ತಂತ್ರಜ್ಞಾನದ ಕೊಡುಗೆ- ಹೊಸ ಬದುಕಿನ ಕಡೆಗೆ

Upayuktha
0

ಪುಸ್ತಕಗಳು ನಿಧಾನವಾಗಿ ಕಣ್ಮರೆಯಾಗುತ್ತಿರುವುದು ನಿಜ. ವಿಶಾಲ ದೃಷ್ಟಿಯಿಂದ ನೋಡಿದರೆ ಅದರಲ್ಲಿ ದುಃಖ ಪಡುವಂಥಾದ್ದು ಏನೂ ಇಲ್ಲ. ಐವತ್ತು ಸಾವಿರ ವರ್ಷಗಳ ಹಿಂದೆ ಅಕ್ಷರಗಳು ಇರಲಿಲ್ಲ. ಮನುಷ್ಯನ ಮಾತು ಧ್ವನಿರೂಪದಲ್ಲಿ ಅತ್ಯಂತ ಶೈಶವಾವಸ್ಥೆಯಲ್ಲಿ ಇತ್ತು. ಈಗ್ಗೆ ಹತ್ತು ಸಾವಿರ ವರ್ಷಗಳ ಹಿಂದೆ ಗುಹೆಯಲ್ಲಿ ವಾಸಿಸುತ್ತಿದ್ದ ಆತ ಬೆಣಚುಕಲ್ಲಿನಲ್ಲಿ ಗುಹೆಯ ಗೋಡೆಯ ಮೇಲೆ ಏನೇನೋ ಗೀಚುತ್ತಿದ್ದ.


ಸುಮಾರು ಆರೇಳು ಸಾವಿರ ವರ್ಷಗಳ ಈಚಿನಿಂದ ಬದುಕಿನಲ್ಲಿ ತುಸುತುಸುವೆ ವಿಕಾಸ ಆಗುತ್ತ ಬಂದ. ರೇಖಾಚಿತ್ರ ಬಿಡಿಸುವಲ್ಲಿಂದ ವಿಚಿತ್ರ ರೂಪದ ಲಿಪಿ ಬರೆದು ಅದಕ್ಕೆ ಮಾತಿನ ಅರ್ಥ ಆರೋಪಿಸಿದ. ಮಾತು ಲಿಪಿ ವಿಕಾಸ ಆಯಿತು. ಅನಂತರ ಶಿಲಾಲೇಖ ಬಂತು. ಸಾವಿರಾರು ವರ್ಷಗಳ ಬಳಿಕ ತಾಮ್ರಪಟ ಬಂತು. ಮತ್ತೆ ನೂರಾರು ವರ್ಷಗಳ ಬಳಿಕ ತಾಳೆಗರಿ ಬಂತು. ಹಾಳೆ (paper) ಮತ್ತು ಹಾಳೆಯ ಮೇಲೆ ಬರೆಯುವುದು, ಪುಸ್ತಕ ಸಂಸ್ಕೃತಿ ಈಚಿನ ಇನ್ನೂರಐವತ್ತು ವರ್ಷ ಹಿಂದಿನದು, ಅಷ್ಟೇ!


ಇನ್ನೀಗ ಹಾಳೆ ಮತ್ತು ಪುಸ್ತಕ ಸಂಸ್ಕೃತಿಯೂ ಕಣ್ಮರೆಯಾಗುತ್ತಿದೆ. Paper ಮಾಡುವ ಬಿದಿರು ಮತ್ತು ಮೆದುಮರಗಳನ್ನು ನಾವು ತಿಂದು ಮುಗಿಸಿ ಆಯಿತು. ಈಗ ನಾವು ಡಿಜಿಟಲ್ ಯುಗ ಪ್ರವೇಶಿಸುತ್ತಿದ್ದೇವೆ. ಡಿಜಿಟಲ್ ಯುಗಕ್ಕೆ ಬೇಕಾದ ಹಾಗೆ ಹೊಸ ರೂಪ, ಹೊಸ ವಿನ್ಯಾಸದ; ಹೊಸ ಅಗತ್ಯ ಹೊಸ ಅಪೇಕ್ಷೆಯ ಸಾಹಿತ್ಯ (ನಾವು ಬೇಡ ಅಂದರೂ!) ಬರಲಿದೆ.


