ಆಧ್ಯಾತ್ಮ ಲೋಕದ ಬಾಲರು ಪ್ರೇರಣಾದಾಯಿಗಳು: ಡಾ ವಾಗೀಶ್ವರೀ ಶಿವರಾಂ

Upayuktha
0



ಮಂಗಳೂರು: "ಪುರಾಣ ಜಗತ್ತು ಆಳ ಸಮುದ್ರದಂತೆ ಬಗೆದಷ್ಟು ಮುತ್ತು- ರತ್ನಗಳು- ಸ್ಪಟಿಕ ಮಣಿಗಳು ದೊರೆಯುತ್ತವೆ. ಅಲ್ಲಿ ಕಾಣಸಿಗುವ ಬಾಲಕರ ಬದುಕು ಸಾಹಸಮಯದ್ದಾಗಿದ್ದು ನಮಗೂ ಪ್ರೇರಣೆಯನ್ನು ನೀಡುತ್ತದೆ. ಬೇರೆ ಬೇರೆ ಪುರಾಣಗಳು ಹೇರಳ ಜ್ಞಾನವನ್ನು ಒದಗಿಸುತ್ತವೆ. ನಚಿಕೇತ ನಿಂದಾಗಿ ನಚಿಕೇತೋಪಖ್ಯಾನವೇ ಸೃಷ್ಠಿಯಾಯಿತು. ಚಕ್ರವ್ಯೂಹವನ್ನೇ ಬೇಧಿಸಿದ ಅಭಿಮನ್ಯು, ಬಾಲಕ ಶ್ರವಣ ಕುಮಾರ, ಹೀಗೆ ಈ ಬಾಲಕರು ಸಾಹಸಮಯ ಜಗತ್ತನ್ನೇ ತೆರೆದಿಡುತ್ತಾರೆ. ತಾಯಂದಿರು ತಮ್ಮ ಕಂದಮ್ಮಗಳನ್ನು ಈ ರೂಪದಲ್ಲಿ ಕಾಣಬಯಸುತ್ತಾರೆ. ವಿಪ್ರ ವೇದಿಕೆಯಲ್ಲಿ ಈ ಆಧ್ಯಾತ್ಮ ಬಾಲಕರು ಹಾದು ಹೋದದ್ದು ಮನನೀಯ" ಎಂದು ನಿವೃತ್ತ ಅಧ್ಯಾಪಕ, ಧಾರ್ಮಿಕ ಚಿಂತಕ ಡಾ. ವಾಗೀಶ್ವರೀ ಶಿವರಾಂ ಅವರು ಹೇಳಿದರು.



ಅವರು ಕೋಡಿಕಲ್ ನ ವಿಪ್ರ ವೇದಿಕೆಯ ತಿಂಗಳ ಕಾರ್ಯಕ್ರಮದಲ್ಲಿ ಚಿಂತನಕಾರರಾಗಿ ಭಾಗವಹಿಸಿ, ಮಾತನಾಡಿದರು. ಶ್ರೀಮತಿ ವಿದ್ಯಾ ಗಣೇಶ್ ರಾವ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕಥೆಗಾರರಾಗಿ ವೇ.ಮೂ. ವಿಶ್ವಕುಮಾರ ಜೋಯಿಸರು (ಭಕ್ತ ಮಾರ್ಕಂಡೇಯ), ಶ್ರೀಮತಿ ಸುರೇಖಾ ಶ್ರೀಹರಿ (ಪ್ರಹ್ಲಾದ), ಶ್ರೀಮತಿ ಅಪರ್ಣಾ ಉಪಾಧ್ಯಾಯ (ಭಕ್ತ ಧ್ರುವ) ಭಾಗವಹಿಸಿದ್ದರು.


ಗಣೇಶ್ ರಾವ್ ರವರು ಧನ್ಯವಾದವಿತ್ತರು. ಅಧ್ಯಕ್ಷ ವರ್ಕಾಡಿ ರವಿ ಅಲೆವೂರಾಯ ಕಥಾ ಉಪಸಂಹಾರ ಮಾಡಿದರು. ಗೌರವಾಧ್ಯಕ್ಷ ಜಯರಾಮ ಪದಕಣ್ಣಾಯರು ಪ್ರಾಯೋಜಕರಾದ ಶ್ರೀಮತಿ ವಿನೋದಾ ಶಾಸ್ತ್ರೀಯವರನ್ನು ಅಭಿನಂದಿಸಿದರು. ಕೋಶಾಧ್ಯಕ್ಷ ಕಿಶೋರ್ ಕೃಷ್ಣರವರು ಕಥೆಗಾರರನ್ನು ಗೌರವಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top