ಬರುತ್ತಿದ್ದಾಳೆ "ಶ್ರೀಮತಿ ಸತ್ಯಭಾಮ": ಕೊಡಿಯಾಲ್ ಬೈಲ್ ಅವರ ಕಲಾಸಂಗಮದ ಹೊಸ ನಾಟಕ

Upayuktha
0



ಮಂಗಳೂರು: ಆ ಪೋಸ್ಟರೇ ಹೊಸತನವನ್ನು ತುಂಬಿಕೊಂಡಿದೆ, ತಬ್ಬಿಕೊಂಡಿದೆ. "ಶ್ರೀಮತಿ ಸತ್ಯಭಾಮ" ಟೈಟಲ್ ಅನ್ನೇ ಆಭರಣ, ಸೀರೆಯಿಂದ ಅಲಂಕರಿಸಲಾಗಿದೆ. Born to Rule ಎಂಬ ಅಡಿಬರಹ ಹಾಗೂ ಸತ್ಯಭಾಮ ನಿಂತ ಭಂಗಿಯು ಆಕೆಯ ಪಾತ್ರ ಎಂಥದ್ದು ಎಂಬುದನ್ನೂ ಸೂಚಿಸುತ್ತದೆ. ಅವೆಲ್ಲವುಗಳಿಂದ ಮುಖ್ಯವಾಗಿ -ಕೈಲಾಸ ವೈಕುಂಠ ತಿರ್ಗ್ದ್ ಕಲಾಸಂಗಮ ಕುಡ ಭೂಲೋಕೊಗು ಎಂಬ ಒಂದು ವಾಕ್ಯದ ಮೂಲಕ ಈ ತಂಡವು ಪೌರಾಣಿಕ ಕಥೆಗಳ ಬಳಿಕ ಮತ್ತೆ ಸಾಮಾಜಿಕ ಕಥೆಗೆ ಹೊರಳಿದೆ ಎಂಬುದನ್ನು ವಿಭಿನ್ನವಾಗಿ ತಿಳಿಸುವ ಪ್ರಯತ್ನ  ಮಾಡಿದೆ.


ತುಳು ರಂಗಭೂಮಿಯ ಬದಲಾವಣೆಯ ಹರಿಕಾರ, ಹೊಸತನದ ರೂವಾರಿ ಎಂದೇ ಗುರುತಿಸಿಕೊಂಡಿರುವ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಎರಡು ಮೂರು ವರ್ಷಗಳಿಂದ ಪೌರಾಣಿಕ, ಐತಿಹಾಸಿಕ ನಾಟಕಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಈಗ ಮತ್ತೆ ಸಾಮಾಜಿಕ ನಾಟಕಕ್ಕೆ ಮರಳಿದ್ದಾರೆ. ಈ ಹಿಂದೆಯೂ ಅವರು ಒರಿಯರ್ದೊರಿ ಅಸಲ್, ಮದಿಮೆ, ಕುಟುಂಬ, ಕೋಡೆ- ಇನಿ- ಎಲ್ಲೆ, ಮೈತಿದಿ ಮುಂತಾದ ಸಾಮಾಜಿಕ ನಾಟಕಗಳ ಮೂಲಕ ಜನರ ಮನಸ್ಸು ಗೆದ್ದವರು. ಅದಾದ ಬಳಿಕ ಅವರಿಗೆ "ಶಿವದೂತೆ ಗುಳಿಗೆ" ನಾಟಕವು ಅಪಾರ ಖ್ಯಾತಿ ಮತ್ತು ಜನಪ್ರಿಯತೆಯನ್ನು ತಂದು ಕೊಟ್ಟಿದೆ. ಅದರ ಬೆನ್ನಿಗೆ "ಛತ್ರಪತಿ ಶಿವಾಜಿ" ನಾಟಕದ ಮೂಲಕ ಜನಮನ್ನಣೆ ಗಳಿಸಿದರು. ಈಗ ಈ ಬಾರಿ  "ಶ್ರೀಮತಿ ಸತ್ಯಭಾಮ" ಎಂಬ ಸಾಮಾಜಿಕ ನಾಟಕದ ಮೂಲಕ ಜನರ ಮುಂದೆ ಬರಲಿದ್ದಾರೆ. 


"ಶ್ರೀಮತಿ ಸತ್ಯಭಾಮ" ನಾಟಕದ ಪೋಸ್ಟರ್ ಗಳು ವಾಟ್ಸಾಪ್ ಗ್ರೂಪ್ ಗಳಲ್ಲಿ ಭರ್ಜರಿಯಾಗಿ ಹರಿದಾಡುತ್ತಿದೆ. ಮುಖ್ಯವಾಗಿ ಸತ್ಯಭಾಮ ಪಾತ್ರಧಾರಿಯ ಬಗ್ಗೆ ಸಾಕಷ್ಟು ಕುತೂಹಲವಿದೆ. ಯಾರು ಮಾಡಿರಬಹುದು ಈ ಪಾತ್ರವನ್ನು ಎಂಬ ಕುತೂಹಲವನ್ನು ತಣಿಸಲು ಸದ್ಯಕ್ಕಂತೂ ಕೊಡಿಯಾಲ್‌ಬೈಲ್ ಸಿದ್ದರಿಲ್ಲ. ತಂಡದಲ್ಲಿ ಯಾವೆಲ್ಲ ಪ್ರಮುಖ ಕಲಾವಿದರು ಇದ್ದಾರೆ ಎಂಬುದನ್ನೂ ಕಾದು ನೋಡಬೇಕಷ್ಟೆ.


