ಮಂಗಳೂರು: 2026ನೇ ಸಾಲಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಕೆಸಿಇಟಿ (KCET) ಪರೀಕ್ಷೆಯಲ್ಲಿ, ಶಕ್ತಿ ವಿದ್ಯಾಸಂಸ್ಥೆ ಶಕ್ತಿನಗರ, ಮಂಗಳೂರು ಇದರ 4 ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿರುತ್ತಾರೆ.
ಶಕ್ತಿ ವಿದ್ಯಾಸಂಸ್ಥೆಯ ವಿಜ್ಞಾನ ವಿಭಾಗದಲ್ಲಿ ಕಲಿಯುವ ಲಿಖಿತ್ ಗೌಡ ಎಸ್.ಡಿ ಬಿಪಿಓನಲ್ಲಿ 221ನೇ ರ‍್ಯಾಂಕ್ ಗಳಿಸಿರುತ್ತಾರೆ ಹಾಗೂ ಇಂಜಿನಿಯರಿಂಗ್‍ನಲ್ಲಿ 2367ನೇ ರ‍್ಯಾಂಕ್ ಬಂದಿರುತ್ತದೆ. ಕ್ರಮವಾಗಿ ಪವನ್ ಮಲಗಿ ನರ್ಸಿಂಗ್‍ನಲ್ಲಿ 1428ನೇ ರ‍್ಯಾಂಕ್ ಹಾಗೂ ವೆಟರಿನರಿ ಸೈನ್ಸ್‍ನಲ್ಲಿ 1424ನೇ ರ‍್ಯಾಂಕ್ ಪಡೆದಿರುತ್ತಾರೆ.
ಸುಹಾಸ್ ನರ್ಸಿಂಗ್‍ನಲ್ಲಿ 1661 ನೇ ರ‍್ಯಾಂಕ್, ನ್ಯಾಚುರೋಪತಿ & ಯೋಗದಲ್ಲಿ 1153ನೇ ರ‍್ಯಾಂಕ್ ಹಾಗೂ ವೆಟರಿನರಿ ಸೈನ್ಸ್‍ನಲ್ಲಿ 1656 ರ‍್ಯಾಂಕ್ ಬಂದಿರುತ್ತದೆ ಮತ್ತು ಚಿಂತನ ಪಿ ಆರ್ ಬಿಪಿಟಿಯಲ್ಲಿ 1586ನೇ ರ‍್ಯಾಂಕ್, ಬಿಪಿಓನಲ್ಲಿ 1087ನೇ ರ‍್ಯಾಂಕ್, ಡಿ ಫಾರ್ಮದಲ್ಲಿ 1586ನೇ ರ‍್ಯಾಂಕ್ ಹಾಗೂ ಬಿ.ಎಸ್‍ಸಿ-ಎಹೆಚ್‍ಎಸ್‍ನಲ್ಲಿ 1586ನೇ ರ‍್ಯಾಂಕ್ ಪಡೆದಿರುತ್ತಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕರು ಮತ್ತು ಆಡಳಿತಾಧಿಕಾರಿಗಳಾದ ಡಾ.ಕೆ.ಸಿ.ನಾೈಕ್‍ರವರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಅಭಿನಂದಿಸಿದರು. ಸಾಧನೆ ಮಾಡಲು ಶ್ರಮಿಸಿದ ಸಂಸ್ಥೆಯ ಉಪನ್ಯಾಸಕ ಮತ್ತು ಇತರ ಸಿಬ್ಬಂದಿ ವರ್ಗಕ್ಕೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಶಕ್ತಿ ಎಜ್ಯುಕೇಶನ್ ಟ್ರಸ್ಟ್‍ನ ಪ್ರಧಾನ ಸಲಹೆಗಾರರಾದ ರಮೇಶ ಕೆ, ಶಕ್ತಿ ಪಪೂ. ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲರಾದ ಸುರೇಖ ಆರ್ ಭಟ್, ಎಲ್ಲಾ ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


