ಜು.18 ರಂದು ಯಕ್ಷರಂಗದಿಂದ ಉಚಿತ ಯಕ್ಷಗಾನ ಪ್ರದರ್ಶನ

Upayuktha
0

 


ದಾವಣಗೆರೆ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಯಕ್ಷರಂಗ ಯಕ್ಷಗಾನ ಸಂಸ್ಥೆಯ ಆಶ್ರಯದಲ್ಲಿ ಜುಲೈ 18 ರಂದು ಸಂಜೆ 6 ಗಂಟೆಗೆ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಾಲಾಡಿಯ ಶ್ರೀ ಮಹಾಗಣಪತಿ ಪ್ರವಾಸಿ ಮಂಡಳಿಯ ಖ್ಯಾತ ಯಕ್ಷಗಾನ ಕಲಾವಿದರಿಂದ “ನಾಗಶ್ರೀ” ಪ್ರಸಂಗದ ಉಚಿತ ಯಕ್ಷಗಾನ ಪ್ರದರ್ಶನ ದಾವಣಗೆರೆಯ ವಿದ್ಯಾನಗರ ರಸ್ತೆಯಲ್ಲಿ ಇರುವ ದೃಶ್ಯಕಲಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ ಎಂದು ಯಕ್ಷರಂಗ ಸಂಸ್ಥೆಗಳ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.


ಕೀರ್ತಿಶೇಷ ಕಾಳಿಂಗ ನಾವಡ ವಿರಚಿತ ಈ ಯಕ್ಷಗಾನ ಪ್ರದರ್ಶನದಲ್ಲಿ ಯಕ್ಷಗಾನ ಭಾಗವತರಾದ  ಜಿ.ರಾಘವೇಂದ್ರ ಮಯ್ಯ, ಮದ್ದಳೆ ಕಾರ್ಯ ಕತತೋಕದ ರಮೇಶ್ ಭಂಡಾರಿ, ಚಂಡೆ ಕಾರ್ಯ ಮೂರೂರಿನ ಸುಬ್ರಮಣ್ಯ ಮುಮ್ಮೇಳದಲ್ಲಿ ಕೋಡಿ ವಿಶ್ವನಾಥ ಗಾಣಿಗ, ಚಂದ್ರಹಾಸ ಗೌಡ, ಹರೀಶ್ ಮೊಗವೀರಜಸ್ತಿ, ರಾಜೇಶ್ ಬೈಕಾಡಿ, ಉಳ್ಳೂರು ನಾರಾಯಣ ನಾಯ್ಕ, ಯುವರಾಜನಾಯ್ಕ, ನಾಗಚಂದ್ರ ತೀರ್ಥಳ್ಳಿ, ಸಂದೀಪ್ ಮದ್ದೂರು ಭಾಗವಹಿಸಲಿದ್ದಾರೆ ಎಂದು ಯಕ್ಷರಂಗದ ಅಧ್ಯಕ್ಷರಾದ ಮಲ್ಯಾಡಿ ಪ್ರಭಾಕರ ಶೆಟ್ಟಿ ಪ್ರಕಟಿಸಿದ್ದಾರೆ.


ಸ್ತ್ರೀ ಪಾತ್ರದಲ್ಲಿ ಮಾಧವ ನಾಗೂರು, ರವೀಂದ್ರ ಶೆಟ್ಟಿ ಹಕ್ಲಾಡಿ, ಕುಮಾರ ಅರಳಸುರಳಿ, ಹಾಸ್ಯ ಪಾತ್ರದಲ್ಲಿ ಸತೀಶ್ ನಾಯ್ಕ, ಕಾರ್ತಿಕ್‌ರಾವ್ ಉಪಸ್ಥಿತರಿದ್ದು ಕರ್ನಾಟಕದ ಕರಾವಳಿ ಜಿಲ್ಲೆಗಳ ವಿಶ್ವವಿಖ್ಯಾತ ಅಪ್ಪಟ ಕನ್ನಡ ಜನಪದ ಪುರಾತನ ಇತಿಹಾಸದ ಆರಾಧನಾ ಕಲೆ ಯಕ್ಷಗಾನವನ್ನು ವಾಣಿಜ್ಯ ನಗರಿ ದೇವನಗರಿಯಲ್ಲಿ ವೈಭವೀಕರಿಸುವ ಸದುದ್ದೇಶದಿಂದ ಯಕ್ಷಗಾನ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ದೈವೀಕಲೆ ಯಕ್ಷಗಾನ ಪ್ರದರ್ಶನವನ್ನು  ಯಶಸ್ವಿಗೊಳಿಬೇಕಾಗಿ ಯಕ್ಷರಂಗದ ಪ್ರಧಾನ ಕಾರ್ಯದರ್ಶಿ ಬೇಳೂರು ಸಂತೋಷ್ ಕುಮಾರ ಶೆಟ್ಟಿ ವಿನಂತಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top