ಕಾಮನ್‌ವೆಲ್ತ್ ಗೇಮ್ಸ್ 2026: ಪದಕ ಬೇಟೆಗಾಗಿ ಕಣಕ್ಕಿಳಿಯಲಿದ್ದಾರೆ ಭಾರತದ ಟಾಪ್ ಬಾಕ್ಸರ್‌ಗಳು!

Upayuktha
0



ಬೆಂಗಳೂರು, 24 ಜುಲೈ 2026: ಭಾರತೀಯ ಬಾಕ್ಸಿಂಗ್ ತಂಡವು ಕಾಮನ್‌ವೆಲ್ತ್ ಗೇಮ್ಸ್ ಅಭಿಯಾನವನ್ನು ಅತ್ಯಂತ ಉತ್ಸಾಹದಿಂದ ಆರಂಭಿಸಿದೆ. ಮಹಿಳೆಯರ 75 ಕೆ.ಜಿ ವಿಭಾಗದಲ್ಲಿ ಸೆಮಿಫೈನಲ್‌ಗೆ ಪ್ರವೇಶ ಪಡೆದಿರುವ ಲವ್ಲಿನಾ ಬೊರ್ಗೊಹೈನ್ ಈಗಾಗಲೇ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ. ಜೊತೆಗೆ, ಸದ್ಯ ಎಲ್ಲರ ಗಮನವು IIS (ಜಿಂದಾಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್) ಬೆಂಬಲಿತ ಬಾಕ್ಸರ್‌ಗಳಾದ ಸಚಿನ್ ಸಿವಾಚ್, ಪ್ರೀತಿ ಪವಾರ್ ಮತ್ತು ಕಪಿಲ್ ಪೋಖರಿಯಾ ಅವರ ಮೇಲಿದೆ.


ಸಚಿನ್ ಸಿವಾಚ್ (ಪುರುಷರ 60 ಕೆ.ಜಿ ವಿಭಾಗ)


ಜುಲೈ 25 ರಂದು ತಮ್ಮ ಅಭಿಯಾನ ಆರಂಭಿಸಲಿರುವ ಸಚಿನ್ ಸಿವಾಚ್, ಐಐಎಸ್ (IIS) ತಂಡದಿಂದ ಮೊದಲು ಕಣಕ್ಕಿಳಿಯಲಿದ್ದಾರೆ. 26 ವರ್ಷದ ಸಚಿನ್ ಭಾರತದ ಅತ್ಯುತ್ತಮ ಬಾಕ್ಸರ್‌ಗಳಲ್ಲಿ ಒಬ್ಬರು. ಇವರು 2025ರ ವಿಶ್ವ ಬಾಕ್ಸಿಂಗ್ ಕಪ್ ಫೈನಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪುರುಷ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವರ್ಷ ಸ್ಪೇನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಚಿನ್ನದ ಪದಕ ಹಾಗೂ 2026ರ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿಯ ಪದಕ ಗೆದ್ದು ಅತ್ಯುತ್ತಮ ಫಾರ್ಮ್‌ನೊಂದಿಗೆ ಗ್ಲಾಸ್ಗೋಗೆ ಬಂದಿದ್ದಾರೆ. 


ಪ್ರೀತಿ ಪವಾರ್ (ಮಹಿಳೆಯರ 54 ಕೆ.ಜಿ ವಿಭಾಗ)


ಪ್ಯಾರಿಸ್ ಒಲಿಂಪಿಯನ್ ಪ್ರೀತಿ ಪವಾರ್, ಮೊದಲ ಸುತ್ತಿನಲ್ಲಿ 'ಬೈ' (ನೇರ ಪ್ರವೇಶ) ಪಡೆದ ನಂತರ ಮಹಿಳೆಯರ 54 ಕೆಜಿ ವಿಭಾಗದ ತಮ್ಮ ಅಭಿಯಾನವನ್ನು 'ರೌಂಡ್ ಆಫ್ 16' ಹಂತದಿಂದ ಆರಂಭಿಸಲಿದ್ದಾರೆ. 22 ವರ್ಷದ ಪ್ರೀತಿ ಪವಾರ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇವರು 2026ರ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಮೂರು ಬಾರಿಯ ವಿಶ್ವ ಚಾಂಪಿಯನ್ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಈ ವರ್ಷ ನಡೆದ ವಿಶ್ವ ಬಾಕ್ಸಿಂಗ್ ಕಪ್ ಫೈನಲ್ಸ್ ಮತ್ತು EUBC ಗೋಲ್ಡ್ ಗ್ರಾಂಡ್ ಪ್ರಿಕ್ಸ್‌ನಲ್ಲೂ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 


