ವಿಶ್ವ ಯೋಗಾಸನ ಚಾಂಪಿಯನ್‌ಶಿಪ್: ಭಾರತಕ್ಕೆ ಭರ್ಜರಿ ಜಯ, ಚಿನ್ನದ ಪದಕ ಗೆದ್ದ ಹೀನಾ ರಾಜಗೋರ್

Upayuktha
0



ಅಹಮದಾಬಾದ್, ಜೂನ್ 7: ವಿಶ್ವ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತನ್ನ ಪ್ರಾಬಲ್ಯವನ್ನು ಮುಂದುವರಿಸಿದ್ದು, ಮಾಜಿ ಮಿಸ್ ಗುಜರಾತ್ ಸೂಪರ್ ಮಾಡೆಲ್ ವಿಜೇತೆ ಹೀನಾ ರಾಜಗೋರ್ ಭಾರತಕ್ಕೆ ಚಿನ್ನದ ಪದಕ ಗೆದ್ದು ತಂದಿದ್ದಾರೆ.


ಇಕೆಎ (EKA) ಅರೆನಾದಲ್ಲಿ ನಡೆಯುತ್ತಿರುವ ಈ ಚಾಂಪಿಯನ್‌ಶಿಪ್‌ನಲ್ಲಿ ಭಾರತವು 40 ಚಿನ್ನ, 8 ಬೆಳ್ಳಿ ಮತ್ತು 2 ಕಂಚು ಸೇರಿದಂತೆ ಒಟ್ಟು 50 ಪದಕಗಳನ್ನು ಗೆದ್ದು, ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.


ಜಪಾನ್ ಮೂರು ಚಿನ್ನದ ಪದಕಗಳೊಂದಿಗೆ ಒಟ್ಟು 10 ಪದಕಗಳನ್ನು ಗಳಿಸಿ ಎರಡನೇ ಸ್ಥಾನದಲ್ಲಿದ್ದರೆ, ಎರಡು ಚಿನ್ನ ಸೇರಿದಂತೆ ಆರು ಪದಕಗಳನ್ನು ಗೆದ್ದಿರುವ ಸಿಂಗಾಪುರ ಮೂರನೇ ಸ್ಥಾನದಲ್ಲಿದೆ.


ಗುಜರಾತ್‌ನ ಭುಜ್ ಮೂಲದ ಹೀನಾ ರಾಜಗೋರ್, ಪ್ರಸ್ತುತ ಯೋಗದಲ್ಲಿ ಪಿಎಚ್‌ಡಿ (PhD) ಅಧ್ಯಯನ ಮಾಡುತ್ತಿದ್ದು, ಹಿರಿಯರ 'ಬಿ' ಮಹಿಳಾ ವಿಭಾಗದ ಫಾರ್ವರ್ಡ್ ಬೆಂಡ್ ಸ್ಪರ್ಧೆಯಲ್ಲಿ 43.50 ಅಂಕಗಳನ್ನು ಗಳಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಓಮನ್‌ನ ಪ್ರೀತಿ ಜೈಮಾನಿ ಬೆಳ್ಳಿ ಪದಕ ಗೆದ್ದರೆ, ರಷ್ಯಾದ ಸ್ವೆಟ್ಲಾನಾ ಲುಕಾಶೋವಾ ಮತ್ತು ಜೋರ್ಡನ್‌ನ ಮಾಯಾ ಅಲ್ ಅಲೋಸ್ಥಾತ್ ಕಂಚಿನ ಪದಕಗಳನ್ನು ಹಂಚಿಕೊಂಡರು.


“ತವರಿನಲ್ಲಿ ಚಿನ್ನದ ಪದಕ ಗೆಲ್ಲುವುದು ವಿಶೇಷ ಅನುಭವ. ಕೋವಿಡ್ ನಂತರ ಸ್ಪರ್ಧಾತ್ಮಕ ಯೋಗಾಸನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೆ. ಬಳಿಕ ಮಾನಸಿಕ ಏಕಾಗ್ರತೆಯ ಮೇಲೆ ಗಮನಹರಿಸಿದ್ದು, ಅದರ ಫಲ ಈಗ ಕಾಣಿಸುತ್ತಿದೆ” ಎಂದು ಹೀನಾ ಸಂತಸ ವ್ಯಕ್ತಪಡಿಸಿದರು.


ಭಾರತೀಯ ಅಥ್ಲೀಟ್‌ಗಳು ವಿವಿಧ ವಿಭಾಗಗಳಲ್ಲಿ ಪದಕಗಳ ಬೇಟೆ ಮುಂದುವರಿಸಿದ್ದರೆ, ಜಪಾನ್‌ನ ಹಿಸಾಶಿ ವತಾನಬೆ ಮತ್ತು ಟೊಮೊಕಾ ಶಿಮಿಜು ತಮ್ಮ ವಿಭಾಗಗಳಲ್ಲಿ ಚಾಂಪಿಯನ್‌ಗಳಾಗಿ ಹೊರಹೊಮ್ಮಿದರು.


ರಷ್ಯಾದ ಸ್ವೆಟ್ಲಾನಾ ಲುಕಾಶೋವಾ ಸೀನಿಯರ್ ‘ಬಿ’ ಮಹಿಳಾ ಸೂಪೈನ್ ಇಂಡಿವಿಜುವಲ್ ವಿಭಾಗದಲ್ಲಿ ಚಿನ್ನ ಗೆದ್ದರೆ, ಉಜ್ಬೇಕಿಸ್ತಾನದ ಕಾಮೋಲಾತ್ದಿನ್ ರಖ್ಮಾನೊವ್ ಲೆಗ್ ಬ್ಯಾಲೆನ್ಸ್ ಇಂಡಿವಿಜುವಲ್ ಸೀನಿಯರ್ ‘ಸಿ’ ಪುರುಷ ವಿಭಾಗದಲ್ಲಿ ಜಯ ಸಾಧಿಸಿ, ತಮ್ಮ ದೇಶಕ್ಕೆ ಈ ಚಾಂಪಿಯನ್‌ಶಿಪ್‌ನ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top