ರಗ್ಬಿ ಪ್ರೀಮಿಯರ್ ಲೀಗ್ ಸೀಸನ್-2ರಲ್ಲಿ ಸ್ಟುಪಾ ಸ್ಪೋರ್ಟ್ಸ್‌ನ ಅತ್ಯಾಧುನಿಕ ಎಡಿಆರ್‌ಎಸ್ ತಂತ್ರಜ್ಞಾನ

Upayuktha
0

 


ಹೈದರಾಬಾದ್: ಕ್ರೀಡಾ ತಂತ್ರಜ್ಞಾನ ಮತ್ತು ಎಐ ಆಧಾರಿತ ವಿಶ್ಲೇಷಣಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸುಪ್ತ ಸ್ಪೋರ್ಟ್ ಜೂನ್ 16ರಿಂದ 28ರವರೆಗೆ ಹೈದರಾಬಾದ್‌ನ Gachibowli Stadiumನಲ್ಲಿ ನಡೆಯಲಿರುವ Rugby Premier League Season 2ಗೆ ತನ್ನ ಅತ್ಯಾಧುನಿಕ Advanced Decision Review System (ADRS) ಅನ್ನು ಒದಗಿಸಲಿದೆ.


ಈ ತಂತ್ರಜ್ಞಾನವು ಪಂದ್ಯಾಧಿಕಾರಿಗಳು ಮತ್ತು ವೈದ್ಯಕೀಯ ತಂಡಗಳಿಗೆ ತ್ವರಿತ ಹಾಗೂ ನಿಖರ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗಲಿದೆ. ಬಹು-ಕ್ಯಾಮೆರಾ ದೃಶ್ಯಗಳು, ಸ್ಲೋ-ಮೋಷನ್, ಜೂಮ್ ಮತ್ತು ಫ್ರೇಮ್-ಬೈ-ಫ್ರೇಮ್ ವಿಶ್ಲೇಷಣೆಯ ಮೂಲಕ ಪ್ರಮುಖ ಘಟನೆಗಳನ್ನು ಪರಿಶೀಲಿಸುವ ಸೌಲಭ್ಯವನ್ನು ADRS ಒದಗಿಸುತ್ತದೆ. ಪ್ರಮುಖ ಘಟನೆಗಳ ಮರುಪರಿಶೀಲನೆಗಾಗಿ ಅಗತ್ಯವಿರುವ ವಿಡಿಯೊ ಕ್ಲಿಪ್‌ಗಳನ್ನು ಎರಡು ನಿಮಿಷಗಳೊಳಗೆ ಒದಗಿಸಲಾಗುವುದು.


ಈ ಬಗ್ಗೆ ಸ್ಟುಪಾ ಸ್ಪೋರ್ಟ್ಸ್‌ನ ಸಿಇಒ ಮತ್ತು ಸಹ-ಸ್ಥಾಪಕಿ ಮೇಘ ಗಂಭಿರ್ ಮಾತನಾಡಿ, "ರಗ್ಬಿಯಂತಹ ವೇಗದ ಮತ್ತು ದೈಹಿಕ ಸಾಮರ್ಥ್ಯ ಹೆಚ್ಚಾಗಿ ಬೇಕಾಗುವ ಕ್ರೀಡೆಯಲ್ಲಿ ನಿಖರ ನಿರ್ಧಾರಗಳು ಮತ್ತು ತ್ವರಿತ ಪ್ರತಿಕ್ರಿಯೆ ಅತ್ಯಂತ ಮುಖ್ಯ. ನಮ್ಮ ತಂತ್ರಜ್ಞಾನವು ರೆಫರಿಗಳು ಮತ್ತು ವೈದ್ಯಕೀಯ ಸಿಬ್ಬಂದಿಗೆ ನೈಜ ಸಮಯದಲ್ಲಿ ದೃಶ್ಯಾಧಾರಿತ ಮಾಹಿತಿಯನ್ನು ಒದಗಿಸಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತದೆ" ಎಂದು ಹೇಳಿದರು.

ಇಂಡಿಯನ್ ರಗ್ಬಿ ಫುಟ್‌ಬಾಲ್ ಯೂನಿಯನ್‌ನ ಜನರಲ್ ಮ್ಯಾನೇಜರ್ ಸೌರೋಜಿತ್ ಘೋಷ್ ಮಾತನಾಡಿ, "ಆಟಗಾರರ ಸುರಕ್ಷತೆ ಮತ್ತು ಪಂದ್ಯಗಳ ಪಾರದರ್ಶಕತೆ ನಮ್ಮ ಪ್ರಮುಖ ಆದ್ಯತೆ. ಸ್ಟುಪಾ ಜೊತೆಗಿನ ಈ ಸಹಭಾಗಿತ್ವವು ರೆಫರಿಗಳು ಮತ್ತು ವೈದ್ಯಕೀಯ ತಂಡಗಳಿಗೆ ಹೆಚ್ಚು ನಿಖರ ಹಾಗೂ ಸಾಕ್ಷ್ಯಾಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಲಿದೆ" ಎಂದು ತಿಳಿಸಿದರು.


ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಪಿಕಲ್‌ಬಾಲ್, ಪ್ಯಾಡೆಲ್ ಮತ್ತು ವಾಲಿಬಾಲ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ತಂತ್ರಜ್ಞಾನ ಸೇವೆಗಳನ್ನು ನೀಡುತ್ತಿರುವ ಸ್ಟುಪಾ ಸ್ಪೋರ್ಟ್ಸ್ ಇದೀಗ ರಗ್ಬಿ ಕ್ಷೇತ್ರಕ್ಕೂ ತನ್ನ ವಿಸ್ತರಣೆಯನ್ನು ಮಾಡಿದೆ. ಈ ಸಹಭಾಗಿತ್ವವು ಜಾಗತಿಕ ಮಟ್ಟದಲ್ಲಿ ವಿವಿಧ ಕ್ರೀಡಾ ಸಂಸ್ಥೆಗಳು ಮತ್ತು ಲೀಗ್‌ಗಳಿಗೆ ತಂತ್ರಜ್ಞಾನ ಪರಿಹಾರಗಳನ್ನು ಒದಗಿಸುವ ಸಂಸ್ಥೆಯ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ.


ರಗ್ಬಿ ಪ್ರೀಮಿಯರ್ ಲೀಗ್ ಸೀಸನ್-2 ಜೂನ್ 16ರಿಂದ 28ರವರೆಗೆ ಹೈದರಾಬಾದ್‌ನಲ್ಲಿ ನಡೆಯಲಿದ್ದು, ದೇಶದ ಹಾಗೂ ವಿದೇಶದ ಪ್ರಮುಖ ರಗ್ಬಿ ಆಟಗಾರರು ಭಾಗವಹಿಸಲಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top