ಮೇಜರ್ ಸೋಮನಾಥ ಶರ್ಮ ಅವರ ತ್ಯಾಗದಿಂದ ಕಾಶ್ಮೀರ ಉಳಿದಿದೆ : ರಾಕೇಶ್ ಕಮ್ಮಜೆ

Upayuktha
0

ಪುತ್ತೂರು: ಪರಮ ವೀರ ಚಕ್ರ ಪ್ರಶಸ್ತಿ ಪಡೆದ ಈ ದೇಶದ ಮೊದಲ ಸೇನಾನಿ ಮೇಜರ್ ಸೋಮನಾಥ ಶರ್ಮ.1947 ರ ಪಾಕಿಸ್ತಾನ ಹಾಗೂ ಭಾರತದ ನಡುವೆ ನಡೆದಂತಹ ಮೊದಲ ಯುದ್ಧದಲ್ಲಿ ಅವರು ತೋರಿದ ಸಾಹಸ ಒಂದು ದೊಡ್ಡ ಮಾದರಿಯಾಗಿ ಇತಿಹಾಸದಲ್ಲಿ ದಾಖಲಾಗಿದೆ. ಅವರು ಆ ಯುದ್ಧದಲ್ಲಿ  ತನ್ನ ತಲೆಯನ್ನು ಕೊಟ್ಟದ್ದಕ್ಕಾಗಿ ಭಾರತದ ತಲೆ ಕಾಶ್ಮೀರ ಉಳಿದುಕೊಳ್ಳುವುದಕ್ಕೆ ಸಾಧ್ಯವಾಗಿದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ ಕುಮಾರ್ ಕಮ್ಮಜೆ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಲಾದ ಭಾರತೀಯ ಸೇನೆಯ ಬಗೆಗಿನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

1947 ರ ಯುದ್ಧದಲ್ಲಿ ಮೇಜರ್ ಸೋಮನಾಥ ಶರ್ಮಾರವರು 90 ಮಂದಿ ಸೈನಿಕರ ನಾಯಕತ್ವವನ್ನು ವಹಿಸಿ, 700 ಪಾಕಿಸ್ತಾನಿ ಸೈನಿಕರ ವಿರುದ್ಧ ಸುಮಾರು ಆರು ಗಂಟೆಗಳ ಕಾಲ ಸತತವಾಗಿ ಹೋರಾಡಿ ಪಾಕಿಸ್ಥಾನಿಯರು ಒಂದಿAಚು ಮುಂದೆ ಬರದಂತೆ ತಡೆದು ನಿಲ್ಲಿಸಿದರು. ಭಾರತೀಯ ಸೇನೆ ಹೆಚ್ಚಿನ ಪ್ರಮಾಣದಲ್ಲಿ ಜಮಾವಣೆ ಆಗುವವರೆಗೆ ಯುದ್ಧವನ್ನು ಮುಂದುವರೆಸುತ್ತಾ ತಮ್ಮ ಪ್ರಾಣಾರ್ಪಣೆಯನ್ನು ಮಾಡಿದರು ಎಂದು ಹೇಳಿದರು.

1947 ರಿಂದ 2026  ವರೆಗೆ ಪರಮ ವೀರ ಚಕ್ರ ಪ್ರಶಸ್ತಿ ಕೇವಲ 21 ಯೋಧರಿಗೆ ಪ್ರಾಪ್ತವಾಗಿದೆ. ಅದರಲ್ಲಿ ಹದಿನಾಲ್ಕು ಮಂದಿಗೆ ಮರಣೋತ್ತರವಾಗಿ ದೊರೆತಿದ್ದರೆ, ಯುದ್ಧ ಮಾಡುತ್ತಾ ಕೂದಲೆಳೆಯಲ್ಲಿ ಪಾರಾದ ಏಳು ಯೋಧರಿಗೆ ಯುದ್ಧದ ನಂತರ ನೀಡಲಾಗಿದೆ. ಆ ಏಳರಲ್ಲಿ ಮೂವರು ಯೋಧರಾದ ಕ್ಯಾಪ್ಟನ್ ಯೋಗೇಂದ್ರ ಸಿಂಗ್ ಯಾದವ್, ಕ್ಯಾಪ್ಟನ್ ಸಂಜಯ್ ಕುಮಾರ್ ಹಾಗೂ ಕ್ಯಾಪ್ಟನ್ ಬಾಣಾಸಿಂಗ್ ಈಗಲೂ ನಮ್ಮ ನಡುವೆ ಇದ್ದಾರೆ. ಆ ಮೂವರಲ್ಲಿ ಕ್ಯಾಪ್ಟನ್ ಯೋಗೇಂದ್ರ ಸಿಂಗ್ ಯಾದವ್  ಹಾಗೂ ಕ್ಯಾಪ್ಟನ್ ಸಂಜಯ್ ಕುಮಾರ್ ರವರನ್ನು ಅಂಬಿಕಾ ಸಂಸ್ಥೆಯ ಅಂಗಳಕ್ಕೆ ಆಗಮಿಸಿದ್ದು ಪುಣ್ಯ ವಿಶೇಷ ಎಂದು ನುಡಿದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ಮಿಲಿಟರಿ ಸಮವಸ್ತç ಎನ್ನುವುದು ನಮ್ಮ ದೇಶದ ಹೆಮ್ಮೆಯ ಪ್ರತೀಕವಾಗಿದೆ.  ಆದ್ದರಿಂದ ಸೇನಾ ಸಮವಸ್ತç ಮಾದರಿಯ ಸಮವಸ್ತçವನ್ನು ಅಂಬಿಕಾದ ವಿದ್ಯಾರ್ಥಿಗಳಿಗೆ ಒದಗಿಸಿಕೊಡಲಾಗಿದೆ. ಭಾರತದ ಗಡಿಯನ್ನು ಕಾಯುವ ಸೈನಿಕರಿಗೆ ನಾವು ಹೇಗೆ ಗೌರವ ಕೊಡುತ್ತೇವೆಯೋ ಹಾಗೆಯೇ ನಮ್ಮ ಈ ಮಿಲಿಟರಿ ಮಾದರಿ ಸಮವಸ್ತçಕ್ಕೂ ಗೌರವವನ್ನು ಕೊಡಬೇಕು ಎಂದರು. 

ಅಂಬಿಕಾ ಸಮೂಹ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ, ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ.ಡಿ, ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್, ಸಮಾಜ ವಿಜ್ಞಾನ ಶಿಕ್ಷಕರಾದ ರಮೇಶ್ ಹಾಗೂ ದೀಪ್ತಿ ಉಪಸ್ಥಿತರಿದ್ದರು. ಶಾಲಾ ನಾಯಕನಾದ ಸಾತ್ವಿಕ್.ಜಿ ಹಾಗೂ ಶಾಲಾ ನಾಯಕಿಯಾದ ವಂಶಿಕಾ ಬಿ.ರೈ ಕಾರ್ಯಕ್ರಮವನ್ನು ನಿರ್ವಹಿಸಿದರು.

 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top