ಕಪಿಲ್ ಪೋಖರಿಯಾ (ಪುರುಷರ 90 ಕೆ.ಜಿ ವಿಭಾಗ)


ಕಪಿಲ್ ಪೋಖರಿಯಾ ಕೂಡ ಪುರುಷರ 90 ಕೆ.ಜಿ ವಿಭಾಗದ 'ರೌಂಡ್ ಆಫ್ 16'  ಹಂತದಿಂದ ತಮ್ಮ ಕಾಮನ್‌ವೆಲ್ತ್ ಗೇಮ್ಸ್ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ. ಐಐಎಸ್ (IIS) ಬೆಂಬಲಿತ ಈ ಹೆವಿವೇಟ್ ಬಾಕ್ಸರ್ ಈ ವಿಭಾಗದಲ್ಲಿ ಭಾರತದ ಪ್ರಮುಖ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಗ್ರಾಂಡ್ ಪ್ರಿಕ್ಸ್ ಉಸ್ತಿ ನಾಡ್ ಲ್ಯಾಬೆಮ್‌ನಲ್ಲಿ ಬೆಳ್ಳಿ ಪದಕ ಹಾಗೂ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವರ್ಷ ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ ಎರಡೂ ದೊಡ್ಡ ಕೂಟಗಳಿಗೆ ಆಯ್ಕೆಯಾಗಿರುವ ಕಪಿಲ್, ಗ್ಲಾಸ್ಗೋದಲ್ಲಿ ಉತ್ತಮ ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ. 


ಕಾಮನ್‌ವೆಲ್ತ್ ಗೇಮ್ಸ್ ಬಾಕ್ಸಿಂಗ್ ವೇಳಾಪಟ್ಟಿಯ ಪ್ರಕಾರ, ಭಾರತೀಯ ಕ್ರೀಡಾಪಟುಗಳ ಪಂದ್ಯಗಳ ವಿವರ ಹೀಗಿದೆ:


ಶನಿವಾರ, 25 ಜುಲೈ 2026:

* ಮಧ್ಯಾಹ್ನ 4:00 IST (ಗ್ಲಾಸ್ಗೋ ಸಮಯ ಬೆಳಿಗ್ಗೆ 11:30): ಸಚಿನ್ ಸಿವಾಚ್ ಅವರು ಪುರುಷರ ಲೈಟ್‌ವೇಟ್ 60 ಕೆ.ಜಿ ವಿಭಾಗದ ರೌಂಡ್ ಆಫ್ 32 ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.


ಭಾನುವಾರ, 26 ಜುಲೈ 2026:

* ರಾತ್ರಿ 10:45 IST (ಗ್ಲಾಸ್ಗೋ ಸಮಯ ಸಂಜೆ 6:15): ಪ್ರೀತಿ ಪವಾರ್ ಅವರು ಮಹಿಳೆಯರ ಬ್ಯಾಂಟಮ್‌ವೇಟ್ 54 ಕೆ.ಜಿ ವಿಭಾಗದ ರೌಂಡ್ ಆಫ್ 16 ಪಂದ್ಯದಲ್ಲಿ ಸೆಣೆಸಲಿದ್ದಾರೆ.


ಸೋಮವಾರ, 27 ಜುಲೈ 2026:

* ಮಧ್ಯಾಹ್ನ 3:30 ರಿಂದ 5:00 IST (ಗ್ಲಾಸ್ಗೋ ಸಮಯ ಬೆಳಿಗ್ಗೆ 11:00 - 12:30) ಮತ್ತು ರಾತ್ರಿ 11:15 ರಿಂದ 12:00 IST (ಗ್ಲಾಸ್ಗೋ ಸಮಯ ಸಂಜೆ 6:45 - 7:30): ಸಚಿನ್ ಸಿವಾಚ್ ಅವರು ರೌಂಡ್ ಆಫ್ 16 ರ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ.


ಮಂಗಳವಾರ, 28 ಜುಲೈ 2026:

* ಸಂಜೆ 4:30 ರಿಂದ ರಾತ್ರಿ 8:00 IST (ಗ್ಲಾಸ್ಗೋ ಸಮಯ ಮಧ್ಯಾಹ್ನ 12:00 - 12:30): ಪ್ರೀತಿ ಅವರು ಕ್ವಾರ್ಟರ್ ಫೈನಲ್ ಆಡಲಿದ್ದಾರೆ.

