ಈ ಸಂಸ್ಥೆಯು ಹತ್ತು ಹಲವು ಯೋಜನೆಗಳ ಅನುಷ್ಠಾನ, ಪ್ರಸ್ತುತ ದಾಖಲಿರುವ 375 ನಿವಾಸಿಗಳ ಅಗತ್ಯತೆಗಳು, ಮನೋರೋಗ ಚಿಕಿತ್ಸೆ ಡಿ ಅಡಿಕ್ಷನ್ ಹಾಗೂ ವಿಶೇಷ ಅಗತ್ಯವುಳ್ಳ ಕುಟುಂಬ ಸದಸ್ಯರ ಶಿಕ್ಷಣ ಹಾಗೂ ಇತರ ಯೋಜನೆಗಳ ಸಹಾಯಾರ್ಥ ಸಂಗೀತ ರಸಮಂಜರಿ ಕಾರ್ಯಕ್ರಮ ಒಂದನ್ನು ಇದೇ ಭಾನುವಾರ ಜೂ. 21ರಂದು ಮಂಗಳೂರಿನ ಟಾನ್ ಹಾಲ್ ನಲ್ಲಿ ಸಂಜೆ 6.00 ಘಂಟೆಗೆ ಆಯೋಜಿಸಲಾಗಿದೆ.
ಪ್ರಖ್ಯಾತ ಸಂಗೀತಗಾರರಾಗಿದ್ದು ಖ್ಯಾತ ಉದ್ಯಮಿಯೂ ಆಗಿರುವ ಕೆವಿನ್ ಮಿಸ್ಕಿತ್, ಈ ಕಾರ್ಯಕ್ರಮದ ರೂವಾರಿ. ಇವರು ಖ್ಯಾತ ಗೀತರಚನೆಕಾರ, ಸಂಗೀತ ಸಂಯೋಜಕ ಹಾಗೂ ಗಾಯಕರಾಗಿದ್ದು, ಆರು ಸಂಗೀತ ಆಲ್ಬಮ್‌ಗಳನ್ನು ನಿರ್ಮಿಸಿದ್ದಾರೆ ಮತ್ತು ವಿಶ್ವದಾದ್ಯಂತ 53ಕ್ಕೂ ಹೆಚ್ಚು ಸಂಗೀತ ರಸಮಂಜರಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಅಮೆರಿಕಾ, ಕೆನಡಾ, ಯುನೈಟೆಡ್ ಕಿಂಗ್‌ಡಮ್, ಐರ್ಲೆಂಡ್, ಒಮಾನ್, ಬಹ್ರೈನ್ ಸೇರಿದಂತೆ ಅನೇಕ ದೇಶಗಳ ಪ್ರೇಕ್ಷಕರ ಮನಗೆದ್ದಿದ್ದಾರೆ. ಏಳು ವರ್ಷಗಳ ದೀರ್ಘ ವಿರಾಮದ ಬಳಿಕ, ಅವರು ಅದ್ಧೂರಿ ಪುನರಾಗಮನ ಸಂಗೀತ ರಸಮಂಜರಿಯೊಂದಿಗೆ ಮತ್ತೆ ವೇದಿಕೆಗೆ ಮರಳುತ್ತಿದ್ದಾರೆ! ಈ ಮನೋರಂಜನ ಕಾರ್ಯಕ್ರಮದ ಎಲ್ಲಾ ಧನಸಹಾಯ ಒಟ್ಟುಗೊಡಿಸುವಿಕೆ ಸ್ನೇಹಾಲಯದ ಮಾನವೀಯ ಸೇವಾ ಕಾರ್ಯಗಳಿಗೆ ಒಪ್ಪಿಸಲಾಗುವುದು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


