ಎಐ ಚಿತ್ರ
ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ದೇವಸ್ಥಾನದಷ್ಟೇ ಪವಿತ್ರವಾದ ಮತ್ತು ದೇವರ ಸ್ಥಾನವನ್ನು ನೀಡಲಾಗಿದೆ. "ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ" ಎನ್ನುವಂತೆ ಬದುಕನ್ನು ರೂಪಿಸುವ ಪ್ರತಿಯೊಬ್ಬರೂ ಗುರುಗಳೇ.
ನನ್ನ ಜೀವನದ ಗುರುಗಳನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಇಂದು ನಾನು ಈ ರೀತಿಯಲ್ಲಿ ಇರಬೇಕಾದರೆ ಅದಕ್ಕೆಲ್ಲವೂ ಕಾರಣ ನಮ್ಮ ಗುರುಗಳ ಮಾರ್ಗದರ್ಶನ ಪ್ರೋತ್ಸಾಹ ಮುಂದೆಯೂ ಅವರೆಲ್ಲರ ಸಲಹೆ ಸಹಕಾರ ನನ್ನ ಜೀವನಕ್ಕೆ ನಿರಂತರವಾಗಿ ಬೇಕಾಗಿದೆ.
ಮೊದಲಾಗಿ ನನ್ನ ಜೀವನದ ಅಕ್ಷರವನ್ನು ಕಲಿಸಿದ ಗುರು ವಸಂತ ರಾಯ ನಾಯಕ್. ಕರ್ವಾಲು ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರು ಬದುಕಿನಲ್ಲಿ ಕಷ್ಟವಿದ್ದರೂ ಅದನ್ನು ಲೆಕ್ಕಿಸದೆ ನೀನು ಮುಂದೆ ಉತ್ತಮವಾಗಿ ಓದಬೇಕು ಸಮಾಜಕ್ಕೆ ಉತ್ತಮ ಪ್ರಜೆಯಾಗಿ ಇರಬೇಕು ಎಂಬುದನ್ನು ಹೇಳಿದ ನನ್ನ ಪ್ರಾಥಮಿಕ ಶಾಲೆಯ ಗುರು ವಸಂತ್ ಸರ್ ಅವರ ಪಾಠ ಇಂದೂ ಕೂಡ ಮರೆಯಲು ಸಾಧ್ಯವಿಲ್ಲ. ಆಟ ಪಾಠದೊಂದಿಗೆ ಜೀವನದ ಪಾಠವನ್ನು ಕಲಿಸಿದ ಇವರು ನನ್ನ ಬದುಕಿನ ಸೂಪರ್ ಹೀರೋ. ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.
ನನ್ನ ಹೈಸ್ಕೂಲ್ ಶಿಕ್ಷಣದ ಗುರು ಹೆಲೆನ್ ಸಾಲಿನ್ಸ್ ಟೀಚರ್ ಸುಮಾರು 46 ವರ್ಷಗಳಿಂದ ಆಧ್ಯಾಪನವೃತ್ತಿಯಲ್ಲಿರುವ ಇವರು ನನ್ನನ್ನು ಯಾವತ್ತೂ ಕೂಡ ವಿದ್ಯಾರ್ಥಿಯಂತೆ ನೋಡಿಲ್ಲ ಸ್ವಂತ ಮಗನ ರೀತಿಯಲ್ಲಿ ನೋಡಿದವರು ಇಂದು ಕೂಡ ಸಿಕ್ಕಾಗ ಮಗ ಹೇಗಿದ್ದೀಯಾ ಎಂದು ಕೇಳುವುದನ್ನು ಮರೆಯೋದಿಲ್ಲ, ಟೀಚರ್ ಅವರ ಗುಣ ಬಹಳ ಪ್ರಾಮುಖ್ಯವಾಗಿ ಪರೋಪಕಾರ ಕಷ್ಟದಲ್ಲಿರುವವರಿಗೆ ಸಹಾಯ ಉತ್ತಮ ಮಾರ್ಗದರ್ಶನ ಈ ಗುಣಗಳನ್ನು ನಾನು ಕೂಡ ಬದುಕಿನಲ್ಲಿ ರೂಡಿಸಿಕೊಳ್ಳಲು ಟೀಚರೇ ಕಾರಣ ಇಂತಹ ಅದ್ಭುತ ವ್ಯಕ್ತಿತ್ವದ ಟೀಚರ್ ನನ್ನ ರೋಲ್ ಮಾಡಲು ಕೂಡ ಹೌದು.
ಈ ಇಬ್ಬರು ಗುರುಗಳು ನನ್ನ ಶಿಕ್ಷಣದ ಗುರುಗಳಾದರೆ, ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಈಶ್ವರ ಗುರೂಜಿ ನನ್ನ ಆಧ್ಯಾತ್ಮ ಮತ್ತು ಸಮಾಜ ಸೇವೆಯಲ್ಲಿ ಸಣ್ಣ ಅಳಿಲು ಸೇವೆ ಮಾಡಲು ನಿರಂತರವಾಗಿ ಮಾರ್ಗದರ್ಶನ ಮಾಡುತ್ತಿರುವವರು. ಬದುಕಿನಲ್ಲಿ ಏನಾದರೂ ಸಾಧನೆ ಮಾಡಬೇಕು ಈ ಸಾಧನೆ ಹಂತಗಳಲ್ಲಿ ನೂರಾರು ಕಷ್ಟಗಳು ಬಂದೇ ಬರುತ್ತವೆ ಆ ಕಷ್ಟಗಳಿಗೆ ಹೆದರವೇ ಗುರಿ ನಮ್ಮ ಮುಂದೆ ಇದ್ದಾಗ ಖಂಡಿತವಾಗಿ ಅದನ್ನು ತಲುಪಲು ಸಾಧ್ಯ ಎಂಬುದನ್ನು ನಿರಂತರವಾಗಿ ಹೇಳುವ ಗುರೂಜಿಯವರು ನನ್ನ ಜೀವನದ ಉತ್ತಮ ಮಾರ್ಗದರ್ಶಕರು.
