ಮಕ್ಕಳಿಗಾಗಿ ಯುನಿಸೆಫ್ ಜಗತ್ತಿನಾದ್ಯಂತ ಸಕ್ರಿಯ ಕೆಲಸ ಮಾಡುತ್ತಿದೆ: ಅಶೋಕ ಯಡಹಳ್ಳಿ

Upayuktha
0


 

ವಿಜಯಪುರ: ಪ್ರಸಕ್ತ ದಿನದಲ್ಲಿ ವರದಿಗಾರಿಕೆ ಸವಾಲಿದೆ. ಆದರೂ ನಾವು ಮಕ್ಕಳು ಹಾಗೂ ಸಮಾಜದ ಹಿತದೃಷ್ಟಿಯಿಂದ ಕೆಲಸ ಮಾಡಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ಅಶೋಕ ಯಡಹಳ್ಳಿ ಹೇಳಿದರು.


ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಹಾಗೂ ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಹೈದರಾಬಾದ್‌ನ ಯುನಿಸೆಫ್ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ "ಮಕ್ಕಳ ವಿಷಯಗಳ ಕುರಿತು ಕರ್ನಾಟಕ ರಾಜ್ಯದ ಪತ್ರಕರ್ತರಿಗೆ ಪರಿಚಯ" ವಿಷಯದಡಿ ಕಿಶೋಧರ ಆರೋಗ್ಯ ಮತ್ತು ಪೌಷ್ಟಿಕತೆ, ಸಾಂಕ್ರಾಮಿಕವಲ್ಲದ ರೋಗಗಳು, ಆರೋಗ್ಯಕರ ಆಹಾರ ಪದ್ಧತಿ ಹಾಗೂ ರಸ್ತೆ ಸುರಕ್ಷತೆ ಕುರಿತ ಎರಡನೇ ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.


ಪತ್ರಕರ್ತರು ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತೇವೆ. ಯುನಿಸೆಫ್ ಮಕ್ಕಳಿಗಾಗಿ ಜಗತ್ತಿನಾದ್ಯಂತ ಸಕ್ರಿಯ ಕೆಲಸ ಮಾಡುತ್ತಿದೆ. ಮಕ್ಕಳ ಆರೋಗ್ಯ, ಶಿಕ್ಷಣ, ಸುರಕ್ಷತೆ ಇನ್ನಿತರ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಒಬ್ಬ ಪತ್ರಕರ್ತನಿಗೆ ಈ ಕಾರ್ಯಾಗಾರ ನೀಡುವುದರಿಂದ ಒಂದು ಲಕ್ಷ ಜನರಿಗೆ ಮಾಹಿತಿ ತಲುಪಿಸಿದಂತೆ ಆಗಲಿದೆ. ಒತ್ತಡದ ನಡುವೆಯೂ ನೀವೆಲ್ಲ ಕಾರ್ಯಾಗಾರಕ್ಕೆ ಬಂದಿದ್ದು ಖುಷಿ ತಂದಿದೆ. ಮಾಧ್ಯಮ ಬದಲಾಗಿದೆ. ಆದರೂ ಬದಲಾವಣೆ ಮಾಧ್ಯಮದಿಂದಲೇ ಸಾಧ್ಯ. ಇಂದು ರೀಲ್ಸ್ ಯುಗ ಬಂದಿದೆ. ಜನರಿಗೆ ಕೇಳಿಸಿಕೊಳ್ಳುವ ವ್ಯವಧಾನ ಇಲ್ಲ. ತಪ್ಪು ಮಾಹಿತಿ ನೀಡಿದರೂ ನಾವು ಸರಿಯಾದ ವಿಷಯ ಬರೆಯಬೇಕು ಎಂದು ಕಿವಿಮಾತು ಹೇಳಿದರು.

ಎರಡು ದಿನದ ಕಾರ್ಯಾಗಾರ ಬಗ್ಗೆ ಪತ್ರಕರ್ತರು ಅನುಭವ ಹಂಚಿಕೊAಡರು.


ಯುನಿಸೆಫ್ ಪ್ರತಿನಿಧಿ ಪ್ರಶೂನ್ ಸೇನ್, ಮೈಸೂರು ವಿವಿಯ ಸ್ವಪ್ನ ಎಂ.ಎಸ್., ಡಾ.ರಾಕೇಶ್, ಮಂಜುನಾಥ ಇತರರಿದ್ದರು.


ಗಮನ ಸೆಳೆದ ಉಪನ್ಯಾಸ: ಎರಡನೇ ದಿನದ ಕಾರ್ಯಗಾರದಲ್ಲಿ ಡಾ.ಶ್ರೀಧರ್ ಪ್ರಹಲ್ಲಾದ್ ರ್ಯಾವಣಕಿ ಅವರು ಮಕ್ಕಳ ರಸ್ತೆ ಸುರಕ್ಷತೆ ಬಗ್ಗೆ ಉಪನ್ಯಾಸ ನೀಡಿದರು. ಜಾಗತಿಕ ಮಟ್ಟದಲ್ಲಿ, ಭಾರತ ಹಾಗೂ ಕರ್ನಾಟಕದಲ್ಲಿ ಆಗುವ ಅಪಘಾತಗಳ ಪ್ರಮಾಣದ ಗಂಭೀರತೆ ತಿಳಿಸಿದರು. ನಿತ್ಯ ಸರಾಸರಿ 20 ಜನರು ಅಪಘಾತದಲ್ಲಿ ಸಾಯುತ್ತಿದ್ದಾರೆ. ಅದರಲ್ಲೂ ೧೪-೪೦ವರ್ಷದೊಳಗಿನವರು ಶೇ.50ರಷ್ಟಿದ್ದಾರೆಂಬ ಕಳವಳಕಾರಿ ವಿಷಯ ತಿಳಿಸಿದರು.


ಮೈಸೂರು ವಿವಿ ಸ್ವಪ್ನಾ ಎಂ.ಎಸ್. ಅವರು ಮಾತನಾಡಿ, ಮಕ್ಕಳ ಬಗ್ಗೆ ಮಾಧ್ಯಮಗಳು ಮಾಡುತ್ತಿರುವ ವರದಿಗಾರಿಕೆ ಬಗ್ಗೆ ಬೆಳಕು ಚೆಲ್ಲಿದರು. ಮಾಹಿತಿ ಕೊರತೆ, ನಕಾರಾತ್ಮಕ ವಿಷಯಗಳ ವೈಭವೀಕರಣ, ಅಸತ್ಯ ವರದಿಗಳನ್ನು ಬಿಂಬಿಸುವುದು ಹೆಚ್ಚುತ್ತಿದೆ. ಯಶಸ್ವಿ ವಿಷಯಗಳನ್ನು ಆಧರಿಸಿ ವಿಶೇಷ ವರದಿ ಮಾಡುವಂತೆ ಸಲಹೆ ನೀಡಿದರು. ನೀವು ಮಾಡಿದ ವರದಿಗಳನ್ನು ನಮಗೆ ಕಳಿಸಿ. ರಾಜ್ಯಮಟ್ಟದ ಮಾಹಿತಿ ಸಂಗ್ರಹಿಸಿ ಬರೆಯುವಂತೆ ಹೇಳಿದರು.


ಮೈಸೂರು ವಿಶ್ವವಿದ್ಯಾಲಯದ ಸಪ್ನಾ ಎಂಎಸ್ ಸ್ವಾಗತಿಸಿದರು ಮಂಜುನಾಥ ಸುಬೇದಾರ ನಿರೂಪಿಸಿ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top