ಹೇಗೆ ಪರಿಚಯವಾದೆ ನೀನು! ಯಾಕಾಗಿ ಪರಿಚಯವಾದೆ ನೀನು?
ಹೀಗೆ ಯೋಚಿಸುತ್ತಾ ನನ್ನಲ್ಲೇ ಮರೆಯಾದೆ ನಾನು,
ಆದರೆ ಇಂದು ನೆನೆಯುತ್ತಿರುವೆ ನಿನ್ನನ್ನೇ ನಾನು.
ಸಾಕಾಗದಷ್ಟು ನಿನ್ನನ್ನು ಹಚ್ಚಿಕೊಂಡಿರುವ ಸಖಿ ನಾನು.
ಎಷ್ಟೇ ಪ್ರೀತಿಸಿದರೂ ಇನ್ನೂ ಸಾಲದ ಮೋಡಿ ನೀನು,
ನಿನ್ನ ಸದಾ ಕಾಯುವ ಗೆಳತಿ ನಾನು,
ನನ್ನ ಸದಾ ಹರಸುವ ಪ್ರಾಣ ಸ್ನೇಹಿತೆ ನೀನು.
ಏಕಾಂಗಿಯಾಗಿದ್ದ ನನಗೆ ದೊರೆತೆ ಹವಳದಂತೆ,
ನನ್ನ ಬದುಕಿನ ಹಾದಿಯಲ್ಲಿ ನೆಲೆನಿಂತೆ ಮಾಯೆಯಂತೆ.
ನನ್ನ ಕಣ್ಣುಗಳು ಹಂಬಲಿಸತೊಡಗಿದವು ನಿನ್ನ ಕಂಡು ಅಪ್ಸರೆಯಂತೆ,
ನನ್ನಲ್ಲಿ ಜೊತೆಯಾಗಿ ನಿಂತೆ ನನ್ನ ಬಂಧುವಿನಂತೆ.
ಕಷ್ಟ ಕಾಲದಲ್ಲಿಯೂ ಇದ್ದೆ ಜೊತೆಯಾಗಿ,
ಬದುಕಿಗೆ ಧೈರ್ಯ ತುಂಬಿದೆ ನನ್ನ ಒಡನಾಡಿಯಾಗಿ.
ಹೇಗೆ ಮಾಡಲಿ ನಾ ನಿನ್ನ ಗುಣಗಾನವ,
ನಾ ಎಂದೂ ಕಾಣದ ಆ ನಿನ್ನ ಮುಗ್ಧ ಮನಸ್ಸಿನ ಚೆಲುವ.
ನಮ್ಮಿಬ್ಬರ ಪರಿಚಯ ಆಕಸ್ಮಿಕವಾಗಿದ್ದರೂ,
ಹಚ್ಚಿಕೊಂಡಿದ್ದೇವೆ ಒಬ್ಬರನ್ನೊಬ್ಬರು "ನೀನೇ ನನ್ನ ಪ್ರಾಣ" ಎನ್ನುವಷ್ಟೂ.
ನಾವು ಸಾಗುವ ದಾರಿ ಬೇರೆ ಬೇರೆಯಾದರೂ,
ಶಾಶ್ವತವಾಗಿರಲಿ ಈ ನಮ್ಮ ಸ್ನೇಹ ಯುಗಯುಗಗಳವರೆಗೂ.
- ಹರ್ಷಿಣಿ ಕಾಂಚನ
ದ್ವಿತೀಯ ಪತ್ರಿಕೋಧ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಕಾಲೇಜು ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



