ಕೆಸಿ ಗ್ಲೋಬ್ಎಡ್: ಎಐ-ಸನ್ನದ್ಧ ಪ್ರತಿಭೆ ಮತ್ತು ವಾಣಿಜ್ಯ ಶಿಕ್ಷಣದ ಭವಿಷ್ಯಕ್ಕಾಗಿ ಕುಲಪತಿಗಳ ದುಂಡು ಮೇಜಿನ ಸಭೆ

Upayuktha
0


ಬೆಂಗಳೂರು: ವಿಕಸಿತ ಭಾರತದ ಧ್ಯೇಯೋದ್ದೇಶಕ್ಕೆ ವಿಶ್ವವಿದ್ಯಾಲಯಗಳನ್ನು ಮರು ರೂಪಿಸುವ ದೃಷ್ಟಿಯಿಂದ ಕೆ.ಸಿ.ಗ್ಲೋಬ್ಎಡ್ ಬೆಂಗಳೂರಿನ ಕುಲಪತಿಗಳ ದುಂಡು ಮೇಜಿನ ಸಭೆಯಲ್ಲಿ ಮುಂಚೂಣಿಯ ಶಿಕ್ಷಣ ತಜ್ಞರು ಮತ್ತು ಉದ್ಯಮದ ಪರಿಣಿತರನ್ನು ಒಗ್ಗೂಡಿಸಿದ್ದು ಹೇಗೆ ಭಾರತೀಯ ವಿಶ್ವವಿದ್ಯಾಲಯಗಳು ಜಾಗತಿಕವಾಗಿ ಪ್ರಸ್ತುತ ಪಠ್ಯಕ್ರಮ, ಉದ್ಯಮ-ಸಂಯೋಜನೆಯ ಕಲಿಕೆ ಮತ್ತು ಭವಿಷ್ಯ ಸನ್ನದ್ಧ ಅರ್ಹತೆಗಳ ಮೂಲಕ ವಿದ್ಯಾರ್ಥಿಗಳನ್ನು ಹೆಚ್ಚಾಗಿ ಸ್ಪರ್ಧಾತ್ಮಕವಾಗುತ್ತಿರುವ ಅಂತಾರಾಷ್ಟ್ರೀಯ ಕಾರ್ಯಪಡೆಗೆ ಸಜ್ಜುಗೊಳಿಸಲು ವಾಣಿಜ್ಯ ಶಿಕ್ಷಣವನ್ನು ಪರಿವರ್ತಿಸಬಹುದು ಎಂದು ಆವಿಷ್ಕರಿಸಲು ಒಗ್ಗೂಡಿಸಿತು. 


ಬೆಂಗಳೂರಿನ ಸ್ಟರ್ಲಿಂಗ್ಸ್ ಮ್ಯಾಕ್ ಹೋಟೆಲ್ ನಲ್ಲಿ ಆಯೋಜಿಸಲಾದ ಈ ರೌಂಡ್ ಟೇಬಲ್ ಕಾರ್ಯಕ್ರಮವು “ವಿಕಸಿತ ಭಾರತಕ್ಕೆ ವಿಶ್ವವಿದ್ಯಾಲಯಗಳ ಮರು ರೂಪಿಸುವಿಕೆ: ಎಐ ಸನ್ನದ್ಧ ಪ್ರತಿಭೆ, ಉದ್ಯೋಗಾರ್ಹತೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆ” ಎಂಬ ವಿಷಯದ ಸುತ್ತಲೂ ಕೇಂದ್ರೀಕೃತವಾಗಿತ್ತು. ಈ ಸಭೆಯು ವಿಶ್ವವಿದ್ಯಾಲಯಗಳು ವಾಣಿಜ್ಯ ಮತ್ತು ಹಣಕಾಸು ಶಿಕ್ಷಣವನ್ನು ಉದಯೋನ್ಮುಖ ತಂತ್ರಜ್ಞಾನಗಳಿಗೆ ಒಗ್ಗೂಡಿಸುವ ಮೂಲಕ, ಜಾಗತಿಕವಾಗಿ ಮಾನ್ಯತೆ ಪಡೆದ ವೃತ್ತಿಪರ ಅರ್ಹತೆಗಳನ್ನು ಶೈಕ್ಷಣಿಕ ಮಾರ್ಗಗಳ ಒಳಗೆ ತರುವ ಮತ್ತು ಎಐ-ಪ್ರೇರಿತ ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಪದವೀಧರರ ಉದ್ಯೋಗಾರ್ಹತೆ ಹೆಚ್ಚಿಸಲು ಉದ್ಯಮ ಹಾಗೂ ಶೈಕ್ಷಣಿಕ ವಲಯಗಳ ನಡುವಿನ ಪಾಲುದಾರಿಕೆಯನ್ನು ಹೇಗೆ ಬಲಪಡಿಸಬಹುದು ಎಂಬುದನ್ನು ಆವಿಷ್ಕರಿಸಲು ಒಂದು ಜಂಟಿ ವೇದಿಕೆಯಾಗಿ ಕಾರ್ಯನಿರ್ವಹಿಸಿತು.


