ಜೂ. 26: ಚನ್ನಗಿರಿ ವಿರೂಪಾಕ್ಷಪ್ಪನವರ ಜನ್ಮ ದಿನಾಚರಣೆ ಶತಮಾನೋತ್ಸವದ ಉದ್ಘಾಟನೆ

Upayuktha
0

 


ದಾವಣಗೆರೆ: ಇಲ್ಲಿನ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್ ವತಿಯಿಂದ ಜೂನ್ 26 ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ನಗರದ ಜಯದೇವ ವೃತ್ತದಲ್ಲಿ ಇರುವ ಶ್ರೀ ಶಂಕರ ಮಠದ ಸಭಾಂಗಣದಲ್ಲಿ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್ನ ಅಧ್ಯಕ್ಷರಾದ ಚನ್ನಗಿರಿ ವಿರೂಪಾಕ್ಷಪ್ಪನವರ ಜನಮದಿನದ ಶತಮಾನೋತ್ಸವದ ಸಂಭ್ರಮದ ಸಮಾರಂಭ ಉದ್ಘಾಟನೆಯಾಗಲಿದೆ ಎಂದು ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಭರತ್ ಚನ್ನಗಿರಿ ತಿಳಿಸಿದ್ದಾರೆ.


ಸಮಾರಂಭದ ಉದ್ಘಾಟನೆಯನ್ನು ದಾವಣಗೆರೆ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷರಾದ ಬಿ.ವಾಮದೇವಪ್ಪ ನೆರವೇರಿಸಲಿದ್ದಾರೆ. ಸಮಾರಂಭದಲ್ಲಿ ಸಿ.ಆರ್. ಚನ್ನಗಿರಿ ವಿರೂಪಾಕ್ಷಪ್ಪನವರು ಗೌರವ ಉಪಸ್ಥಿತರಿರುತ್ತಾರೆ. ಅಧ್ಯಕ್ಷತೆಯನ್ನು ಟ್ರಸ್ಟಿನ ಸಮಿತಿ ಸದಸ್ಯರಾದ ಶ್ರೀ ಸಿ.ಆರ್. ಸತ್ಯನಾರಾಯಣ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಟ್ರಸ್ಟಿನ ಸಮಿತಿ ಸದಸ್ಯರಾದ ಸಿ.ಆರ್.ಕೃಷ್ಣಮೂರ್ತಿ, ಟ್ರಸ್ಟಿನ ಗೌರವ ಸಲಹೆಗಾರರಾದ ಕಾಂತರಾಜ್, ಶ್ರೀಮತಿ ವಸಂತ ಪದ್ಮ,  ಶ್ರೀಮತಿ ರಾಧಿಕಾ ಗೋಲಿ ಆಗಮಿಸಲಿದ್ದಾರೆ.


ಚನ್ನಗಿರಿ ವಿರೂಪಾಕ್ಷಪ್ಪನವರ ಈ ಅಪರೂಪದ ಶತಮಾನೋತ್ಸವದ ವಿಜೃಭಂಬಣೆಯ ಸಂಭ್ರಮದ ಈ ಸಮಾರಂಭಕ್ಕೆ ಚನ್ನಗಿರಿ ವಿರೂಪಾಕ್ಷಪ್ಪನವರ ಅಭಿಮಾನಿಗಳು, ಚನ್ನಗಿರಿ ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ  ಟ್ರಸ್ಟ್ನ ಸಮಿತಿ ಸದಸ್ಯರಾದ ನ್ಯಾಯವಾದಿಗಳಾದ ಜೆ.ಎನ್.ವಸಂತಕುಮಾರ್ ವಿನಂತಿಸಿದ್ದಾರೆ.

 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top