ಪುತ್ತೂರು: ಇಲ್ಲಿನ ಸುದಾನ ವಸತಿ ಶಾಲೆಯಲ್ಲಿ ನೂತನ ಶೈಕ್ಷಣಿಕ ವರ್ಷದ ಮಂತ್ರಿಮಂಡಲ ರಚನೆ ಮತ್ತು ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮವು ಜೂನ್ 20 ರಂದು ಸುದಾನ ಶಾಲೆಯ ಎಡ್ವರ್ಡ್ ಹಾಲ್ ನಲ್ಲಿ ನಡೆಯಿತು.
ಪ್ರತಿ ಶೈಕ್ಷಣಿಕ ವರ್ಷದಲ್ಲೂ ಒಂದು ಧ್ಯೇಯವಾಕ್ಯವನ್ನಿರಿಸಿಕೊಂಡು ಕಾರ್ಯಾಚರಿಸುವ ಸುದಾನ ಶಾಲೆಯು ಈ ವರ್ಷ ' ಹೊಣೆಯರಿತ ಸೇವೆ(Serve with Care)' ಎಂಬ ಪರಿಕಲ್ಪನೆಯನ್ನು ಇರಿಸಿಕೊಂಡಿದೆ. ಈ ವರ್ಷದ ಎಲ್ಲಾ ಕಾರ್ಯಕ್ರಮಗಳು ಈ ಧ್ಯೇಯವಾಕ್ಯಕ್ಕೆ ಹೊಂದಿಕೊಂಡೆ ನಡೆಯುತ್ತವೆ.
ಇದರ ಅಂಗವಾಗಿ ನಡೆದ ಪ್ರಮಾಣವಚನ ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ನಡೆಸಿಕೊಟ್ಟರು. ಶಾಲಾ ವಿದ್ಯಾರ್ಥಿ ನಾಯಕ ಆಯುಷ್ ಎಲ್ ರೈ, ಉಪ ನಾಯಕಿ ದೇವಮುರಾರಿ ಗುಂಜನ್ ಆರ್, ವಿದ್ಯಾರ್ಥಿ ಕಾರ್ಯದರ್ಶಿ ಎಸ್ಟಾವಿಯೋ ವೋನ್ ಜೋಸೆಫ್, ವಿರೋಧ ಪಕ್ಷದ ವಿದ್ಯಾರ್ಥಿ ನಾಯಕ ಯಶವಂತ ಬಿ ಎಚ್, ವಿಪಕ್ಷ ಉಪನಾಯಕಿ ಇಂಪನಾ ಸಿ ಭಟ್ ಅವರು ಪ್ರಮಾಣವಚನವನ್ನು ಸ್ವೀಕರಿಸಿದರು. ಜೊತೆಗೆ ಮಂತ್ರಿಮಂಡಲ ರಚನೆ ಮತ್ತು ವಿದ್ಯಾರ್ಥಿ ಮಂತ್ರಿಗಳ ಪದಗ್ರಹಣ ಕಾರ್ಯಕ್ರಮವು ನಡೆಯಿತು. ನಿಕಟಪೂರ್ವ ವಿದ್ಯಾರ್ಥಿ ಕಾರ್ಯದರ್ಶಿ ವಿಕಾಸ್ ರಾಥೋಡ್ ಕರ್ತವ್ಯ ಪುಸ್ತಕವನ್ನು ಹಸ್ತಾಂತರಿಸಿ ಶುಭಕೋರಿದರು.
ಇದೇ ವೇಳೆಗೆ ವಿವಿಧ ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಕಾರ್ಯಕ್ರಮವನ್ನು ದೀಪೋಜ್ವಲನವನ್ನು ಮಾಡುವುದರೊಂದಿಗೆ ಮತ್ತು ಕಲಾತ್ಮಕವಾಗಿ ರಚಿಸಲಾದ 'ಧ್ಯೇಯ ಚಕ್ರ' ವನ್ನು ತಿರುಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಶಾಲೆಯ ಏಳು ಸಂಘಗಳನ್ನು ಪ್ರಕಟವಾಗುವಂತೆ ರೂಪಿತವಾಗಿದ್ದ ಈ ಧ್ಯೇಯ ಚಕ್ರವನ್ನು ಶಾಲೆಯ ಚಿತ್ರಕಲಾ ಶಿಕ್ಷಕ ಶಿವಗಿರಿ ಕಲ್ಲಡ್ಕ ರೂಪಿಸಿದ್ದರು.
