ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿರುವ ಕಾಂಕಾರ್ಡ್ ಮ್ಯಾನ್ಹಾಟನ್ ವಸತಿ ಸಮುಚ್ಛಯದಲ್ಲಿ ಇತ್ತೀಚೆಗೆ ನಡೆದ ಭಜನಾ ಕಾರ್ಯಕ್ರಮವು ಆಸ್ತಿಕ ಶ್ರೋತೃಗಳ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
ಅಕ್ಷಯನಗರದ ಶ್ರೀ ಸುಬ್ರಮಣ್ಯ ಮಠ ಪ್ರಾಯೋಜಿತ ‘ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿ’ ಈ ಭಕ್ತಿ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿತು. ಈ ಮಂಡಳಿಯಲ್ಲಿ ಪ್ರಸ್ತುತಪಡಿಸಿದ ಎಲ್ಲಾ ಸದಸ್ಯರೂ ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದು, ವೃತ್ತಿಬದುಕಿನ ಒತ್ತಡದ ನಡುವೆಯೂ ಕಲೆಯ ಮೂಲಕ ಭಕ್ತಿ ಪ್ರಸಾರದಲ್ಲಿ ತೊಡಗಿಸಿಕೊಂಡಿರುವುದು ಕಾರ್ಯಕ್ರಮದ ವಿಶೇಷತೆಯಾಗಿತ್ತು.
ಸ್ಥಳೀಯ ನಿವಾಸಿಗಳಾದ ಗಣೇಶ ಮಲ್ಯ, ಸುಧೀರ್ ಪಾಟೀಲ್, ಎಸ್.ವಿ. ಜಗದೀಶ್ ರಾವ್ ಹಾಗೂ ಡಾ. ಕಿರಣ್ ಪೇಟ್ಕರ್ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಭಜನಾ ಮಂಡಳಿಯ ಪರವಾಗಿ ಶ್ರೀ ಕೃಷ್ಣ ಭಟ್ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ವಸತಿ ಸಮುಚ್ಛಯದ ಅಪಾರ ಸಂಖ್ಯೆಯ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಿ ಸುಧೆಯನ್ನು ಸವಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


