ಮನದ ಅಂಗಣದಿ ಅರಳಿದ ಹೂವು ಅದು,
ಒಲವ ಸುಗಂಧವ ಪಸರಿಸಿದಂತಿತ್ತು.
ಅದರ ಅಂದಕೆ ಮರುಳಾಗಿ ಬಿದ್ದೆ ನಾನು,
ಎಲ್ಲವೂ ನನದೇ ಎಂದು ಸಂಭ್ರಮಿಸಿದೆನು || 01||
ಆದರೆ ಕಾಲದ ಸುಳಿಯಲ್ಲಿ ಸತ್ಯ ತಿಳಿಯಿತು,
ಆ ಹೂವು ನನ್ನದಾಗಿರಲೇ ಇಲ್ಲ ಎಂದು.
ಪರರ ತೋಟದ ಸೊಬಗದು, ನಾನೊಬ್ಬ ಪ್ರೇಕ್ಷಕ ಅಷ್ಟೇ,
ಈ ಸತ್ಯ ಅರಿವಾದಾಗ ಎದೆಯೊಡೆದು ಹೋಯಿತಲ್ಲೇ || 02||
ನನ್ನದೆನ್ನುವ ಭ್ರಮೆಯಲ್ಲಿ ಕಳೆದಿದ್ದೆ ಆ ಕ್ಷಣಗಳ,
ನನ್ನ ಆಸೆಗಳೆಲ್ಲಾ ಕಮರಿ ಹೋದವು ಮರೀಚಿಕೆಯಂತೆ.
ಈಗ ಕಣ್ಣಂಚಲಿ ನೀರು, ನೆನಪುಗಳ ಭಾರ,
ನನ್ನದೇ ತಪ್ಪು ಎಂದು ಒಪ್ಪಿಕೊಂಡಿದೆ ಈ ಮನ || 03||
ಮುಗಿಯದ ನೋವಲಿ ನನ್ನ ಕಥೆ,
ಅರಿಯದ ತಪ್ಪಿಗೆ ನಾನೇ ಶಿಕ್ಷೆ.
ಮೋಸ ಹೋದ ಪ್ರೀತಿಯ ನೆನಪಲಿ,
ಉಳಿದಿರುವುದು ಬರೀ ಕಣ್ಣೀರಿನ ಕಡಲಲಿ || 04||
- ರೂಪಾ ಬ. ನಾಟೀಕಾರ ಮುದ್ದೇಬಿಹಾಳ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


