ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾಲಯದ Institute of Aviation Studies ವತಿಯಿಂದ 12ನೇ ಜೂನ್ 2026 ರಂದು ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಯಿತು. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಕಲಾತ್ಮಕ ಅಭಿವ್ಯಕ್ತಿ ಹಾಗೂ ನವೀನ ಚಿಂತನೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕಲಾತ್ಮಕ ಕೌಶಲ್ಯಗಳನ್ನು ಚಿತ್ರಗಳ ಮೂಲಕ ಪ್ರದರ್ಶಿಸಿದರು.
ಸ್ಪರ್ಧೆಯನ್ನು ಮುಕ್ತ ವಿಷಯ (Open Theme) ಆಧಾರವಾಗಿ ನಡೆಸಲಾಗಿದ್ದು, ವಿದ್ಯಾರ್ಥಿಗಳಿಗೆ ತಮ್ಮ ಆಲೋಚನೆಗಳು, ಕಲ್ಪನೆಗಳು ಮತ್ತು ದೃಷ್ಟಿಕೋನಗಳನ್ನು ಬಣ್ಣಗಳ ಹಾಗೂ ಕಲಾತ್ಮಕ ತಂತ್ರಗಳ ಮೂಲಕ ಸ್ವತಂತ್ರವಾಗಿ ವ್ಯಕ್ತಪಡಿಸಲು ಅವಕಾಶ ನೀಡಲಾಗಿತ್ತು. ಭಾಗವಹಿಸಿದ ಪ್ರತಿ ವಿದ್ಯಾರ್ಥಿಯೂ ವಿಭಿನ್ನ ಕಲ್ಪನೆಯನ್ನು ಪ್ರದರ್ಶಿಸಿ ತಮ್ಮ ಸೃಜನಶೀಲತೆ, ಅವಲೋಕನ ಶಕ್ತಿ ಮತ್ತು ವೈಯಕ್ತಿಕ ಶೈಲಿಯನ್ನು ತೋರಿಸಿದರು.
ದ್ವಿತೀಯ ಬಿಬಿಎ ಏವಿಯೇಷನ್ ಮತ್ತು ಲಾಜಿಸ್ಟಿಕ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿ ಸೃಜನ್ ಮೋಹನ್ ಆಚಾರಿ ಪ್ರಥಮ ಸ್ಥಾನ, ತೃತೀಯ ಬಿಬಿಎ ಏವಿಯೇಷನ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿನಿ ಸಾಂತ್ರ ಟಿ.ಎಸ್ ದ್ವಿತೀಯ, ಹಾಗೂ ದ್ವಿತೀಯ ಬಿಬಿಎ ಏವಿಯೇಷನ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿನಿಯರಾದ ಪ್ರಗತಿ ಪ್ರಕಾಶ್ ಆಚಾರ್ಯ ಹಾಗೂ ಕೃಷ್ಣಪ್ರಿಯಾ ತೃತೀಯ ಸ್ಥಾನವನ್ನು ಹಂಚಿಕೊಂಡರು.
ಕಾರ್ಯಕ್ರಮವನ್ನು ಡಾ. ಪವಿತ್ರ ಕುಮಾರಿ, ಡೀನ್, ಇನ್ಸ್ಟಿಟ್ಯೂಷನ್ ಆಫ್ ಏವಿಯೇಷನ್ ಸ್ಟಡೀಸ್ಅ ವರ ಮಾರ್ಗದರ್ಶನದಲ್ಲಿ ಹಾಗೂ SWO ಅಧಿಕಾರಿ, HODಗಳು, ಅಧ್ಯಾಪಕರು, ವಿದ್ಯಾರ್ಥಿ ಸಂಯೋಜಕರು ಮತ್ತು ಸಿಬ್ಬಂದಿಗಳ ಸಹಕಾರದಿಂದ ಯಶಸ್ವಿಯಾಗಿ ನಡೆಸಲಾಯಿತು. ಎಲ್ಲ ಭಾಗವಹಿಸಿದ ವಿದ್ಯಾರ್ಥಿಗಳ ಪ್ರಯತ್ನಗಳನ್ನು ಶ್ಲಾಘಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



