"ನಮ್ಮ ಕೆರೆ - ನಮ್ಮ ಹೆಮ್ಮೆ" ಪಾಕ್ಷಿಕ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

Upayuktha
0

ಶ್ರೀ ಶರಣಬಸವೇಶ್ವರ ಕೆರೆ ಉದ್ಯಾನದಲ್ಲಿ ವಿಶ್ವ ಪರಿಸರ ದಿನಾಚರಣೆ


ಕಲಬುರಗಿ: ವಿಶ್ವ ಪರಿಸರ ದಿನಾಚರಣೆಯ (ಜೂನ್ 5) ಅಂಗವಾಗಿ ಶ್ರೀ ಶರಣಬಸವೇಶ್ವರ ಕೆರೆಯ ಉದ್ಯಾನವನದಲ್ಲಿ "ನಮ್ಮ ಕೆರೆ -  ನಮ್ಮ ಹೆಮ್ಮೆ" ಧ್ಯೇಯದೊಂದಿಗೆ ಪಾಕ್ಷಿಕ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.


ಕಲಬುರಗಿ ನಗರದ ಹೃದಯ ಭಾಗದಲ್ಲಿರುವ ಶ್ರೀ ಶರಣಬಸವೇಶ್ವರ ಕೆರೆಯ ಉದ್ಯಾನವನದಲ್ಲಿ ಕೆರೆ ನಿರ್ವಹಣಾ ಪ್ರಾಧಿಕಾರದ ಸದಸ್ಯರು ಎಸ್ ಎಸ್ ತೆಗೆ 100 ಪಿಯು ಮತ್ತು ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಸಸಿ ನೆಡುವ ಹಾಗೂ ಕೆರೆಯ ಸುತ್ತು ಮುತ್ತಲ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ಪಾಕ್ಷಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪ್ರತಿ ತಿಂಗಳು 15 ದಿನಗಳಿಗೊಮ್ಮೆ ವಿವಿಧ ಸಂಘ-ಸಂಸ್ಥೆಗಳು, ಎನ್‌ಸಿಸಿ, ಎನ್ಎಸ್ಎಸ್ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಸ್ವಚ್ಛತಾ ಅಭಿಯಾನ ಕೈಗೊಳ್ಳಲು ಪ್ರಾದೇಶಿಕ ಆಯುಕ್ತರಾದ ಶ್ರೀಮತಿ ಜಹೀರಾ ನಸೀಮ್ ಅವರ ಮಾರ್ಗದರ್ಶನದಂತೆ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು. 


ಕೆರೆಯ ಸುತ್ತಮುತ್ತಲ ಅನೇಕ ಸಮಯಗಳಿಂದ ಸಾರ್ವಜನಿಕರು ಆವರಣ ಗೋಡೆಯಿಂದ ಹೊರಗೆ ಎಸೆದ ಸುಮಾರು ಎರಡು ಟನ್ ಕಸವನ್ನು ಎತ್ತಿ ವಿಲೇವಾರಿ ಮಾಡಿ ನಮ್ಮಕೆರೆ - ನಮ್ಮ ಹೆಮ್ಮೆ ಎಂಬುದನ್ನು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಪರಿಸರ ಪ್ರೇಮಿಗಳು ಸಾರಿದರು ಮೂಲಕ ಉದ್ಘಾಟನೆ ಮಾಡಿದ ಶ್ರೀ ಶರಣಬಸವೇಶ್ವರ ಕೆರೆ ನೀಡುವ ಹಣ ಪ್ರಾಧಿಕಾರದ ನೋಡಲು ಅಧಿಕಾರಿ ಶ್ರೀಮತಿ ಅಂಬಿಕಾ ಮಾತನಾಡಿ ಪರಿಸರಕ್ಕೆ ದೊಡ್ಡ ಕೊಡುಗೆ ನೀಡುವ ಪ್ರಾಣಿ ಪಕ್ಷಿಗಳಿಗೆ ಮೀನುಗಳಿಗೆ ಆಶ್ರಯ ನೀಡುವ ಶರಣಬಸವೇಶ್ವರ ಕೆರೆ ಪ್ರದೇಶವನ್ನು ಉಳಿಸುವುದರ ಜೊತೆಗೆ ಪ್ರವಾಸಿಗರನ್ನ ಆಕರ್ಷಿಸುವಂತೆ ಮಾಡಲು ಸಾರ್ವಜನಿಕರು ಕೈಜೋಡಿಸಬೇಕು ಎಂದು ಹೇಳಿದರು. 