* ರಾತ್ರಿ 10:30 ರಿಂದ ಬೆಳಿಗ್ಗೆ 2:00 IST (ಗ್ಲಾಸ್ಗೋ ಸಮಯ ಸಂಜೆ 6:00 - ರಾತ್ರಿ 9:30): ಕಪಿಲ್ ಪೋಖರಿಯಾ ಮತ್ತು ಪ್ರೀತಿ ಅವರ ಕ್ವಾರ್ಟರ್ ಫೈನಲ್ ಮುಂದುವರಿದ ಭಾಗದ ಪಂದ್ಯಗಳು ನಡೆಯಲಿವೆ.



ಬುಧವಾರ, 29 ಜುಲೈ 2026:

ಸಂಜೆ 6:00 ರಿಂದ 7:30 IST (ಗ್ಲಾಸ್ಗೋ ಸಮಯ ಮಧ್ಯಾಹ್ನ 1:30 - 2:00 ಹಾಗೂ ಸಂಜೆ 7:30 - 6:00): ಸಚಿನ್ ಸಿವಾಚ್ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಸೆಣೆಸಲಿದ್ದಾರೆ.


ಶುಕ್ರವಾರ, 31 ಜುಲೈ 2026:

* ಮಧ್ಯಾಹ್ನ 3:00 ರಿಂದ 5:00 IST (ಗ್ಲಾಸ್ಗೋ ಸಮಯ ಬೆಳಿಗ್ಗೆ 10:30 - 11:00): ಪ್ರೀತಿ ಸೆಮಿಫೈನಲ್ ಆಡಲಿದ್ದಾರೆ.

* ರಾತ್ರಿ 9:00 ರಿಂದ 9:30 IST (ಗ್ಲಾಸ್ಗೋ ಸಮಯ ಸಂಜೆ 4:30 - 5:00): ಕಪಿಲ್ ಪೋಖರಿಯಾ ಪುರುಷರ ಹೆವಿವೇಟ್ 90 ಕೆ.ಜಿ ಸೆಮಿಫೈನಲ್ ಕಣಕ್ಕಿಳಿಯಲಿದ್ದಾರೆ.

* ರಾತ್ರಿ 1:00 ರಿಂದ 1:30 IST (ಗ್ಲಾಸ್ಗೋ ಸಮಯ ರಾತ್ರಿ 8:30 - 9:00): ಸಚಿನ್ ಸಿವಾಚ್ ಸೆಮಿಫೈನಲ್ ಪಂದ್ಯವನ್ನು ಆಡಲಿದ್ದಾರೆ.


ಶನಿವಾರ, 1 ಆಗಸ್ಟ್ 2026: 

* ಮಧ್ಯಾಹ್ನ 3:30 IST (ಗ್ಲಾಸ್ಗೋ ಸಮಯ ಬೆಳಿಗ್ಗೆ 11:00): ಪ್ರೀತಿ ಮಹಿಳೆಯರ ಬ್ಯಾಂಟಮ್‌ವೇಟ್ ಫೈನಲ್ ಹಾಗೂ ಪದಕ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

* ಸಂಜೆ 5:00 IST (ಗ್ಲಾಸ್ಗೋ ಸಮಯ ಮಧ್ಯಾಹ್ನ 12:30): ಕಪಿಲ್ ಪೋಖರಿಯಾ ಪುರುಷರ ಹೆವಿವೇಟ್ ಫೈನಲ್ ಹಾಗೂ ಪದಕ ಪ್ರದಾನ ಸಮಾರಂಭದಲ್ಲಿ ಸೆಣೆಸಲಿದ್ದಾರೆ.

* ರಾತ್ರಿ 10:00 IST (ಗ್ಲಾಸ್ಗೋ ಸಮಯ ಸಂಜೆ 5:30): ಸಚಿನ್ ಸಿವಾಚ್ ಅವರು ತಮ್ಮ ಫೈನಲ್ ಮತ್ತು ಪದಕ ಪ್ರದಾನ ಸಮಾರಂಭದೊಂದಿಗೆ ಅಭಿಯಾನವನ್ನು ಮುಗಿಸಲಿದ್ದಾರೆ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top