ಮಂಗಳೂರು: "ಸ್ವಸ್ಥ ಇಂದ್ರಿಯ, ಸ್ವಸ್ಥ ಇಂಡಿಯಾ" ಎಂಬ ಘೋಷವಾಕ್ಯದೊಂದಿಗೆ ಕಣಚೂರು ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಆಯುರ್ವಿದ್ಯಾಲಯ ವತಿಯಿಂದ ಆಯೋಜಿಸಲಾದ AYURGRAMA 3.0- ಇಂದ್ರಿಯ ಆರೋಗ್ಯ ಸಪ್ತಾಹ 2026 ಜುಲೈ 13 ರಿಂದ ಜುಲೈ 20 ರವರೆಗೆ ಯಶಸ್ವಿಯಾಗಿ ನಡೆಯಿತು.
ಸಪ್ತಾಹದ ಸಮಾರೋಪ ಸಮಾರಂಭವು ಸೋಮವಾರ ಕಣಚೂರು ಆಯುರ್ವೇದ ಮೆಡಿಕಲ್ ಕಾಲೇಜಿನ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮೊಹಮ್ಮದ್ ಸುಹೇಲ್ ಅವರು ಪ್ರಧಾನ ಭಾಷಣ ಮಾಡಿ, ಆಯುರ್ವೇದ ಮತ್ತು ಆಧುನಿಕ ಚಿಕಿತ್ಸಾ ಪದ್ಧತಿಗಳ ಸಮನ್ವಯದ ಮಹತ್ವವನ್ನು ವಿವರಿಸಿದರು.
ವೈದ್ಯಕೀಯ ನಿರ್ದೇಶಕ ಡಾ. ಸುರೇಶ್ ನೆಗಳಗುಳಿ ಅವರು ಮಾತನಾಡಿ, ಸ್ವಾಸ್ಥ್ಯ ಪರಿಪಾಲನೆಯ ಮಹತ್ವ ಹಾಗೂ ಗ್ರಾಮ ದತ್ತು ತೆಗೆದುಕೊಳ್ಳುವುದರಿಂದ ಗ್ರಾಮವೇ ಆರೋಗ್ಯವಾಗಿರುವುದಕ್ಕೆ ದೊಡ್ಡ ಸೇವೆ ಮಾಡಿದಂತಾಗುತ್ತದೆ ಎಂದರು. "ವೈದ್ಯ ಸೇವೆಗೆ ನಿವೃತ್ತಿ ಅಥವಾ ವಿಶ್ರಾಂತಿ ಇಲ್ಲ. ವೈದ್ಯನು ಸದಾ ಕ್ರಿಯಾಶೀಲನಾಗಿರುತ್ತಾನೆ" ಎಂದು ಅವರು ಹೇಳಿದರು.
ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿದ್ಯಾಪ್ರಭ ಅವರು ಅಧ್ಯಕ್ಷತೆ ವಹಿಸಿ ಕಿವಿಮಾತು ನೀಡಿದರು. ಆಯುರ್ವೇದ ಮೂಲಕ ಪಂಚೇಂದ್ರಿಯಗಳ ಆರೋಗ್ಯ ಕಾಪಾಡುವ ಅಗತ್ಯದ ಬಗ್ಗೆ ಅವರು ಮಾತನಾಡಿದರು.
ಸಮಾರಂಭದಲ್ಲಿ ವಾರವಿಡೀ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು. "Celebrating the Journey of Healthy Senses through Ayurveda" ಎಂಬ ಧ್ಯೇಯದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆ, ಸ್ವಾಗತ, ಪ್ರಸ್ತುತಿ, ವಂದನಾರ್ಪಣೆ ಮತ್ತು ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ವೈದ್ಯ ಅಧೀಕ್ಷಕ ಡಾ. ಕಾರ್ತಿಕ್, ಉಪ ಪ್ರಾಂಶುಪಾಲೆ ಡಾ. ಭವ್ಯಾ, ಡಾ. ಶ್ರೀರಾಮ್, ಡಾ. ಸೌಮ್ಯ, ಡಾ. ದೀನಮಂಜು, ಡಾ. ಗಾಯತ್ರಿ, ಡಾ. ಅಶ್ವಿನ್ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅನ್ಯ ರಾವ್ ಸ್ವಾಗತಿಸಿ, ಶೃತಿ ಶಿಂದೆ ವಂದಿಸಿದರು. ಹಂಸವರ್ಷಿಣಿ ಮತ್ತು ಹಫ್ಸಾ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

