ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಏವಿಯೇಷನ್ ಸ್ಟಡೀಸ್ ವತಿಯಿಂದ ಜುಲೈ 21 ಮತ್ತು 22ರಂದು 'ವಿವಾದ್-2026' ಚರ್ಚಾ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಬಿಬಿಎ ಏವಿಯೇಷನ್ ಮ್ಯಾನೇಜ್‌ಮೆಂಟ್ ಹಾಗೂ ಬಿಬಿಎ ಏವಿಯೇಷನ್ ಅಂಡ್ ಲಾಜಿಸ್ಟಿಕ್ಸ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗಾಗಿ ನಡೆದ ಈ ಸ್ಪರ್ಧೆಯು ಸಂವಹನ ಕೌಶಲ್ಯ, ವಿಮರ್ಶಾತ್ಮಕ ಚಿಂತನೆ, ವಿಶ್ಲೇಷಣಾತ್ಮಕ ಸಾಮರ್ಥ್ಯ, ಆತ್ಮವಿಶ್ವಾಸ ಹಾಗೂ ತಮ್ಮ ಅಭಿಪ್ರಾಯಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುವ ಸಾಮರ್ಥ್ಯವನ್ನು ಬೆಳೆಸುವ ಉದ್ದೇಶ ಹೊಂದಿತ್ತು.
ಪ್ರಥಮ ವರ್ಷದ ಬಿಬಿಎ ಏವಿಯೇಷನ್ ಅಂಡ್ ಲಾಜಿಸ್ಟಿಕ್ಸ್ ಮ್ಯಾನೇಜ್‌ಮೆಂಟ್ ವಿಭಾಗದ ಜೊನಾಥನ್ ಪ್ರಥಮ ಸ್ಥಾನ ಪಡೆದರು. ಅದೇ ವಿಭಾಗದ ಶೌರ್ಯ ಹಾಗೂ ಪಾರ್ವತಿ ಜೋಶಿ ಜಂಟಿಯಾಗಿ ದ್ವಿತೀಯ ಸ್ಥಾನ ಪಡೆದರೆ, ಅಂತಿಮ ವರ್ಷದ ಬಿಬಿಎ ಏವಿಯೇಷನ್ ಮ್ಯಾನೇಜ್‌ಮೆಂಟ್ ವಿಭಾಗದ ಮೀನಾಕ್ಷಿ ತೃತೀಯ ಸ್ಥಾನ ಗಳಿಸಿದರು.
ಶ್ರೀನಿವಾಸ್ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಏವಿಯೇಷನ್ ಸ್ಟಡೀಸ್ ಡೀನ್ ಡಾ. ಪವಿತ್ರಾ ಕುಮಾರಿ, ಎಸ್‌ಡಬ್ಲ್ಯುಒ, ವಿಭಾಗ ಮುಖ್ಯಸ್ಥರು, ಮ್ಯಾನೇಜ್‌ಮೆಂಟ್ ಕೋ-ಆರ್ಡಿನೇಟರ್, ಅಧ್ಯಾಪಕರು, ವಿದ್ಯಾರ್ಥಿ ಸ್ವಯಂಸೇವಕರು ಹಾಗೂ ಸಿಬ್ಬಂದಿಯ ಮಾರ್ಗದರ್ಶನ ಮತ್ತು ಸಹಕಾರದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


