ವನಮಹೋತ್ಸವ ಅಂಗವಾಗಿ ಬೀಜ ಉಂಡೆ ತಯಾರಿಕೆ ಕಾರ್ಯಕ್ರಮ

Upayuktha
0



ಮಂಗಳೂರು: ವನಮಹೋತ್ಸವದ ಅಂಗವಾಗಿ ಕೆನರಾ ನಂದಗೋಕುಲ ಶಾಲೆ ಹಾಗೂ ಕೆನರಾ ಇಂಟರ್‌ನ್ಯಾಷನಲ್ ಶಾಲೆಯ ಸಹಯೋಗದಲ್ಲಿ ರೋಟರಿ ಕ್ಲಬ್ ಆಫ್ ಮಂಗಳೂರು ಹಿಲ್-ಸೈಡ್ ವತಿಯಿಂದ ಮಂಗಳವಾರ ಬೀಜ ಉಂಡೆ ತಯಾರಿಕೆ ಕಾರ್ಯಕ್ರಮ ನಡೆಯಿತು.


ರೋಟೇರಿಯನ್ ಸತೀಶ್ ಬಿ.ಕೆ. ಅವರ ಪರಿಕಲ್ಪನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 200 ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಬೀಜ ಉಂಡೆಗಳನ್ನು ತಯಾರಿಸುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಅರಿತುಕೊಂಡರು.


ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡು, ಶ್ರೀಮತಿ ನಯನಾ ಸ್ವಾಗತಿಸಿದರು. ಕೆನರಾ ನಂದಗೋಕುಲ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಉಜ್ವಲ್ ಮಲ್ಯ ಹಾಗೂ ಕೆನರಾ ಇಂಟರ್‌ನ್ಯಾಷನಲ್ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ತೃಪ್ತಿ ರೈ ಅವರು ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ ಬೆಳೆಸುವ ಅಗತ್ಯವನ್ನು ತಿಳಿಸಿದರು.


ರೋಟರಿ ಕ್ಲಬ್ ಅಧ್ಯಕ್ಷೆ ರೊಟೇರಿಯನ್ ದೀಪಾ ಎಸ್. ರಾವ್, ಸಹಾಯಕ ಗವರ್ನರ್ ರೊಟೇರಿಯನ್ ಪ್ರವೀಣ್ ಚಂದ್ರ ಶರ್ಮಾ, ಯೂತ್ ಸರ್ವಿಸ್ ನಿರ್ದೇಶಕಿ ರೊಟೇರಿಯನ್ ಪ್ರಸನ್ನ ಲಕ್ಷ್ಮೀ, ಚಾರ್ಟರ್ ಸದಸ್ಯ ರೊಟೇರಿಯನ್ ವಿಷ್ಣು ಶೇವಗೂರ್ ಹಾಗೂ ಕ್ಲಬ್‌ನ ಇತರ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಬೀಜ ಉಂಡೆ ತಯಾರಿಕೆ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು. ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಶಾಶ್ವತ ಪರಿಣಾಮ ಸೃಷ್ಟಿಸುವ ರೋಟರಿ ಕ್ಲಬ್‌ನ ಬದ್ಧತೆಯನ್ನು ಈ ಕಾರ್ಯಕ್ರಮವು ಮತ್ತೊಮ್ಮೆ ಪ್ರತಿಬಿಂಬಿಸಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top