ಬೆಂಗಳೂರು: ಏಷಿಯನ್ ಇಂಟರ್‌ನ್ಯಾಷನಲ್ ಕಲ್ಚರ್ ಯೂನಿವರ್ಸಿಟಿ ಹಾಗೂ ಅಮೆರಿಕನ್ ವಿಜ್ಡಮ್ ಪೀಸ್ ಯೂನಿವರ್ಸಿಟಿ ಸಹಯೋಗದಲ್ಲಿ ಬೆಂಗಳೂರಿನ ಗಾಯಕಿ ಸೌಮ್ಯಾ ನಂದನ್ ರವರಿಗೆ ಸಂಗೀತ ಕ್ಷೇತ್ರದ ಅನನ್ಯ ಸೇವೆಯನ್ನು ಗುರುತಿಸಿ ತಮಿಳುನಾಡು ಹೊಸೂರ್ ನಲ್ಲಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ವಿಶ್ವವಿದ್ಯಾಲಯ ವತಿಯಿಂದಗೌರವ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಲಾಯಿತು.
ಸಂಸ್ಕೃತಿ ಸಂವರ್ಧಕಿ ಸೌಮ್ಯ ನಂದನ್ ರವರು ಕಳೆದ 2 ದಶಕದಿಂದ ವಾಗ್ದೇವಿ ಗಾನ ಕಲಾಶಾಲೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಸಂಗೀತಾಭ್ಯಾಸ ನೀಡುತ್ತ ಸಮಾಜಮುಖಿ ಸೇವಾ ತತ್ಪರಾಗಿದ್ದಾರೆ. ವಿಶ್ವಕರ್ಮ ಗ್ಲೋಬಲ್ ಟ್ರಸ್ಟ್ (ರಿ.) ಸಹಯೋಗದಲ್ಲಿ ಸಂಗೀತ ಪರಂಪರೆ ಪಾರಂಪರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು .
ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ಸೌಮ್ಯಾ ನಂದನ್ ಭವಿಷ್ಯದಲ್ಲಿಯೂ ಸಂಗೀತದ ಮೂಲಕ ಸಮಾಜಸೇವೆ ಮುಂದುವರಿಸಿ, ಭಾರತೀಯ ಶಾಸ್ತ್ರೀಯ ಸಂಗೀತವನ್ನು ಹೆಚ್ಚು ಹೆಚ್ಚು ಮನೆಗಳಿಗೆ ತಲುಪಿಸುವುದು, ಹೊಸ ಪೀಳಿಗೆಯಲ್ಲಿ ಭಕ್ತಿ, ಸಂಸ್ಕೃತಿ ಮತ್ತು ಸಂಗೀತದ ಬಗ್ಗೆ ಆಸಕ್ತಿ ಬೆಳೆಸುವುದು ತಮ್ಮ ಧ್ಯೇಯವೆಂದು ಹೇಳಿದರು.
ಇವರ ಜೀವನಗಾಥೆ ಸಂಗೀತವನ್ನು ವೃತ್ತಿಯಷ್ಟೇ ಅಲ್ಲ, ಸೇವೆ ಮತ್ತು ಸಾಧನೆಯ ಮಾರ್ಗವನ್ನಾಗಿ ರೂಪಿಸಬಹುದೆಂಬುದಕ್ಕೆ ಪ್ರೇರಣಾದಾಯಕ ಉದಾಹರಣೆಯಾಗಿದೆ ಎಂದು ಡಾ. ಕೃಷ್ಣಮೂರ್ತಿ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಭೂಕೈಲಾಸ ಪುಣ್ಯಸ್ಥಳ, ಶ್ರೀ ಕ್ಷೇತ್ರ ಮುಕ್ತಿ ಮಠದ ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ , ಮಾಜಿ ಶಾಸಕ ಡಾ. ಕೆ.ಎ. ಮನೋಕರನ್, ಡಾ. ಕರಾಟೆ ಎ.ಪಿ. ಶ್ರೀನಾಥ್ ಮೊದಲಾದವರು ಉಪಸ್ಥಿತರಿದ್ದರು.

