ಮಂಗಳೂರು: ಮಂಗಳೂರು ನಗರದ ಶ್ರೀನಿವಾಸ ವಿಶ್ವವಿದ್ಯಾಲಯದ "ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಸೈನ್ಸ್ ಆಂಡ್ ಇನ್ ಫರ್ಮೇಶನ್ ಸೈನ್ಸ್" ಕಾಲೇಜಿನಲ್ಲಿ 'ಟೆಕ್-ಹೊರೈಜಾನ್ 2026' ಎನ್ನುವ ಅಂತರಾಷ್ಟ್ರೀಯ ಮಟ್ಟದ ಸಮ್ಮೇಳನ ಜೂನ್ 19 & 20 ರಂದು ನಡೆಯಿತು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ, ಆಡಳಿತ ಮಂಡಳಿಯ ಸದಸ್ಯರಾದ ಪ್ರೊ| ಇಂಜಿನಿಯರ್ ಎ. ಮಿತ್ರಾ ಎಸ್ ರಾವ್ ಅವರು, ಇಂತಹ ಸಮ್ಮೇಳನಗಳು ನಾವು ನಮ್ಮ ಸಂಶೋಧನಾ ಚಿಂತನೆಗಳನ್ನು ಜಗತ್ತಿನ ಮುಂದೆ ತೆರೆದಿಡಲು ಸಹಕಾರಿಯಾಗಿದೆ ಎಂದರು.
ವಿಶೇಷ ಅತಿಥಿಯಾದ ಇ.ಜಿ.ಡಿ.ಕೆ ಇಂಡಿಯಾ ಖಾಸಗಿ ಸಂಸ್ಥೆಯ ಪ್ರಧಾನ ದತ್ತಾಂಶ ವಿಜ್ಞಾನಿ ಮತ್ತು ಎಐ ಸೆಂಟರ್ ಆಫ್ ಎಕ್ಸೆಲೆನ್ಸ್ ಮುಖ್ಯಸ್ತರೂ ಆಗಿರುವ ಡಾ. ಪ್ರಖ್ಯಾತ್ ರೈ ಮಾತನಾಡಿ, ಕೃತಕ ಬುದ್ದಿಮತ್ತೆಯ ನಿಖರತೆಯನ್ನು ಉನ್ನತೀಕರಿಸುವಲ್ಲಿ ಸಂಶೋಧನೆಗಳ ಪಾತ್ರ ಪ್ರಮುಖವಾಗಿದೆ ಎಂದರು.
ಆಡಳಿತ ಮಂಡಳಿಯ ಸದಸ್ಯರಾದ ಕು| ಎ. ಮೇಘನಾ ಎಸ್ ರಾವ್ ಮಾತನಾಡಿ ಕೃತಕ ಬುದ್ದಿಮತ್ತೆಯ ಬಳಕೆಯಲ್ಲಿ ನೈತಿಕ ಪರಿಗಣನೆಯ ಅಗತ್ಯ ಬಹಳಷ್ಟಿದೆ ಎಂದು ಹೇಳಿದರು.
ಸಂಸ್ಥೆಯ ಡೀನ್ ಡಾ. ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕ ಭಾಷಣದಲ್ಲಿ, ಕೃತಕ ಬುದ್ದಿಮತ್ತೆಯ ಹೆಚ್ಚಿನ ಲಾಭ ಕೇವಲ ಕಾರ್ಪೊರೇಟ್ ಸಂಸ್ಥೆಗಳು ಮಾತ್ರ ಪಡೆಯುತ್ತಿದ್ದು, ಇದು ಸಾಮಾನ್ಯ ಪ್ರಜೆಗಳಿಗೂ ಲಭಿಸುವ ನಿಟ್ಟಿನಲ್ಲಿ ಸಂಶೋಧನೆಗಳು ಆಗಬೇಕಿದೆ ಎಂದು ಆಶಿಸಿದರು.
ಸಮ್ಮೇಳನದಲ್ಲಿ ದೇಶದ ವಿವಿಧ ಮೂಲೆಗಳ ಸಂಶೋಧಕರು ಮತ್ತು ವಿದ್ಯಾರ್ಥಿಗಳಿಂದ ಆಯ್ದ 86 ಸಂಶೋದನಾ ಪ್ರಬಂಧಗಳನ್ನು ಮಂಡಿಸಲಾಯಿತು. ಪ್ರೊ| ಶ್ಯಾಮಲಾ ಸನಿಲ್ ಸ್ವಾಗತಿಸಿದರು. ಸಹ ಸಂಚಾಲಕರಾದ ಪ್ರೊ| ಅಭಿಷೇಕ್ ವರ್ನೇಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಚಾಲಕಿಯಾದ ಡಾ| ಸೌಮ್ಯಾ ಎಸ್ ಅವರು ವಂದಿಸಿದರು. ಪ್ರೊ| ರಿಯಾ ಉಪ್ಪಳ ಮತ್ತು ಪ್ರೊ| ರಾಧಿಕಾ ಮಲ್ಯ ಅವರು ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


