ಕೆಸಿಇಟಿ-2026 ಫಲಿತಾಂಶ ಪ್ರಕಟ - ಅತ್ಯಧಿಕ ರ‍್ಯಾಂಕ್‌ಗಳು ಪಡೆದ ವಿವೇಕಾನಂದ ಪದವಿ ಪೂರ್ವ ಕಾಲೇಜು

Upayuktha
0

 ವಿವೇಕಾನಂದ ಪದವಿ ಪೂರ್ವ ಕಾಲೇಜಿಗೆ ಮತ್ತಷ್ಟು ರಾಂಕ್‍ಗಳು

ಪುತ್ತೂರು: ಇತ್ತೀಚಿಗೆ ಪ್ರಕಟಗೊಂಡ ವೃತ್ತಿಪರಕೋರ್ಸ್‍ಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) 2026ರಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆ ಮಾಡಿದ್ದಾರೆ. ವಿಶಾಲ್ ಪಿ. ಇಂಜಿನಿಯರಿಂಗ್‍ನಲ್ಲಿ ಕೆಸಿಇಟಿಯಲ್ಲಿ 194ನೇ ರ‍್ಯಾಂಕ್‌ ಪಡೆದು ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವುದಲ್ಲದೇ ಅತ್ಯಧಿಕ ರ‍್ಯಾಂಕ್‌ಗಳು ವಿವೇಕಾನಂದ ಪದವಿಪೂರ್ವ ಕಾಲೇಜಿನ ಮುಡಿಗೇರಿದೆ. 


ಉತ್ತಮ ಸಾಧನೆ ಮೆರೆದ ಮತ್ತಷ್ಟು ವಿದ್ಯಾರ್ಥಿಗಳ ವಿವರ ಹೀಗಿದೆ. ಸನ್ನಿಧಿ ಕಲ್ಲೂರಾಯ (ಪುತ್ತೂರಿನ ಆರ್ಯಾಪಿನ ರಾಜೇಶ್ ಪಿ. ಹಾಗೂ ಕೃತಿ ಬಿ. ಜಿ. ದಂಪತಿಗಳ ಪುತ್ರಿ) ಬಿ.ಪಿ.ಒ.ದಲ್ಲಿ 606, ವೈಭವಿ ಎಸ್. ಕೆ. (ಬಂಟ್ವಾಳ ತಾಲೂಕಿನ ಕಾರ್ಯಾಡಿಯ ಕೆ. ಸುಂದರ ಹಾಗೂ ಸಿ. ಸುನಿತಾ ದಂಪತಿಗಳ ಪುತ್ರಿ) ಬಿ.ಪಿ.ಟಿ., ಡಿಫಾರ್ಮ , ಬಿ.ಎಸ್ಸಿ. ಎ.ಹೆಚ್.ಸಿ.ಯಲ್ಲಿ 3166 ನೇ ರ‍್ಯಾಂಕ್‌,  ಕುಮಾರ್‍ಆರ್. (ಮಂಡ್ಯದ ಕೆ. ಆರ್. ಪೇಟೆಯ ಆರ್. ರೂಪೇಶ್ ಹಾಗೂ ರೇಖಾ ದಂಪತಿಗಳ ಪುತ್ರ) ಬಿಪಿಒ ದಲ್ಲಿ 3712 ನೇ ರ‍್ಯಾಂಕ್‌ ಪಡೆದಿರುತ್ತಾರೆ. 5000ದ ಒಳಗೆ ಸುಮಾರು 32 ವಿದ್ಯಾರ್ಥಿಗಳು ರಾಂಕ್‍ ಪಡೆದುಕೊಂಡು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಇವರನ್ನು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.


  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top