ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಸಾಮೂಹಿಕ ವಿಪತ್ತು ನಿರ್ವಹಣಾ ಸಮ್ಮೇಳನ

Upayuktha
0

 


ಮಂಗಳೂರು: ಶ್ರೀನಿವಾಸ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ (SIMS&RC) ನ್ಯಾಯ ಶಾಸ್ತ್ರ ವೈದ್ಯಕೀಯ ವಿಭಾಗವು ಶ್ರೀನಿವಾಸ ವಿಶ್ವವಿದ್ಯಾಲಯದ ಮುಕ್ಕ ಕ್ಯಾಂಪಸ್ನಲ್ಲಿಒನ್ ವರ್ಲ್ಡ್, ಒನ್ ರೆಸ್ಪಾನ್ಸ್ಎಂಬ ಧ್ಯೇಯವಾಕ್ಯದೊಂದಿಗೆ ಅಂತಾರಾಷ್ಟ್ರೀಯ ಸಾಮೂಹಿಕ ವಿಪತ್ತು ನಿರ್ವಹಣಾ ಸಮ್ಮೇಳನವನ್ನು ಜೂನ್ 12, 13ರಂದು ಆಯೋಜಿಸಿತು.

 

ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀನಿವಾಸ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಪ್ರೊ. ಇಆರ್ . ಶ್ರೀಮತಿ . ಮಿತ್ರಾ ಎಸ್. ರಾವ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಭಾರತೀಯ ರೆಡ್ಕ್ರಾಸ್ ಸೊಸೈಟಿಯ ಉಪಾಧ್ಯಕ್ಷರಾದ ನಿವೃತ್ತ ಐಪಿಎಸ್ ಅಧಿಕಾರಿ ಶ್ರೀ ಭಾಸ್ಕರ್ ರಾವ್ ಭಾಗವಹಿಸಿದ್ದರು. ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ. ಸತ್ಯನಾರಾಯಣ ರೆಡ್ಡಿ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಕುಮಾರಿ ಮೇಘನಾ ಎಸ್. ರಾವ್, ಶ್ರೀನಿವಾಸ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಡೀನ್ ಡಾ. ಉದಯಕುಮಾರ್,  ಶ್ರೀನಿವಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಡೇವಿಡ್ ರೋಸಾರಿಯೋ ಉಪಸ್ಥಿತರಿದ್ದರು.

 

ನ್ಯಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರು ಹಾಗೂ ಸಮ್ಮೇಳನದ ಆಯೋಜನಾ ಅಧ್ಯಕ್ಷರಾದ ಡಾ. ವೃಂದಾ ಜೆ. ಭಟ್ ಸ್ವಾಗತಿಸಿದರು. ಶ್ರೀ ಶಾನ್ವಿಲ್ ಶಾನ್ ಡಿಸೋಜಾ ಗಣ್ಯರನ್ನು ಪರಿಚಯಿಸಿದರು. ಸಮ್ಮೇಳನದ ಆಯೋಜನಾ ಕಾರ್ಯದರ್ಶಿಯಾದ ಡಾ. ಪ್ರಶಾಂತ್ ಭಗವತ್ ವಂದನಾರ್ಪಣೆ ಸಲ್ಲಿಸಿದರು. ಡಾ. ಸ್ವಾತಿ ಮತ್ತು ಶ್ರೀಮತಿ ರಶ್ಮಿ ಕಾರ್ಯಕ್ರಮ ನಿರೂಪಿಸಿದರು.

 

ಸಮ್ಮೇಳನವು ತಜ್ಞರು, ಶಿಕ್ಷಣತಜ್ಞರು, ಆರೋಗ್ಯ ವೃತ್ತಿಪರರು ಮತ್ತು ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ತಂದು, ಪರಿಣಾಮಕಾರಿ ವಿಪತ್ತು ಪೂರ್ವಸಿದ್ಧತೆ, ಪ್ರತಿಕ್ರಿಯೆ ಮತ್ತು ಪುನಶ್ಚೇತನದ ಕುರಿತ ಚರ್ಚೆಗೆ ಅವಕಾಶ ಕಲ್ಪಿಸಿತು. “ಒನ್ ವರ್ಲ್ಡ್, ಒನ್ ರೆಸ್ಪಾನ್ಸ್ಎಂಬ ಸಂದೇಶವನ್ನು ಮತ್ತಷ್ಟು ಬಲಪಡಿಸಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top