ಈ ನಾಟಕದಲ್ಲೂ ಅದ್ದೂರಿ ಸೆಟ್ಟಿಂಗ್, ವಿಶೇಷ ತಾಂತ್ರಿಕತೆ ಬಳಸಲು ಕೊಡಿಯಾಲ್ ಬೈಲ್ ಮುಂದಾಗಿದ್ದಾರೆ. ಅದ್ದೂರಿತನ, ತಾಂತ್ರಿಕತೆಯಿಂದಲೇ "ಶಿವಧೂತೆ ಗುಳಿಗೆ' ಜನಮಚ್ಚುಗೆ ಪಡೆದಿದೆ. ಆದ್ದರಿಂದ ಹೊಸ ನಾಟಕದಲ್ಲೂ ಅದ್ದೂರಿತನಕ್ಕೆ ಕಿಂಚಿತ್ತೂ ಕೊರತೆಯಾಗಬಾರದು ಎಂದು ಕೊಡಿಯಾಲ್‌ಬೈಲ್ ವಿಶೇಷ ಆಸ್ಥೆ ವಹಿಸಿದ್ದಾರೆ. ಸಂಗೀತದ ವಿಷಯಕ್ಕೆ ಬಂದರೆ  ಮತ್ತೆ ಅದೇ ಹೆಮ್ಮೆಯ ಎ.ಕೆ. ವಿಜಯ್ ಕೋಕಿಲಾ ಅವರೇ ಕೆಲಸ ಮಾಡಿದ್ದಾರೆ. ಇವರು ಕಲಾಸಂಗಮದ ಹೆಮ್ಮೆಯ ಮತ್ತು ಖಾಯಂ ಸಂಗೀತ ನಿರ್ದೇಶಕರಾಗಿದ್ದಾರೆ. ಕೊಡಿಯಾಲ್‌ಬೈಲ್ ಅವರ ಎಲ್ಲ ಯಶಸ್ವಿ ನಾಟಕಗಳ ಹಿಂದೆ ಈ ಸಂಗೀತ ನಿರ್ದೇಶಕರ ಕೊಡುಗೆ ಪ್ರಮುಖವಾಗಿದೆ.


ಶ್ರೀಮತಿ ಸತ್ಯಭಾಮ ಮೇಕಪ್‌ಗೆ ಕುಳಿತಿದ್ದಾಳೆ. ಸದ್ಯದಲ್ಲೇ ಎದ್ದು ಬರಲಿದ್ದಾಳೆ ನಿಮ್ಮ ಮುಂದೆ. ಸ್ವಾಗತಿಸಲು ಸಿದ್ಧರಾಗಿ.


ನವಂಬರ್ 1ರಂದು ಸುರತ್ಕಲ್ ನಲ್ಲಿ "ಶ್ರೀಮತಿ ಸತ್ಯಭಾಮ"

ವಿಜಯಕುಮಾರ್ ಕೊಡಿಯಾಲ್ ಬೈಲ್ ಯಾವುದೇ ಹೊಸ ನಾಟಕಗಳನ್ನು ಮಾಡುವಾಗ ಅಲ್ಲಿ ಅದ್ದೂರಿತನವನ್ನು ಉಳಿಸಿಕೊಳ್ಳುತ್ತಾರೆ. ತಾಂತ್ರಿಕತೆಯನ್ನೂ ಧಾರಾಳವಾಗಿ ಬಳಸಿಕೊಳ್ಳುತ್ತಾರೆ. ಈ ಮೂಲಕ ಒಂದು ಹೊಸತನ ಹಾಗೂ ಭಿನ್ನತೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಈಗ "ಶ್ರೀಮತಿ ಸತ್ಯಭಾಮ" ನಾಟಕದಲ್ಲೂ ಆ ಹೊಸತನ, ಅದ್ದೂರಿತನ ಕಂಡುಬರಲಿದೆ. ಪ್ರಸ್ತುತ ಅವರು ನಾಟಕ ರಚನೆ ಮತ್ತು ನಿರ್ದೇಶನದಲ್ಲಿ ಬಿಝಿಯಾಗಿದ್ದಾರೆ. ಅಕ್ಟೋಬರ್ ತಿಂಗಳ ಕೊನೆಯಲ್ಲಿ "ಶ್ರೀಮತಿ ಸತ್ಯಭಾಮ" ನಮ್ಮ, ನಿಮ್ಮೆಲ್ಲರ ಊರಿಗೆ ಬರಲಿದ್ದಾಳೆ. ಹೀಗೆ ಸುತ್ತಾಡುತ್ತಾ ನವೆಂಬರ್ 1ರಂದು  ರವಿವಾರ ಸಂಜೆ ಸುರತ್ಕಲ್‌ಗೆ ಬರುತ್ತಿದ್ದಾಳೆ. ಅಂದು ಶ್ರೀಮತಿ ಸತ್ಯಭಾಮಾಳ ಸಂಪೂರ್ಣ ಪರಿಚಯ ಪಡೆದುಕೊಳ್ಳಬಹುದು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top