ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಭಾರತೀಯ ಸೇನೆಗೆ ಆಯ್ಕೆ

Upayuktha
0

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಶ್ರವಣೇಶ್ ಮತ್ತು ಅಭಿತ್ ಇವರು ಅಗ್ನಿವೀರ್ ಮೂಲಕ ಭಾರತೀಯ ಸೇನೆಗೆ ಆಯ್ಕೆಯಾಗಿರುತ್ತಾರೆ. ಶ್ರವಣೇಶ್  ತಮ್ಮ ಮುಂದಿನ ತರಬೇತಿಯನ್ನು ಹೈದರಾಬಾದ್‌ನ ಸೇನಾ ತರಬೇತಿ ಕೇಂದ್ರದಲ್ಲಿ ಪಡೆದುಕೊಳ್ಳಲಿದ್ದಾರೆ. ಇವರು ಪುಣಚ ಗ್ರಾಮದ ಅಜೇರು ಅಣ್ಣು ಪೂಜಾರಿ ಮತ್ತು ನಳಿನಾಕ್ಷಿ ದಂಪತಿಗಳ ಪುತ್ರ. ಅಭಿತ್  ತಮ್ಮ ಮುಂದಿನ ತರಬೇತಿಯನ್ನು ಸಿ. ಪಿ. ಎಂ ತರಬೇತಿ ಕೇಂದ್ರ ಬೆಂಗಳೂರು ಇಲ್ಲಿ ಪಡೆದುಕೊಳ್ಳಲಿದ್ದಾರೆ. ಇವರು ಮೊಟ್ಟೆತಡ್ಕ ಅನಿಲ್ ಕುಮಾರ್ ಮತ್ತು ಅನಿತಾ ದಂಪತಿಗಳ ಪುತ್ರ . 


ದೇಶ ಸೇವೆಗೆ ಆಯ್ಕೆಯಾದ ಅವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತಾ ಸಂಸ್ಥೆಯ ಆಡಳಿತಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ – ಉಪನ್ಯಾಸಕೇತರ ವೃಂದದವರ  ವತಿಯಿಂದ ಸನ್ಮಾನಿಸಿ, ಅಭಿನಂದನೆಯನ್ನು ಸಲ್ಲಿಸಲಾಯಿತು.

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top