ಯುವ ನಾಯಕತ್ವ ಉಜ್ವಲ ಭವಿಷ್ಯದ ಅಡಿಪಾಯ: ಕೃಷ್ಣಕುಮಾರ್ ಶೆಟ್ಟಿ

Upayuktha
0

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ “ವಿವೇಕ ಮುನ್ನುಡಿ-2026”.


ಪುತ್ತೂರು: ವಿದ್ಯಾರ್ಥಿ ಶಕ್ತಿ ಅತ್ಯಂತ ವಿಶೇಷವಾದದ್ದು ಮತ್ತು ಪ್ರಭಾವಶಾಲಿಯಾದುದು. ಸಮರ್ಪಕವಾದ ಈ ಸಂಘಟನಾ ಶಕ್ತಿಯನ್ನು ಬಳಸಿಕೊಂಡರೆ ಸಮಾಜದಲ್ಲಿ ಧನಾತ್ಮಕವಾದ ಬೆಳವಣಿಗೆಯನ್ನು ರೂಪಿಸಬಹುದಾಗಿದೆ. ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು-ಹೆಚ್ಚು ತೊಡಗಿಸಿಕೊಂಡಷ್ಟು ನಾಯಕತ್ವ ಗುಣ ಬೆಳೆಯಲು ಸಾಧ್ಯವಾಗುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಕೃಷ್ಣಕುಮಾರ್ ಶೆಟ್ಟಿ ಹೇಳಿದರು. 

       

ವಿವೇಕಾನಂದ ಕಾಲೇಜಿನ ಕೇಶವ ಸಂಕಲ್ಪ ಸಭಾಂಗಣದಲ್ಲಿ ನಡೆದ 2026-27 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಯುವಕರಿಗೆ ಸೂಕ್ತ ಮಾರ್ಗದರ್ಶನ ದೊರೆತಾಗ ಸಮಾಜದಲ್ಲಿ ಮೇಲ್ಪಂಕ್ತಿಯಲ್ಲಿ ಗುರುತಿಸಲು ಸಾಧ್ಯ. ನಿರಂತರವಾದ ಶ್ರಮ ಎಂದಿಗೂ ಸಾಧನೆಯ ತುತ್ತತುದಿಗೆ ತಲುಪಿಸುವಲ್ಲಿ ಸಹಕಾರಿಯಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡರೆ ಭವಿಷ್ಯದಲ್ಲಿ ಯಶಸ್ವಿ ವ್ಯಕ್ತಿಗಳಾಗಿ ಬೆಳೆಯುವಲ್ಲಿ ಯಾವುದೇ ಸಂದೇಹವಿಲ್ಲ. ಶಿಕ್ಷಣದ ಜೊತೆ ರಾಷ್ಟ್ರನಿರ್ಮಾಣದ ಜವಾಬ್ದಾರಿ ಹೊತ್ತಾಗ ಉತ್ತಮ ದೇಶ ನಿರ್ಮಿಸಲು ಸಾಧ್ಯ. ಅಂತಹ ವಿದ್ಯಾರ್ಥಿಗಳು ರಾಷ್ಟ್ರದ ಶಕ್ತಿ ಹಾಗೂ ಆಸ್ತಿಯಾಗಿ ಹೊರಹೊಮ್ಮುವಂತಾಗಲಿ ಎಂದು ಆಶಿಸಿದರು. 


ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿಯ  ಅಧ್ಯಕ್ಷರಾದ ರವೀಂದ್ರ ಪಿ. ಮಾತನಾಡುತ್ತಾ, ನಾಯಕತ್ವ ಗುಣ ಇದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ. ನಾಯಕತ್ವ ಎಂದರೆ ಜವಾಬ್ದಾರಿ. ಅದರ ಹಾದಿ ಸುಲಭದ್ದಲ್ಲ. ಸ್ವಂತ ಸುಖಕ್ಕಿಂತ ಪರರ ಸುಖದ ಬಗೆಗೆ ಚಿಂತಿಸುವವನು ಉತ್ತಮ ನಾಯಕನಾಗುತ್ತಾನೆ. ನಾಯಕತ್ವ ಬೆಳೆಯಲು ಆತ್ಮವಿಶ್ವಾಸ ಅತೀ ಮುಖ್ಯವಾಗಿದ್ದು, ದೇಶವನ್ನು ನಡೆಸುವ, ನೇತೃತ್ವವನ್ನು ಸ್ವೀಕರಿಸುವ, ತಪ್ಪನ್ನು ಮನ್ನಿಸದೆ ಮುನ್ನಡೆಸುವ ಸಮರ್ಥ ನಾಯಕನ ಅವಶ್ಯಕತೆ ಇಂದಿನ ದಿನಗಳಿಗಿದೆ. ಸಂಸ್ಕಾರ- ಸಂಸ್ಕೃತಿ ಜೊತೆಗೂಡಿಗೊಂಡಾಗ ನಾಯಕತ್ವ ಕಳೆಗಟ್ಟುತ್ತದೆ ಎಂದು ಕಿವಿಮಾತು ಹೇಳಿದರು. 


ಪ್ರಸಕ್ತ ಶೈಕ್ಷಣಿಕ ಸಾಲಿನ ಕಾಲೇಜು ವಿದ್ಯಾರ್ಥಿ ಸಂಘದ ಪ್ರತಿನಿಧಿಗಳ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಕಾಲೇಜು ಅಧ್ಯಕ್ಷರಾಗಿ ದ್ವಿತೀಯ ವಾಣಿಜ್ಯ ವಿಭಾಗದ ಕೆ.ಆರ್ ದಿಶಾಂತ್ , ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ನೇಹಾ ಅನೀಶ್ ಎನ್ ಜೊತೆ ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ವರ್ಷಿಣಿ  ಕ್ರೀಡಾ ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ಕಾರ್ತಿಕ್ ಕೆಮ್ಮಿಂಜೆ ಹಾಗೂ ಕ್ರೀಡಾ ಜತೆ ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ಡಿಂಪಲ್ ಶೆಟ್ಟಿ ಆಯ್ಕೆಯಾಗಿರುತ್ತಾರೆ. ನೂತನವಾಗಿ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿ ಹಾಗೂ ಕ್ರೀಡಾ ಪ್ರತಿನಿಧಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ ಎಂ. ಪ್ರಮಾಣವಚನ ಬೋಧಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀಧರ ಶೆಟ್ಟಿಗಾರ್ ಚುನಾವಣಾ ಪ್ರಕ್ರಿಯೆಯ ವರದಿಯನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕ ಗಳಿಸಿದ , ಕ್ರೀಡಾ ಕ್ಷೇತ್ರ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.  


ಕಾರ್ಯಕ್ರಮದಲ್ಲಿ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು, ವಿದ್ಯಾರ್ಥಿ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ ಎಂ. ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಉಪನ್ಯಾಸಕಿಯರಾದ ಮಮತಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ, ಸವಿತಾ ಎಸ್ ವಂದಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.  


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 





Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top