ಮನಸ್ಸು ಎನ್ನುವುದು ಯಾವಾಗಲೂ ಮಾತಾಡುತ್ತಲೇ ಇರುತ್ತದೆ. ನಗುವಿನಲ್ಲಿ, ಅಳುವಿನಲ್ಲಿ, ಕೋಪದಲ್ಲಿ, ಪ್ರೀತಿಯಲ್ಲಿ ಅದು ನಿರಂತರವಾಗಿ ಮಾತಾಡುತ್ತದೆ. ಆದರೆ ಕೆಲವೊಮ್ಮೆ ಅದೆಲ್ಲವನ್ನೂ ಮೀರಿ ಒಂದು ಮೌನ ಆವರಿಸುತ್ತದೆ. ಅದೇ "ಮೌನಿಯಾದ ಮನಸ್ಸು".
ಜೀವನದ ಕಷ್ಟಗಳು, ನಿರಾಸೆಗಳು, ಒಂಟಿತನಗಳು ಮನಸ್ಸನ್ನು ಮೌನವಾಗಿಸುತ್ತವೆ. ಮಾತಿಗೆ ಪದಗಳು ಸಿಗುವುದಿಲ್ಲ. ಕಣ್ಣಲ್ಲಿ ನೀರಿದ್ದರೂ ಅದನ್ನು ಹೊರಹಾಕಲು ಸಾಧ್ಯವಾಗುವುದಿಲ್ಲ. ಆಗ ಮನಸ್ಸು ತನ್ನೊಳಗೆ ತಾನೇ ಮಾತಾಡಿಕೊಳ್ಳುತ್ತದೆ. ಹೊರಗಿನ ಪ್ರಪಂಚಕ್ಕೆ ಏನೂ ತೋರದಿದ್ದರೂ, ಒಳಗೆ ಸಾವಿರಾರು ಯುದ್ಧಗಳು ನಡೆಯುತ್ತಿರುತ್ತವೆ.
ಆದರೆ ಈ ಮೌನ ದುರ್ಬಲತೆಯ ಸಂಕೇತವಲ್ಲ. ಕೆಲವೊಮ್ಮೆ ಮೌನವೇ ಅತ್ಯಂತ ದೊಡ್ಡ ಶಕ್ತಿ. ನೋವನ್ನು ಅರ್ಥಮಾಡಿಕೊಳ್ಳಲು, ತನ್ನನ್ನು ತಾನು ಹುಡುಕಿಕೊಳ್ಳಲು, ಮತ್ತೆ ಎದ್ದು ನಿಲ್ಲಲು ಮೌನ ಬೇಕಾಗುತ್ತದೆ. ಮೌನಿಯಾದ ಮನಸ್ಸು ಪ್ರಕೃತಿಯಂತೆ. ಬಿರುಗಾಳಿಯ ನಂತರ ಬರುವ ಶಾಂತಿಯಂತೆ.
ಆ ಮೌನದಲ್ಲಿ ನಾವು ದೇವರನ್ನು, ಪ್ರೀತಿಪಾತ್ರರನ್ನು, ನಮ್ಮ ಕನಸುಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳುತ್ತೇವೆ. ಮೌನ ನಮಗೆ ಆಲೋಚಿಸುವ ಅವಕಾಶ ಕೊಡುತ್ತದೆ. ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಧೈರ್ಯ ಕೊಡುತ್ತದೆ.
ಹಾಗಾಗಿ ಮನಸ್ಸು ಮೌನವಾದಾಗ ಅದಕ್ಕೆ ಹೆದರಬೇಡಿ. ಅದಕ್ಕೆ ಸ್ವಲ್ಪ ಸಮಯ ಕೊಡಿ. ಯಾಕೆಂದರೆ ಮೌನದ ನಂತರ ಬರುವ ಬೆಳಕು ಯಾವಾಗಲೂ ಪ್ರಕಾಶಮಾನವಾಗಿರುತ್ತದೆ. ಮೌನಿಯಾದ ಮನಸ್ಸೇ ಮತ್ತೆ ದೊಡ್ಡ ಸಾಧನೆ ಮಾಡುವ ಶಕ್ತಿಯನ್ನು ಪಡೆಯುತ್ತದೆ.
ಮೌನ ಮಾತನಾಡದಿದ್ದರೂ, ಸಾವಿರ ಅರ್ಥಗಳನ್ನು ಹೇಳುತ್ತದೆ.
ಶಿವಾನಿ ಕೊಡಂಗಾಯಿ
ದ್ವಿತೀಯ ಬಿ. ಎ ಪತ್ರೀಕೋಧ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