ಈ ಸಭೆಯಲ್ಲಿ ಕುಲಪತಿಗಳು ಮತ್ತು ಬೆಂಗಳೂರು ಹಾಗೂ ನೆರೆಹೊರೆಯ ಪ್ರದೇಶಗಳನ್ನು ಪ್ರತಿನಿಧಿಸುವ ಹಿರಿಯ ಶೈಕ್ಷಣಿಕ ನಾಯಕರು ಭಾಗವಹಿಸಿದ್ದರು. ಅವರಲ್ಲಿ ಎಐಸಿಟಿಇ, ಐಐಎಸ್ಸಿ ಬೆಂಗಳೂರು, ದಯಾನಂದ್ ಸಾಗರ್ ಯೂನಿವರ್ಸಿಟಿ, ಎಂ.ಎಸ್. ರಾಮಯ್ಯ ಯೂನಿವರ್ಸಿಟಿ, ಜೈನ್ ಯೂನಿವರ್ಸಿಟಿ, ಸೇಂಟ್ ಜೋಸೆಫ್ಸ್ ಯೂನಿವರ್ಸಿಟಿ, ಆರ್.ವಿ. ಯೂನಿವರ್ಸಿಟಿ, ನೃಪತುಂಗ ಯೂನಿವರ್ಸಿಟಿ, ಬೆಂಗಳೂರು ಯೂನಿವರ್ಸಿಟಿ, ಕುವೆಂಪು ಯೂನಿವರ್ಸಿಟಿ, ಐ.ಎಸ್.ಬಿ.ಆರ್. ಬಿಸಿನೆಸ್ ಸ್ಕೂಲ್, ಅಮಿಟಿ ಯೂನಿವರ್ಸಿಟಿ, ದಿ ಆಕ್ಸ್ ಫರ್ಡ್ ಕಾಲೇಜ್ ಆಫ್ ಎಂಜಿನಿಯರಿಂಗ್, ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತಿತರವು ಒಳಗೊಂಡಿದ್ದವು.


ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಪ್ರೊ. (ಡಾ.) ಟಿ. ಜಿ. ಸೀತಾರಾಮ್ ಅವರು ಮುಖ್ಯ ಅತಿಥಿಗಳಾಗಿದ್ದರು. ಸಭೆಯನ್ನು ಕುರಿತು ಮಾತನಾಡಿದ ಪ್ರೊ. ಸೀತಾರಾಮ್ ಅವರು, ಉದ್ಯಮದ ವೃದ್ಧಿಸುತ್ತಿರುವ ನಿರೀಕ್ಷೆಗಳನ್ನು ತಲುಪಲು ಉನ್ನತ ಶಿಕ್ಷಣವನ್ನು ಮಾರ್ಪಾಡು ಮಾಡುವ ಅಗತ್ಯತೆಯನ್ನು ಒತ್ತಿ ಹೇಳಿದರು. ಅವರು, “ಕೃತಕ ಬುದ್ಧಿಮತ್ತೆಯು ಹಣಕಾಸು ಮತ್ತು ವಾಣಿಜ್ಯ ಕ್ಷೇತ್ರವನ್ನು ಮರುರೂಪಿಸುತ್ತಿದ್ದು ಶಿಕ್ಷಣ ಸಂಸ್ಥೆಗಳು ತಮ್ಮ ಪಠ್ಯಕ್ರಮವನ್ನು ಸದೃಢ ಶೈಕ್ಷಣಿಕ ತಳಹದಿಯೊಂದಿಗೆ ಉದಯೋನ್ಮುಖ ತಂತ್ರಜ್ಞಾನಗಳು, ವೃತ್ತಿಪರ ಸಾಮರ್ಥ್ಯಗಳು, ಅಂತರ್ ಶಿಸ್ತೀಯ ಕಲಿಕೆ, ಆವಿಷ್ಕಾರ ಮತ್ತು ಪ್ರಾಯೋಗಿಕ ಕೈಗಾರಿಕಾ ಬಳಕೆಯ ಮೂಲಕ ಜಾಗತಿಕ ಅರ್ಥವ್ಯವಸ್ಥೆಯ ವಿಕಾಸಗೊಳ್ಳುತ್ತಿರುವ ಬೇಡಿಕೆಗಳನ್ನು ಪೂರೈಸಲು ಸನ್ನದ್ಧವಾಗಬೇಕಾಗಿದೆ” ಎಂದರು.