ನಾನು ಇಂದು ಜೀವನದಲ್ಲಿ ದೃಢವಾಗಿ ನಿಲ್ಲಲು ನಮ್ಮ ಕುಟುಂಬಕ್ಕೆ ಆಧಾರ ಸ್ತಂಭವಾಗಿರುವ ನನ್ನ ಉದ್ಯೋಗದ ಗುರು ರವಿರಾಜ್ ಹೆಚ್. ಪಿ ಸರ್ ಮುಳುಗುತ್ತಿರುವ ವ್ಯಕ್ತಿಗೆ ಒಂದು ಹುಲ್ಲು ಕಡ್ಡಿಯು ಆಸರೆಯಾಗಬಲ್ಲದು ಎಂಬ ಮಾತಿನಂತೆ ಔದ್ಯೋಗಿಕ ಜೀವನದಲ್ಲಿ ತೊಂದರೆಗಳಾದಾಗ ಏನು ಹೆದರಬೇಡ ನಾನಿದ್ದೇನೆ ಎಂಬುದನ್ನು ಕೇವಲ ಮಾತಿನಲ್ಲಿ ಹೇಳದೆ, ಅದನ್ನು ಪಾಲನೆ ಮಾಡಿ ಬಂದವರು ಅವರು ನಾನು ಇಂದು ಉತ್ತಮ ರೀತಿಯಲ್ಲಿ ಜೀವನ ಸಾಗಿಸಲು ಕಾರಣಕರ್ತರು ಇವರು.
ಬದುಕಿನಲ್ಲಿ ಉದ್ಯೋಗಿಕ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕು. ನಮಗೆ ಕೆಲಸವೇ ದೇವರು ಕೆಲಸದಲ್ಲಿ ನಿತ್ಯ ದೇವರನ್ನು ಕಾಣಬೇಕು ಎಂಬ ಅವರ ಈ ಮಾತು ನನ್ನಜೀವನದ ಉದ್ದೇಶವಾಗಿದೆ. ಇವರಲ್ಲಿರುವ ನಾಯಕತ್ವ ಗುಣಗಳು ಎಲ್ಲರನ್ನೂ ಒಟ್ಟಾಗಿ ಯಾವ ನೋವನ್ನು ಕೊಡದೆ ತೆಗೆದುಕೊಂಡು ಹೋಗುವ ರೀತಿ, ಸಂಘಟನಾ ಶಕ್ತಿ ನನಗೆ ಮಾದರಿ. ಕೇವಲ ಕಲೆ ಸಾಹಿತ್ಯ ಸಂಘಟನೆ ಕ್ಷೇತ್ರ ಮಾತ್ರ ಅಲ್ಲದೆ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆದವರು ಇವರು. ನನ್ನ ಪಾಲಿನ ನಿಜವಾದ ದೇವರೇ ಇವರಾಗಿದ್ದಾರೆ. ಇವರ ಬಗ್ಗೆ ಬರೆಯುತ್ತಾ ಹೋದರೆ ಶಬ್ದಗಳೇ ಸಾಲದು. ಭಾವನೆಗಳು ಒಂದಾದಾಗ ಮೌನ ಆವರಿಸುತ್ತದೆ ಅದೇ ರೀತಿ ನನ್ನ ಸ್ಥಿತಿಯಾಗಿದೆ...
ಈ ಗುರುಗಳ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ಅವರಿಗೆ ಉತ್ತಮ ಆರೋಗ್ಯ ಭಾಗ್ಯವನ್ನು ಭಗವಂತ ನೀಡಲಿ ಎಂದಷ್ಟೇ ನನ್ನ ಪ್ರಾರ್ಥನೆ.
ಈ ಗುರುಪೂರ್ಣಿಮೆಯ ಪವಿತ್ರವಾದ ದಿನದಲ್ಲಿ ನನ್ನೆಲ್ಲ ಗುರುಗಳಿಗೆ ಅದೇ ರೀತಿ ಮಾರ್ಗದರ್ಶಕರಿಗೆ ಭಕ್ತಿ ಪೂರ್ವಕ ನಮನ ಸಲ್ಲಿಸುತ್ತಿದ್ದೇನೆ.
ಗುರು ಕೃಪೆಯುಳ್ಳವನಿಗೆ ಕಷ್ಟಗಳಿಲ್ಲ,ಗುರು ತೋರಿದ ದಾರಿಯಲ್ಲಿ ನಡೆದರೆ ಭವಬಾಧೆಯಿಲ್ಲ. ಕಪಿಲಸಿದ್ಧ ಮಲ್ಲಿಕಾರ್ಜುನಾ, ಗುರುವಿನ ಪಾದವೇ ಪರಮಗತಿ." ನಮ್ಮ ಸಿದ್ದರಾಮರ ವಚನದಂತೆ ಎಲ್ಲಾ ಗುರುಗಳಿಗೆ ಶರಣು.
- ರಾಘವೇಂದ್ರ ಪ್ರಭು ಕರ್ವಾಲು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