ವಿದ್ಯಾರ್ಥಿ ಸಂಘಗಳನ್ನು ಉದ್ಘಾಟನೆ ಮಾಡಿ ಮಾತನಾಡಿದ ಫಿಲೋಮಿನಾ ಕಾಲೇಜಿನ ಪ್ರಾಧ್ಯಾಪಕ ಡಾ. ನಾರ್ಬರ್ಟ್ ಮಸ್ಕರೇನಸ್ ಮಾತನಾಡಿ ನಾಯಕತ್ವ ಎಂದರೆ ಅಧಿಕಾರವಲ್ಲ, ಜವಾಬ್ದಾರಿಯಿಂದ ಮಾಡಬೇಕಾದ ಸೇವೆ. ಉತ್ತಮ ಬದಲಾವಣೆ, ಯೋಜನೆಗಳೊಂದಿಗೆ ಕಾರ್ಯೋನ್ಮುಖರಾದಾಗ ಮಾತ್ರ ಪಡೆದ ನಾಯಕತ್ವದ ಸ್ಥಾನಕ್ಕೆ ಮೌಲ್ಯ ಬರುತ್ತದೆ. ಸುದಾನ ಶಾಲೆಯು ಅಂಕಗಳಿಕೆಗಷ್ಟೇ ಪ್ರಾಮುಖ್ಯತೆಯನ್ನು ಕೊಡದೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ, ಪ್ರತಿಭಾ ಅನಾವರಣಕ್ಕೂ ಪ್ರಾಮುಖ್ಯತೆಯನ್ನು ಕೊಡುತ್ತಿರುವುದು ಶ್ಲಾಘನೀಯ ಕಾರ್ಯ, ವಿದ್ಯಾರ್ಥಿಗಳು ಈ ಅವಕಾಶಗಳನ್ನು ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಬೆಳೆಸಬೇಕು. ಸದ್ಗುಣಗಳೊಂದಿಗೆ ಸಾಧಕರಾಗಬೇಕು ಎಂದು ಅಭಿಪ್ರಾಯ ಪಟ್ಟರು.
ವಿದ್ಯಾರ್ಥಿ ಸಂಘಗಳಾದ ಪ್ರತಿಭಾ ಲಲಿತಕಲಾ ಸಂಘ,ಜಾಗೃತಿ ಸೋಶಿಯಲ್ ಕ್ಲಬ್, ಶಕ್ತಿ ಕ್ರೀಡಾ ಕ್ಲಬ್, ಅವನಿ ವಿಜ್ಞಾನ ಸಂಘ, ದೃಷ್ಟಿ ಐಟಿ ಕ್ಲಬ್, ಲಹರಿ ಸಾಹಿತ್ಯ ಸಂಘ ಮತ್ತು ಇಂಟೆರ್ಯಾಕ್ಟ್ ಕ್ಲಬ್ಗಳ ನಿರ್ದೇಶಕರು ತಮ್ಮ ವಾರ್ಷಿಕ ಚಟುವಟಿಕೆಗಳ ಬಗೆಗೆ ವರದಿ ನೀಡಿದರು.
ಇದೇ ಸಂದರ್ಭದಲ್ಲಿ ಲಹರಿ ಸಾಹಿತ್ಯ ಸಂಘವು ಶಿಕ್ಷಕಿ ಅನಿತಾ ಕೆ ಅವರ ಸಂಪಾದಕತ್ವದಲ್ಲಿ ರೂಪಿಸಿದ ಶಾಲಾ ಭಿತ್ತಿಪತ್ರಿಕೆ “ವಾಯ್ಸ್ ಆಫ್ ಸುದಾನ” ವು ಬಿಡುಗಡೆಗೊಂಡಿತು.
ಸಭಾ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ರೆ.ವಿಜಯ ಹಾರ್ವಿನ್ ವಹಿಸಿದ್ದರು. ಶಾಲಾ ಆಡಳಿತಾಧಿಕಾರಿ ಶ್ರೀ ಸುಶಾಂತ್ ಹಾರ್ವಿನ್, ಉಪ ಮುಖ್ಯ ಶಿಕ್ಷಕಿ ಲವೀನಾ ನವೀನ್ ಹನ್ಸ್ , ಸಂಯೋಜಕರಾದ ಪ್ರತಿಮಾ, ಗಾಯತ್ರಿ ಕೆ,ಅಮೃತವಾಣಿ ಮತ್ತು ಸಹಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕಿ ನಿಶ್ಮಿತಾ ಅತಿಥಿಗಳನ್ನು ಪರಿಚಯಿಸಿದರು. ಜಾಗೃತಿ ಸೋಷಿಯಲ್ ಕ್ಲಬ್‌ನ ವಿದ್ಯಾರ್ಥಿ ಪ್ರತಿನಿಧಿ ಅವ್ವಾ ಗನಿಯಾ ಸ್ವಾಗತಿಸಿ, ಕಾರ್ಯದರ್ಶಿ ಹೃತ್ವಿಕಾ ಆರ್ ನಾಯಕ್ ವಂದಿಸಿದರು. ಶಿಕ್ಷಕರಾದ ಶ್ರೀಮತಿ ಸುಜಾತ ಶೆಟ್ಟಿ ಮತ್ತು ಯೋಗಿತಾ ಕೆ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿಗಳಿಂದ 'ಧ್ಯೇಯ ನೃತ್ಯ' ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮವನ್ನು ಜಾಗೃತಿ ಸೋಷಿಯಲ್ ಕ್ಲಬ್ ಆಯೋಜಿಸಿತ್ತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