ಜಿಸಿಸಿ ಸ್ಕೂಲ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಪ್ರೊ. (ಡಾ.) ಮನ್ಪ್ರೀತ್ ಸಿಂಗ್ ಮನ್ನಾ ಮತ್ತು ಜಿಸಿಸಿ ಸ್ಕೂಲ್ ಹಾಗೂ ಕೆಸಿ ಗ್ಲೋಬ್ಎಡ್ ಸಂಸ್ಥಾಪಕರು ಮತ್ತು ಸಿಇಒ ಆಗಿರುವ ಡಾ. ಕಮಲ್ ಛಾಬ್ರಾ ಸೇರಿದಂತೆ ಹಿರಿಯ ಶೈಕ್ಷಣಿಕ ನಾಯಕರ ಚಿಂತನೆಗಳು ಮತ್ತು ಒಳನೋಟಗಳಿಂದ ಈ ಚರ್ಚೆಗಳು ಮತ್ತಷ್ಟು ಸಮೃದ್ಧಗೊಂಡವು.


ಜಿಸಿಸಿ ಸ್ಕೂಲ್ ಮತ್ತು ಕೆಸಿ ಗ್ಲೋಬ್ಎಡ್ ಸಂಸ್ಥೆಯ ಸಂಸ್ಥಾಪಕರು ಮತ್ತು ಸಿಇಒ ಆದ ಡಾ. ಕಮಲ್ ಛಾಬ್ರಾ, "ಭಾರತದಲ್ಲಿ ಜಾಗತಿಕ ಮಟ್ಟದ ಅರ್ಹತೆ ಹೊಂದಿರುವ ಹಣಕಾಸು ಮತ್ತು ತೆರಿಗೆ ವೃತ್ತಿಪರರಿಗೆ ಬೇಡಿಕೆ ಹೆಚ್ಚುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಈ ಕುಲಪತಿಗಳ ದುಂಡುಮೇಜಿನ ಸಭೆಯ ಮೂಲಕ, ಯುಎಸ್ ಸಿಪಿಎ, ಯುಎಸ್ ಸಿಎಂಎ, ಯುಎಸ್ ಇಎ, ಮತ್ತು ಯುಕೆ ಎಸಿಸಿಎ ನಂತಹ ಜಾಗತಿಕವಾಗಿ ಮನ್ನಣೆ ಪಡೆದ ಕೋರ್ಸ್ಗಳನ್ನು ಒದಗಿಸುವ ಸೆಂಟರ್ಸ್ ಆಫ್ ಎಕ್ಸೆಲೆನ್ಸ್ ಸ್ಥಾಪಿಸಲು ನಾವು ವಿಶ್ವವಿದ್ಯಾಲಯಗಳೊಂದಿಗೆ ಸಹಯೋಗ ಹೊಂದುವ ಗುರಿ ಹೊಂದಿದ್ದೇವೆ. ಭವಿಷ್ಯದ ಅಗತ್ಯಗಳಿಗೆ ತಕ್ಕ ಹಣಕಾಸು ಶಿಕ್ಷಣವನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಮತ್ತು ಬಿಗ್ 4 ಸಂಸ್ಥೆಗಳು, ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಜಾಗತಿಕ ಉದ್ಯಮಗಳಲ್ಲಿ ಉದ್ಯೋಗಾವಕಾಶಗಳ ಮಾರ್ಗಗಳನ್ನು ಸೃಷ್ಟಿಸುವ ಮೂಲಕ ಶೈಕ್ಷಣಿಕ ವಲಯ ಮತ್ತು ಉದ್ಯಮ ರಂಗದ ನಡುವಿನ ಅಂತರವನ್ನು ಕಡಿಮೆ ಮಾಡುವುದು ನಮ್ಮ ಧ್ಯೇಯವಾಗಿದೆ” ಎಂದು ಹೇಳಿದರು. 


