ಮಳೆಗಾಲ ಎಂದರೆ ಬಿಸಿ ಬಿಸಿ ತಿಂಡಿಯ ಸಡಗರ!

Upayuktha
0

 


ಳೆಗಾಲ ಬಂದರೆ ಸಾಕು ಬಿಸಿ ಬಿಸಿ ತಿಂಡಿ ತಿನ್ನಬೇಕು ಎನ್ನುವ ಬಾಯಿಯ ಚಡಪಡಿಕೆ ಹೆಚ್ಚಾಗುತ್ತದೆ . ಮಳೆ ಬರುವಾಗ ಏನಾದರೂ ತಿಂಡಿ ಕಾಯಿಸಿ ತಿನ್ನಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ . ಬಿಸಿ ಬಿಸಿ ಎಣ್ಣೆಯಲ್ಲಿ ಬಜ್ಜಿ, ಬೋಂಡ ಅಥವಾ ಮಳೆಗಾಲಕ್ಕೆ ಅಂತಾನೆ ಹಲಸಿನಕಾಯಿ ಹಪ್ಪಳ, ಹಲಸಿನ ಬೀಜವನ್ನು ಬೆಂಕಿಯಲ್ಲಿ ಸುಟ್ಟು ತಿನ್ನಬೇಕು ಎಂದು ಆಗುತ್ತದೆ. ಮಳೆಗಾಲಕ್ಕೆ ತಿನ್ನಲೆಂದೇ ಅಮ್ಮ ಮಾವಿನಹಣ್ಣಿನ ಮಾಂಬಲ, ನೀರು ಮಾವಿನಕಾಯಿ ಸಾಂಬಾರು ಇದೆಲ್ಲವನ್ನು ಶೇಖರಣೆ ಮಾಡಿ ಇಡುತ್ತಿದ್ದರು. 


ಯಾಕೋ ಗೊತ್ತಿಲ್ಲ ಮಳೆಗಾಲದಲ್ಲಿ ಏನಾದರೂ ತಿನ್ನಬೇಕು ಎಂಬ ಆಸೆ ನನಗೆ ಮಾತ್ರನಾ? ಅಥವಾ ಎಲ್ಲರಿಗೂ ಆಸೆ ಇರುತ್ತದೆ ಅಂತ? ಆ ತಂಪಾದ ಗಾಳಿ ಮಳೆಯ ಒಂದೊಂದು ಹನಿ ಮನಸ್ಸಿಗೆ ಏನೋ ಒಂದು ರೀತಿಯಲ್ಲಿ ಖುಷಿಕೊಡುತ್ತದೆ . ಆದರೂ ಮಳೆಗಾಲದಲ್ಲಿ ಮನೆಯ ಒಳಗೆ ಕುಳಿತುಕೊಂಡು ಸ್ಪೆಷಲ್ ಆದ ತಿಂಡಿ ಮಾಡುವುದೇ ಖುಷಿ. ಅದರಲ್ಲೂ ನನಗೆ ಅಡುಗೆ ಮಾಡುವುದೆಂದರೆ ತುಂಬಾ ಇಷ್ಟ ಮನೆಯಲ್ಲಿ ಸಂಜೆ ಹೊತ್ತು ಆದರೆ ಸಾಕು ಸಂಜೆ ಚಾಯಕ್ಕೆ ಬೇಕಾದ ತಿಂಡಿಯನ್ನು ಮಾಡಲು ಶುರು. 

ಮಳೆಗಾಲದಲ್ಲಿ ಎಷ್ಟೇ ತಿಂದರೂ ಇನ್ನು ತಿನ್ನಬೇಕು ಎಂಬ ಆಸೆಯಾಗುತ್ತದೆ. ಚಳಿ ಆಗುವ ಹೊತ್ತಲ್ಲಿ ಬಾಯಿಗೆ ಬಿಸಿಬಿಸಿಯಾದ ತಿಂಡಿ ತಿಂದರೆ ಹಿತವಾಗುತ್ತದೆ. ಪ್ರತಿದಿನ ಬೇರೆ ಬೇರೆ ತಿಂಡಿಯನ್ನು ಮಾಡಲು ಹಿಂದಿನ ದಿನವೇ ಯೂಟ್ಯೂಬ್ ನಲ್ಲಿ ತಿಂಡಿ ಮಾಡುವ ವಿಧಾನವನ್ನು ನೋಡುವುದು, ಬೇಕಾದ ಸಾಮಾಗ್ರಿಗಳನ್ನು ಹೊಂದಿಸಿಕೊಂಡು ತಿಂಡಿ ತಯಾರಿಸುವುದು, ಮನೆಯವರು ಎಲ್ಲರೂ ಸೇರಿ ಮಳೆ ಬರುವುದನ್ನು ನೋಡಿಕೊಂಡು ಗರಿಗರಿಯಾದ ತಿಂಡಿಯನ್ನು ತಿಂದು ಖಾಲಿ ಮಾಡುವುದು ಖುಷಿಯ ವಿಷಯ. ಇದೂ ಮಳೆಗಾಲದ ಒಂದು ವಿ‍ಶೇಷತೆ. 



- ಹರ್ಷಿತಾ ಗೌಡ
ಪತ್ರಿಕೋದ್ಯಮ ವಿಭಾಗ
ಎಸ್.ಡಿ.ಎಂ. ಉಜಿರೆ


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top