ಜೂ. 25 ರಂದು ಪಿ.ಜಿ.ಆರ್‌ ಸಿಂಧ್ಯಾ ಬನವಾಸಿ ಪ್ರಕೃತಿಧಾಮಕ್ಕೆ ಭೇಟಿ

Upayuktha
0



ನೀರ್ಚಾಲು : ಕರ್ನಾಟಕ ರಾಜ್ಯ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮುಖ್ಯ ಆಯುಕ್ತರು (State Chief Commissioner) ಹಾಗೂ ಮಾಜಿ ಸಚಿವ, ಸಮಾಜ ಸುಧಾರಕ  ಪಿ.ಜಿ.ಆರ್. ಸಿಂಧ್ಯಾ ಅವರು ಇದೇ ಜೂನ್‌ 25ರಂದು ಕಾಸರಗೋಡಿನ ನೀರ್ಚಾಲು ಸಮೀಪದ ಬನವಾಸಿ ಪ್ರಕೃತಿಧಾಮಕ್ಕೆ ಭೇಟಿ ನೀಡಲಿದ್ದಾರೆ. ಈ ಪ್ರಯುಕ್ತ ಅದೇ ದಿನ ಅಪರಾಹ್ನ 2 ರಿಂದ ಸಿಂಧ್ಯಾ ಸಂಧ್ಯೆ ಎಂಬ ವಿಶೇಷ ಸಂವಾದ ಕಾರ್ಯಕ್ರಮವನ್ನು ಬನವಾಸಿಯಲ್ಲಿ ಏರ್ಪಡಿಸಲಾಗಿದೆ. 


ಕರ್ನಾಟಕ ರಾಜ್ಯದ ಹಿರಿಯ ರಾಜಕಾರಣಿಯಾಗಿರುವ ಸಿಂಧ್ಯಾ ಅವರು ರಾಜ್ಯದ ಗೃಹ, ಸಾರಿಗೆ ಹಾಗೂ ಬೃಹತ್ ಕೈಗಾರಿಕಾ ಸಚಿವರಾಗಿ ದಕ್ಷ ಆಡಳಿತ ನೀಡಿದ ಅನುಭವ ಹೊಂದಿರುವವರು. ಪರಿಸರ ಪ್ರೇಮಿಯಾಗಿರುವ ಇವರು ಸಮಾಜ ಸುಧಾರಣಾ ಕಾರ್ಯಗಳಲ್ಲೂ ಸದಾ ಮುಂಚೂಣಿಯಲ್ಲಿರುವವರಾಗಿದ್ದಾರೆ. ಬನವಾಸಿ ಹಾಗೂ ಸುತ್ತಮುತ್ತಲಿನ ಭಾಗದ ಸಾರ್ವಜನಿಕರು ಕಾಸರಗೋಡಿನ ಕನ್ನಡಿಗರು ಮತ್ತು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಬನವಾಸಿಯ ಡಾ.ರತ್ನಾಕರ ಮಲ್ಲಮೂಲೆಯವರು ತಿಳಿಸಿದ್ದಾರೆ. 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top