ವಿದ್ಯಾಭಾರತಿ ಸ್ಪರ್ಧೆ : ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಬಹುಮಾನ

Upayuktha
0

 


ಪುತ್ತೂರು : ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ವಿದ್ಯಾರ್ಥಿಗಳು ಪುತ್ತೂರಿನ ವಿವೇಕಾನಂದ  ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ವಿದ್ಯಾಭಾರತಿ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಹಲವು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 


ಕಿಶೋರ ವರ್ಗ ಬಾಲಕಿಯರ ವಿಭಾಗದಲ್ಲಿ ಹತ್ತನೇ ತರಗತಿಯ ಬಿ. ತ್ರಿಶಾ 400ಮೀ ಹರ್ಡಲ್ಸ್ನಲ್ಲಿ ಪ್ರಥಮ, 100ಮೀ ಹರ್ಡಲ್ಸ್ನಲ್ಲಿ ದ್ವಿತೀಯ ಹಾಗೂ 4x400ಮೀ ರಿಲೇಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಹತ್ತನೇ ತರಗತಿಯ  ಆರುಷಿ ಎನ್. ಚಕ್ರ ಎಸೆತದಲ್ಲಿ ದ್ವಿತೀಯ, ಹತ್ತನೇ ತರಗತಿಯ  ಶ್ರದ್ಧಾ ಕೆ. ಕಟ್ವಾಟ್ 4x400ಮೀ ರಿಲೇಯಲ್ಲಿ ಪ್ರಥಮ, ಹತ್ತನೇ ತರಗತಿಯ ಅದಿತಿ ಎನ್.ಶೆಟ್ಟಿ, 4x400 ರಿಲೇಯಲ್ಲಿ ಪ್ರಥಮ, ಒಂಬತ್ತನೇ ತರಗತಿಯ ನಿಹಾರಿಕ ಕೆ.ಎಸ್ 4x400 ರಿಲೇಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.


ಬಾಲವರ್ಗ ಬಾಲಕರ ವಿಭಾಗದಲ್ಲಿ ಎಂಟನೇ ತರಗತಿಯ ದೀಪಾಂಶ್ ಶೆಟ್ಟಿ 600ಮೀ ಓಟದ ಸ್ಪರ್ಧೆಯಲ್ಲಿ ದ್ವಿತೀಯ, 400ಮೀ ಓಟದ ಸ್ಪರ್ಧೆಯಲ್ಲಿ ತೃತೀಯ, ಏಳನೇ ತರಗತಿಯ ಆರಾಧ್ಯ ಗಣೇಶ್ ಎತ್ತರ ಜಿಗಿತದಲ್ಲಿ ದ್ವಿತೀಯ ಹಾಗೂ ಗುಂಡು ಎಸೆತದಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಬಾಲವರ್ಗ ಬಾಲಕಿಯರ ವಿಭಾಗದಲ್ಲಿ  ಗ್ರಂಥನಾ ಎಂ. ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top