"ಪ್ರಕೃತಿಯಿಂದ ಪ್ರೇರಿತ ಹವಾಮಾನಕ್ಕಾಗಿ ನಮ್ಮ ಭವಿಷ್ಯಕ್ಕಾಗಿ"ಎಂಬ ಈ ವರ್ಷದ ಪರಿಸರ ದಿನಾಚರಣೆಯ ಧ್ಯೇಯ ವಾಕ್ಯದಂತೆ ಪ್ರಕೃತಿಯ ರಕ್ಷಣೆಗೆ ನಾವೆಲ್ಲರೂ ಒಗ್ಗಟ್ಟಾಗಬೇಕು ಭವಿಷ್ಯದ ಅನಾಹುತ ತಪ್ಪಿಸಲು ಜಾಗೃತರಾಗಿ ಗಿಡ ನೆಡುವ ಮೂಲಕ ಜಲಸಂಪನ್ಮೂಲ ರಕ್ಷಣೆ ಮಾಡುವ ಕೆಲಸದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಕೆರೆ ನಿರ್ವಹಣಾ ಪ್ರಾಧಿಕಾರದ ಸದಸ್ಯರಾದ ಡಾ.ಸದಾನಂದ ಪೆರ್ಲ ಹೇಳಿದರು. ಗುಲ್ಬರ್ಗ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ ವಿಜಯ್ ಕುಮಾರ್, ಕೆರೆ ನಿರ್ವಹಣಾ ಪ್ರಾಧಿಕಾರದ ಸದಸ್ಯ ಬಸವಪ್ರಭು, ಯೋಗ ಶಿಕ್ಷಕರಾದ ನಾಗೇಂದ್ರಪ್ಪ ದಂಡೋತಿಕರ್ ಹಾಗೂ ಕೃತಿ ಕನ್ಸಲ್ಟೆನ್ಸಿಯ ಖ್ಯಾತ ವಿನ್ಯಾಸಕಾರ ಭರತ್ ಭೂಷಣ್ ಮಾತನಾಡಿ ಭವಿಷ್ಯದ ಪೀಳಿಗೆಗೆ ಸುಂದರ ಪರಿಸರವನ್ನು ನೀಡುವ ಹೊಣೆಗಾರಿಕೆಯ ಬಗ್ಗೆ ಮಾತನಾಡಿದರು ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ ಶರಣ್ ಐ.ಟಿ ,ಪ್ರೊ. ಶಂಕರಪ್ಪ ಹತ್ತಿ, ಜಿ ಸತೀಶ್, ಎಸ್ ಎಸ್ ತೆಗನೂರ್ ಕಾಲೇಜಿನ ರವೀಂದ್ರ ತೆಗನೂರ್ ಆಕಾಶ್ 


ತೋನಸನಹಳ್ಳಿ,ಮೊಹಮ್ಮದ್  ಜಮೀರ್, ಮಹೇಶ್, ಮಂಜು, ಸಾಯಿ ರೆಡ್ಡಿ ,ರಜತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರಾದೇಶಿಕ ಆಯುಕ್ತರ ಕಚೇರಿಯ ಸುನಿಲ್ ಕಾರ್ಯಕ್ರಮ ನಿರೂಪಿಸಿದರು. ಕೆರೆಯ ಉದ್ಯಾನವನ ಹಾಗೂ ಸುತ್ತುಮುತ್ತಲು ಪ್ರದೇಶದಲ್ಲಿ ಸುಮಾರು ಮೂರು ತಾಸುಗಳ ಅವಧಿಯಷ್ಟು ಕಾಲ ಸ್ವಚ್ಛತಾ ಕಾರ್ಯವನ್ನು ನೆರವೇರಿಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಎಲ್ಲರ ಪ್ರಶಂಸೆಗೆ ಪಾತ್ರರಾದರು.


ಪರಿಸರ ಯೋಧೆ ಗೆ ಪ್ರಶಸ್ತಿ

ಕಳೆದ 20 ವರ್ಷಗಳಿಂದ ಶ್ರೀ ಶರಣಬಸವೇಶ್ವರ ಕೆರೆ ಉದ್ಯಾನವನದಲ್ಲಿ ಸ್ವಚ್ಛತಾ ಕಾರ್ಯದ ಉದ್ಯೋಗಿಯಾಗಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡ ಶ್ರೀಮತಿ ಶಶಿಕಲಾ ಅವರಿಗೆ ಹತ್ತು ಸಾವಿರ ನಗದು ಪುರಸ್ಕಾರದೊಂದಿಗೆ ವಿಶೇಷ ಸನ್ಮಾನ ನೆರವೇರಿತು. ಕೆರೆ ನಿರ್ವಹಣೆಯ ಭಕ್ಷಮಾತೆ ಶಶಿಕಲಾ ಎಲ್ಲರಿಗೂ ಮಾದರಿ ವ್ಯಕ್ತಿತ್ವದವರು ಎಂದು ನೋಡಲು ಅಧಿಕಾರಿ ಅಂಬಿಕಾ ಶ್ಲಾಘನೆ ವ್ಯಕ್ತಪಡಿಸಿದರು.


ಉದ್ಯಾನವನದಲ್ಲಿ ಡಾ ರಜನೀಶ್ ಗೋಯಲ್ ಮತ್ತು ಡಾ.ಶಾಲಿನಿ ರಜನೀಶ್ ಅವರ ಸೇವಾವಧಿಯಲ್ಲಿ ಕೆಲಸಕ್ಕೆ ಸೇರಿ ಈ ಕೆರೆಯನ್ನು ಕುಟುಂಬವನ್ನು ಪೋಷಿಸಿದಂತೆ ಕಾಳಜಿಯಿಂದ ನಿರ್ವಹಣೆ ಮಾಡುವ ಮತ್ತು ಸೇವೆ ಸಲ್ಲಿದ್ದಕ್ಕಾಗಿ ಸೋಮನಾಥ ಸೂಳಿಭಾವಿ ಮತ್ತು ಭರತ್ ಭೂಷಣ್ ಪ್ರಾಯೋಜಕತ್ವದಲ್ಲಿ 10 ಸಾವಿರ ನಗದು ನೀಡಿ ಶಾಲು ಹಾಗೂ ಗಿಡ ನೀಡುವ ಮೂಲಕ ಗೌರವಿಸಿದ್ದಕ್ಕೆ ಭಾವುಕರಾಗಿ ಶ್ರೀಮತಿ ಶಶಿಕಲಾ ಕೃತಜ್ಞತೆ ಸಲ್ಲಿಸಿದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top