ಚಿತ್ತರಗಿಯ ನಿವೃತ್ತಯೋಧ ಪರಿಸರ ಪ್ರೇಮಿ ಬಸವರಾಜ ನಿಂಗನಗೌಡರಿಗೆ ಕರುನಾಡ ರತ್ನ ಪ್ರಶಸ್ತಿ

Upayuktha
0

 


ಹುನಗುಂದ : ಕರ್ನಾಟಕ ಸರ್ಕಾರದ ಆದಿನ ಪರಿಸರ ಸ್ನೇಹಿ ಟ್ರಸ್ಟ್ ಬೆಂಗಳೂರು ರವರು ಮೊದಲನೇಯ ವಾರ್ಷಿಕೋತ್ಸವದಲ್ಲಿ ಪರಿಸರ ಸ್ನೇಹಿ ಸಾಮಾಜಿಕ ಪರಿಶ್ರಮಿತರನ್ನು ಗುರುತಿಸಿ ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮಿತಿ ಕರ್ನಾಟಕ ರಾಜ್ಯ ಪ್ರದಾನ ಕಾರ್ಯದರ್ಶಿಗಳಾದ ಮಾಜಿ ಯೋಧ, ತಾಲೂಕಿನ ಚಿತ್ತರಗಿ ಗ್ರಾಮದ ಬಸವರಾಜ ಮ ನಿಂಗನಗೌಡರ ಅವರನ್ನು ಮತ್ತು ಸಾಮಾಜಿಕ ಕಳಕಳಿಯ ಆಟೋ ಚಾಲಕಿ ಮಹಿಳೆಯನ್ನುದಿನಾಂಕ 13.06.2026 ರಂದು ರವೀಂದ್ರ ಕನ್ನಡ ಕಲಾ ಕ್ಷೇತ್ರ ಬೆಂಗಳೂರಿನಲ್ಲಿ ಕರುನಾಡ ರತ್ನ ಪ್ರಶಸ್ತಿ ಯೊಂದಿಗೆ ಚಲನ ಚಿತ್ರ ನಿರ್ಮಾಪಕರು, ನಿರ್ದೇಶಕರು ಮತ್ತು ಟ್ರಸ್ಟ್ ಆಡಳಿತ ಮಂಡಳಿಯ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು


"ಪ್ರಕೃತಿಯ ರಕ್ಷಕ-ಪರಿಸರದ ಮಾಲಿಕ" ಎಂಬ ಮಾತಿನಂತೆ ಭಾರತೀಯ ಸೇನೆಯ‌ ನಿವೃತ್ತ ಅಧಿಕಾರಿಯಾಗಿ ನಿವೃತ್ತಿ ನಂತರ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿಯೂ ಕಾರ್ಯನಿರ್ವಹಿಸಿ ನಿವೃತ್ತಿಯಾಗಿ ಈಗ ಬೆಂಗಳೂರಿನಲ್ಲಿ ನೆಲೆಸಿರುವ ನಿಂಗನಗೌಡರು ಸದಾ ಪರಿಸರದ ಕುರಿತು ಕಾಳಜಿ ಹಾಗೂ ಉಪನ್ಯಾಸ ನೀಡುವದು ಜೊತೆಗೆ  ಸಸಿಗಳನ್ನು ನೆಡುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಹುನಗುಂದ ತಾಲೂಕಿನ ಸುಕ್ಷೇತ್ರ ಮೂಲತಃ ಚಿತ್ರರಗಿ ಗ್ರಾಮದವರಾದ ಬಸವರಾಜ ಎಮ್‌ ನಿಂಗನಗೌಡರರವರಿಗೆ ಬೆಂಗಳೂರಿನ ಆಧೀನ ಪರಿಸರ ಟ್ರಸ್ಟ್ ಇವರು ಕೊಡಮಾಡುವ "ಕರುನಾಡ ರತ್ನ" ರಾಜ್ಯ ಪ್ರಶಸ್ತಿ ಬಂದಿರುವದು ತಾಲೂಕಿನ ಚಿತ್ತರಗಿ ಹಾಗೂ ತಿಮ್ಮಾಪುರ ಸೇರಿದಂತೆ ಅವರ ಅಭಿಮಾನಿಗಳಿಗೆ  ಸಂತಸ ತಂದಿದೆ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top