ಮಂಗಳೂರು: ಸೇಂಟ್ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯ ವಾಣಿಜ್ಯ, ಹಣಕಾಸು ಮತ್ತು ಲೆಕ್ಕಪತ್ರ ವಿಭಾಗದ ವಾಣಿಜ್ಯ ವಿಭಾಗವು, ಭಾರತದ ಕೇಂದ್ರ ಸರ್ಕಾರದ ರಾಜೀವ್ ಗಾಂಧಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಟೆಲೆಕ್ಚುವಲ್ ಪ್ರಾಪರ್ಟಿ ಮ್ಯಾನೇಜ್‌ಮೆಂಟ್ (RGNIIPM), ನಾಗ್ಪುರ ಸಂಸ್ಥೆಯ ಸಹಯೋಗದಲ್ಲಿ ರಾಷ್ಟ್ರೀಯ ಬೌದ್ಧಿಕ ಆಸ್ತಿ ಜಾಗೃತಿ ಅಭಿಯಾನ (NIPAM) ಅಡಿಯಲ್ಲಿ "ಬೌದ್ಧಿಕ ಆಸ್ತಿ ಹಕ್ಕುಗಳು (IPR), ಪೇಟೆಂಟ್ ಮತ್ತು ಡಿಸೈನ್ ಫೈಲಿಂಗ್" ವಿಷಯದ ಕುರಿತು ಆನ್‌ಲೈನ್ ಕಾರ್ಯಾಗಾರವನ್ನು ಜುಲೈ 22ರಂದು ವಿಶ್ವವಿದ್ಯಾಲಯದ ಎರಿಕ್ ಮಥಿಯಾಸ್ ಸಭಾಂಗಣದಲ್ಲಿ ಆಯೋಜಿಸಿತು.
ಕಾರ್ಯಾಗಾರದಲ್ಲಿ RGNIIPM, ನಾಗ್ಪುರದ ಪೇಟೆಂಟ್ ಮತ್ತು ಡಿಸೈನ್ ವಿಭಾಗದ ಸಹಾಯಕ ನಿಯಂತ್ರಕರಾದ ಡಾ. ಭರತ್ ಸೂರ್ಯವಂಶಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಬೌದ್ಧಿಕ ಆಸ್ತಿ ಹಕ್ಕುಗಳ ಮಹತ್ವ, ಪೇಟೆಂಟ್, ಕೈಗಾರಿಕಾ ವಿನ್ಯಾಸ ಸಂರಕ್ಷಣೆ, ಟ್ರೇಡ್‌ಮಾರ್ಕ್, ಭೌಗೋಳಿಕ ಸೂಚ್ಯಂಕ (GI), ಕಾಪಿರೈಟ್ ಹಾಗೂ ಟ್ರೇಡ್ ಸೀಕ್ರೆಟ್‌ಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಕಾರ್ಯಾಗಾರದಲ್ಲಿ ಭಾಗವಹಿಸಿ, ಬೌದ್ಧಿಕ ಆಸ್ತಿ ಹಕ್ಕುಗಳ ನೋಂದಣಿ ವಿಧಾನಗಳು, ನವೋದ್ಯಮದ ಅವಕಾಶಗಳು ಹಾಗೂ ಪೇಟೆಂಟ್ ಪ್ರಕ್ರಿಯೆಗಳ ಕುರಿತು ಉಪಯುಕ್ತ ಮಾಹಿತಿಯನ್ನು ಪಡೆದುಕೊಂಡರು.
ಕಾರ್ಯಾಗಾರದ ಸಂಯೋಜನೆಯನ್ನು ಸೇಂಟ್ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಕ್ಯಾರೋಲೀನಾ ಜೆನಿಫರ್ ಮತ್ತು ಡಾ. ಭಾರತಿ ಆರ್. ವಹಿಸಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


