ತುಳುನಾಡಿನ ಕಾವಲುಗಾರ... ಆಟಿ ಕಳೆಂಜ

Upayuktha
0


ಮಳೆಗಾಲದಲ್ಲಿ ಮಳೆರಾಯ ಬಿಡದೆ ಬಂದ 

ಜಿಟಿಜಿಟಿ ಮಳೆಯ ನಡುವಲ್ಲಿ ಕಳೆಂಜ ಬಂದ 

ಎಲ್ಲಾ ಮನೆ-ಮನೆಯ ರೋಗ ರುಜಿನಗಳನ್ನು ಕಳೆಯಲು ಬಂದ

ನಮ್ಮ ಪ್ರಕೃತಿಯ ಸೊಬಗನ್ನು ಭೂಮಿಗೆ ತಂದ


ಕೈಯಲ್ಲಿ ಹಿಡಿದು ಸಿಂಗರಿಸಿದ ತಾಳೆ ಗೋಡೆ

ನಿನ್ನ ಗೆಜ್ಜೆಯನಾದಕ್ಕೆ ಕರಗುವುದು ಕಷ್ಟದ ಕಡೆ

ಮುಖದಲ್ಲಿ ಹತ್ತಿದ ಬಣ್ಣದಲ್ಲಿ ಮರೆಯಾಗಿದೆ ನೋವು

ನಿನ್ನ ಪ್ರತಿಯೊಂದು ಹೆಜ್ಜೆಯಲ್ಲಿ ಅರಳಿದೆ ಸುಖದ ಹೂವು


ಆಟಿ ತಿಂಗಳಲ್ಲಿ ಶುಭ ಕಾರ್ಯಗಳು ನಡೆಯದು

ದೈವ ದೇವರು ಗಟ್ಟ ಹತ್ತುವ ಕಾರ್ಯ ಶುರುವಾಗುವುದು

ಪಾಠನದಲ್ಲಿ ಅಡಗಿದೆ ನಿನ್ನ ಜೀವನದ ಹಿನ್ನೆಲೆ

ತುಳುನಾಡಿನಲ್ಲಿ ಬೆಳಗಿದೆ ನಿನ್ನ ಪ್ರತಿಮೆ


ಹಿಂದಿನ ತುಳುನಾಡಿನ ಸಂಪ್ರದಾಯವನ್ನು ಹೊತ್ತುಕೊಂಡಿದೆ

ಇಂದಿಗೂ ಅಳಿಯದೆ ಎಲ್ಲರ ಮನಸ್ಸಿನಲ್ಲಿದೆ

ಒಳಿತನು ಕರುಣಿಸು ಓ ಆಟಿ ಕಳೆಂಜನೇ

ಆಟಿಯಲ್ಲಿ ತುಳುನಾಡಿನ ಕಾವಲುಗಾರ ನೀನೇ...


ಸ್ವಾತಿ ಡಿ

ದ್ವಿತೀಯ ಬಿ.ಎ

ವಿವೇಕಾನಂದ ಕಾಲೇಜು ಪುತ್ತೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Tags

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top