ಪುತ್ತೂರು: ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ (ಪುತ್ತೂರು ತಾಲೂಕು ಮತ್ತು ಗ್ರಾಮಾಂತರ) ಮತ್ತು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು ಇವರ ಜಂಟಿ ಆಯೋಜಕತ್ವದಲ್ಲಿ,ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ ಕೇಂದ್ರಗಳ ಸಹಯೋಗದೊಂದಿಗೆ ಈ ವಿಶಿಷ್ಟ "ಸಾಮೂಹಿಕ ಸರಸ್ವತೀ ವಂದನೆ" ಮತ್ತು "ವಿದ್ಯಾ ಸಂಕಲ್ಪ" ಕಾರ್ಯಕ್ರಮವು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಅತ್ಯಂತ ಭಕ್ತಿಭಾವದಿಂದ ಜರುಗಿತು.
ಬೆಳಗ್ಗೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಸಹಿತವಾಗಿ ಕೇಶವಪ್ರಸಾದ ಮುಳಿಯ ಹವನದ ಸಂಕಲ್ಪ ನೆರವೇರಿಸಿದರು. ಜಯರಾಮ ಜೋಯಿಸ್ ಮತ್ತು ತಂಡವು ಸರಸ್ವತೀ ಸೂಕ್ತ ಹವನವನ್ನು ನಡೆಸಿಕೊಟ್ಟರು.
ದೇವಾಲಯಗಳ ಸಂವರ್ಧನಾ ಸಮಿತಿ, ಮಂಗಳೂರು ವಿಭಾಗದ ವಿಭಾಗ ಪ್ರಮುಖ್ ಕೇಶವ್ ಪ್ರಸಾದ್ ಮುಳಿಯ, ಇವರು ವಿದ್ಯಾರ್ಥಿ ಗಳಿಗೆ ಈ ಶೈಕ್ಷಣಿಕ ವರ್ಷದ ಪ್ರತಿಜ್ಞಾ ಪೂರ್ವಕ ಸಂಕಲ್ಪವನ್ನು ಭೋದಿಸಿದರು. ಪೂರ್ಣಾಹುತಿ ಸಂದರ್ಭದಲ್ಲಿ ಸುಭಾಷ್ ರೈ ಬೆಳ್ಳಿಪ್ಪಾಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರು, ದೇವಾಲಯ ಸಂವರ್ಧನಾ ಸಮಿತಿಯ ಪ್ರಮುಖರಾದ ರವೀಂದ್ರನಾಥ್ ರೈ, ರಾಮ್ ದಾಸ್ ಗೌಡ, ರಾಧಾಕೃಷ್ಣ ನಂದಿಲ, ಕೃಷ್ಣಕುಮಾರ್ ಅತ್ರಿಜಾಲು, ಸಂಪತ್ ಕುಮಾರ್, ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ ಸಂಯೋಜಕರಾದ ಕೃಷ್ಣವೇಣಿ ಪ್ರಸಾದ್ ಮುಳಿಯ, ಧಾರ್ಮಿಕ ಶಿಕ್ಷಣ ಕೇಂದ್ರದ ಬೋಧಕರಾದ ವಿ.ಪ್ರಭಾವತಿ, ಸುಧಾ ಹೆಬ್ಬಾರ್, ಚಂದ್ರಪ್ರಭಾ, ಶಂಕರಿ ಶರ್ಮ, ವಿಜಯ ಸರಸ್ವತಿ, ಸುಮಂಗಲ, ಕವಿತಾ ಕೊಳತ್ತಾಯ, ವತ್ಸಲ ರಾಜ್ಞಿ, ವೀಣಾ ಬಿ.ಕೆ, ತೇಜಸ್ವಿ, ಪ್ರಶಾಂತ್ ದೊಡ್ಡಡ್ಕ ಹಾಗೂ ನಿತ್ಯಕರಸೇವಕರ ಅಧ್ಯಕ್ಷರಾದ ವಾದಿರಾಜ್ ಮತ್ತು ತಂಡದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
