದ ಕಿಶೋರ್ ಅವರ ದೇಣಿಗೆ,  ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ನ  ಕಾರ್ಯದರ್ಶಿ ಜಗನ್ನಾತ್ ಅರಿಯಡ್ಕ  ಇವರ ರೇಖಾಚಿತ್ರಗಳ ಕೊಡುಗೆಯನ್ನು  ಸ್ಮರಿಸಿ,  ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top