ಜಿಸಿಸಿ ಸ್ಕೂಲ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಪ್ರೊ. (ಡಾ.) ಮನ್ಪ್ರೀತ್ ಸಿಂಗ್ ಮನ್ನಾ, ಉದ್ಯೋಗಾರ್ಹತೆ ಎಂಬುದು ಇನ್ನು ಮುಂದೆ  ಮುಖ್ಯವಾಗಿ ವಾಣಿಜ್ಯ ಮತ್ತು ಹಣಕಾಸು ಶಿಕ್ಷಣದಲ್ಲಿ ಕೊನೆಯ ಆದ್ಯತೆಯಾಗಿ ಉಳಿಯಲು ಸಾಧ್ಯವಿಲ್ಲ. ವಿಶ್ವವಿದ್ಯಾಲಯಗಳು ಉದ್ಯಮದ ಪರಿಚಯ, ಪ್ರಾಯೋಗಿಕ ಕಲಿಕೆ  ಮತ್ತು ಸಂಬಂಧಪಟ್ಟ ಸಾಮರ್ಥ್ಯಗಳನ್ನು ವಿದ್ಯಾರ್ಥಿಗಳ ಕಲಿಕೆಯ ಪ್ರಯಾಣದಲ್ಲಿ ಒದಗಿಸುವ ಮೂಲಕ ಪದವಿ ಮುಗಿಸಿದ ಮೊದಲ ದಿನದಿಂದಲೇ ಉದ್ಯೋಗಕ್ಕೆ ಸಿದ್ಧರಿರುವಂತಹ ಪದವೀಧರರನ್ನು ರೂಪಿಸಬೇಕು” ಎಂದರು. 


ವೇಗವಾಗಿ ಬದಲಾಗುತ್ತಿರುವ ಜಾಗತಿಕ ಆರ್ಥಿಕತೆಯ ಅವಕಾಶಗಳು ಮತ್ತು ಸವಾಲುಗಳನ್ನು ಎದುರಿಸಲು ಸಜ್ಜಾದ ಹಾಗೂ ಎಐ-ಸನ್ನದ್ಧ ಜಾಗತಿಕ ಸಾಮರ್ಥ್ಯದ ಪ್ರತಿಭೆಗಳನ್ನು ಒಟ್ಟಾಗಿ ರೂಪಿಸುವ ಒಂದು ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸಲು, ಆವಿಷ್ಕಾರವನ್ನು ಪ್ರೋತ್ಸಾಹಿಸಲು ಮತ್ತು ಉದ್ಯಮ ರಂಗದೊಂದಿಗಿನ ಸಂಪರ್ಕವನ್ನು ಬಲಪಡಿಸಲು, ವಾಣಿಜ್ಯ ಮತ್ತು ಹಣಕಾಸು ಶಿಕ್ಷಣದ ಪರಿವರ್ತನೆಗೆ ವೇಗ ನೀಡಲು ಭಾಗವಹಿಸಿದ್ದ ಸಂಸ್ಥೆಗಳು ಪರಸ್ಪರ ಬದ್ಧತೆಯನ್ನು ವ್ಯಕ್ತಪಡಿಸುವುದರೊಂದಿಗೆ ಈ ದುಂಡುಮೇಜಿನ ಸಭೆಯು ಮುಕ್ತಾಯಗೊಂಡಿತು.

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top