175 ವಿದ್ಯಾರ್ಥಿಗಳು ಮೊದಲಿಗೆ ಭಕ್ತಿಪೂರ್ವಕ ಭಜನೆಯೊಂದಿಗೆ, ಸರಸ್ವತಿ ಅಷ್ಟೋತ್ತರ ಪಠಿಸುತ್ತಾ, ಪುಸ್ತಕಕ್ಕೆ ಪುಷ್ಪಾರ್ಚನೆ ಮಾಡಿದರು. ಶ್ರೀಯುತ ಮಂಜುಳಗಿರಿ ವೆಂಕಟರಮಣ ಭಟ್ ಇವರು ಸರಸ್ವತಿ ಅಷ್ಟೋತ್ತರ ಮತ್ತು ಶ್ಲೋಕಗಳನ್ನು ಮಕ್ಕಳಿಗೆ ಬೋಧಿಸಿದರು. ವಿದ್ಯಾರ್ಥಿಗಳ ಜೊತೆಗೆ ಜೊತೆಗೆ ಬೋಧಕರು, ಪೋಷಕರು ಹಾಗೂ ಭಕ್ತಾದಿಗಳು ಸೇರಿ ಸರಿ ಸುಮಾರು 275 ಸಂಖ್ಯೆಯಲ್ಲಿ ಭಾಗವಹಿಸಿದರು ಮತ್ತು ಭಕ್ತಿ ಪೂರ್ವಕ ಭಜನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದ ಬಗ್ಗೆ ಆಸಕ್ತಿ, ಸಂಸ್ಕಾರ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ, ದೇವರ ಆಶೀರ್ವಾದದೊಂದಿಗೆ, ಪ್ರಸಾದ, ಪುಸ್ತಕ, ಹಾಗೂ ಶ್ರೀ ದೇವರ ನಾಮ ಬರೆದಂತಹ ಪೆನ್ನನ್ನು ಪ್ರಸಾದ ರೂಪದಲ್ಲಿ ವಿತರಿಸಲಾಯಿತು.
ಅಧಿಕಮಾಸದಲ್ಲಿ ನಡೆದಂತಹ ವಿದ್ಯೆ, ಭಕ್ತಿ ಮತ್ತು ಸಂಸ್ಕಾರದ ಸಂಗಮವಾದ ಸಾಮೂಹಿಕ ಸರಸ್ವತಿ ವಂದನೆ ಕಾರ್ಯಕ್ರಮವು ಅಧಿಕಫಲವನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸಲಾಯಿತು.
ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು, ಶ್ರೀ ಮುಂಡ್ಯತ್ತಾಯ ದೈವಸ್ಥಾನ ಪಾಂಗಳಾಯಿ, ಮುಳಿಯ ದೇವರಕಟ್ಟೆ ಕೋರ್ಟ್ ರಸ್ತೆ, ಅಟಲ್ ಉದ್ಯಾನ ಕೊಂಬೆಟ್ಟು, ಮಾಸ್ಟರ್ ಪ್ಲಾನರಿ ಕಲ್ಲೇಗ, ಶ್ರೀ ಷಣ್ಮುಖ ಸುಬ್ರಹ್ಮಣ್ಯ- ಶ್ರೀ ಮಹಾ ವಿಷ್ಣು ದೇವಸ್ಥಾನ ಕೆಮ್ಮಿಂಜೆ, ಶ್ರೀ ರಾಘವೇಂದ್ರ ಮಠ ಕಲ್ಲಾರೆ ಕೇಂದ್ರಗಳಲ್ಲಿ ಹಿಂದೂ ಧಾರ್ಮಿಕ ಶಿಕ್ಷಣ ನಡೆಯುತ್ತಿದ್ದು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಹಿಂದೂ ಧಾರ್ಮಿಕ ಶಿಕ್ಷಣ ಕಛೇರಿ ದೂರವಾಣಿ ಸಂಖ್ಯೆ 9035888916-
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