ಗುಹೆಯೊಳಗೆ ಬರೆದ ರೇಖೆಗಳು ಕಣ್ಮರೆಯಾದದ್ದಕ್ಕೆ ದುಃಖ ಪಟ್ಟೆವೇ!

ಶಿಲಾಲೇಖ ಕಣ್ಮರೆಯಾದದ್ದಕ್ಕೆ ದುಃಖ ಪಟ್ಟೆವೇ? 

ತಾಮ್ರಪಟ...

ತಾಳೆಒಲಿ....

ಗ್ರಂಥಗಳು ಕಣ್ಮರೆಯಾದದ್ದಕ್ಕೆ ದುಃಖ ಪಟ್ಟೆವೇ? 


ಆಶ್ಚರ್ಯ ಪಡೆಬೇಡಿ,

ಇನ್ನೀಗ ನಿಧಾನವಾಗಿ ಐವತ್ತು ವರ್ಷಗಳ ಬಳಿಕ ಪುಸ್ತಕಗಳು ಕಣ್ಮರೆಯಾಗುವ ಸರದಿ..


ಶಿಲೆ, ತಾಮ್ರಪಟ, ಹಾಳೆ (paper) ಇವೆಲ್ಲ ಕೇವಲ ಮಾಧ್ಯಮಗಳು ಮಾತ್ರ. ಆ ಮಾಧ್ಯಮಗಳ ಮೂಲಕ ನಾವು ದಾಟಿಸುವ ಜ್ಞಾನ ಅಷ್ಟೇ ಮುಖ್ಯ. ಹಾಗಾಗಿ ಮಾಧ್ಯಮದ ಬಗ್ಗೆ (medium ಬಗ್ಗೆ) ಬೇಜಾರು ಮಾಡಿಕೊಳ್ಳಬೇಕಿಲ್ಲ. ನಮ್ಮ ತಲೆಮಾರುಗಳು (generations) ಗಳಿಸಿಕೊಂಡ ಜ್ಞಾನರಾಶಿ ಮಾತ್ರ ಮುಖ್ಯ. ಅದನ್ನು ನಾವು ಹೇಗೆ ಉಳಿಸಿಕೊಳ್ಳಬೇಕು; ಮುಂದಕ್ಕೆ ದಾಟಿಸಬೇಕು ಎಂಬ ಬಗ್ಗೆ ಚಿಂತಿಸಬೇಕು. ನಮ್ಮೆಲ್ಲ ಜ್ಞಾನರಾಶಿ ಡಿಜಿಟಲೀಕರಣ ಆಗುವುದೊಂದೇ ಹಾದಿ.


ಇನ್ನು ಐವತ್ತು ವರ್ಷ ಕಳೆದ ಬಳಿಕ ಪುಸ್ತಕಗಳೇ ಇರುವುದಿಲ್ಲ! ಈಗ ತಾಳೆಒಲಿ ಗ್ರಂಥಗಳಿಗೆ ಯಾವ ಗತಿ ಬಂದಿದೆಯೋ ಅದೇ ಗತಿ ಪುಸ್ತಕಗಳಿಗೆ ಬರಲಿದೆ. Paperless work ಈಗಾಗಲೇ ಆರಂಭವಾಗಿದೆ. ಅಷ್ಟೇಕೆ cashless transaction (ನಗದುರಹಿತ ವ್ಯವಹಾರ) ಬಂದಾಗಿದೆ.


ಹೊಸ ರೀತಿಯ ಬದುಕಿನ ಶೈಲಿಗೆ ಅದರ ರೀತಿಗೆ ಅದರ ನೀತಿಗೆ ಸಜ್ಜಾಗೋಣ!


- ಡಾ. ವಸಂತಕುಮಾರ ಪೆರ್ಲ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top