ಮಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ನಡೆದ ಡಾ. ಸುಧಾಕರ ಹೊಸಳ್ಳಿ ಅವರು ಬರೆದ "ನಾನೂ ಕಾಫಿರ ಅಂಬೇಡ್ಕರ್ ಅವರ ಹಿಂದುತ್ವ ಕಥನ" ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ ಮಂಗಳೂರಿನ ಎಸ್.ಡಿ.ಎಂ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ನಡೆಯಿತು.
ಪುಸ್ತಕ ಬಿಡುಗಡೆ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕಲಾ ನಿಕಾಯದ ಡೀನ್ ಪ್ರೊ. ಸೋಮಣ್ಣ ಹೊಂಗಳ್ಳಿ ಮಾತನಾಡಿ ಅಂಬೇಡ್ಕರ್ ಹಿಂದೂ ಧರ್ಮದ ಅತ್ಯಂತ ಗಟ್ಟಿಯಾದ ಸಮರ್ಥಕ ಮತ್ತು ಸುಧಾರಕ ಅವರನ್ನು ನಮಗೆ ತಪ್ಪಾಗಿ ತಿಳಿಸುವ ಪ್ರಯತ್ನ ಆಗಿದೆ. ಆದರೆ ನಿಜವಾಗಿ ಅಂಬೇಡ್ಕರ್ ಏನು ಹೇಳಿದರು ಏನು ಬರೆದರು ಅನ್ನುವುದು ಸಮಾಜಕ್ಕೆ ತಿಳಿಯ ಬೇಕಾಗಿದೆ ಆ ಕೆಲಸವನ್ನು ಈ ಪುಸ್ತಕ ಮಾಡಿದೆ ಎಂದು ಅಭಿಪ್ರಾಯ ಪಟ್ಟರು.
ಪುಸ್ತಕ ಪರಿಚಯ ಮಾಡಿದ ಖ್ಯಾತ ಅಂಕಣಕಾರ ಪ್ರವೀಣ್ ಕುಮಾರ್ ಮಾವಿನಕಾಡು ಅವರು ಮಾತನಾಡಿ ಹೇಗೆ ನಾನು ಗೌರಿ, ನಾನು ಅಪ್ಸಲ್ ಅನ್ನುವ ಪ್ರತಿರೋಧಗಳು ಬಂತೋ ಆ ಪ್ರತಿರೋಧದ ಮೂಲ ಅಂಬೇಡ್ಕರ್ ಅವರ ನಾನೂ ಕಾಫಿರ ಅನ್ನುವ ಹೇಳಿಕೆ. ಸರ್ವೇ ಜನಾಃ ಸುಖಿನೋ ಭವಂತು ಎಂದು ಹೇಳುವ ಹಿಂದೂ ಧರ್ಮ ಯಾವತ್ತಿಗೂ ಪರರನ್ನು ಧ್ವೇಷ ಮಾಡಿಲ್ಲ ಆದರೆ ಕೆಲವರು ನಮ್ಮವರಲ್ಲದವರು ಕಾಫಿರರು ಎಂದು ಅವರನ್ನು ನಾಶ ಮಾಡುವ ಚಿಂತನೆ ಇರುವ ಸಂದರ್ಭದಲ್ಲಿ ಅಂಬೇಡ್ಕರ್ ಈ ರೀತಿ ಹೇಳಿದ್ದಾರೆ ಎಂದು ಪುಸ್ತಕದ ವಿಷಯಗಳನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ತಿನ ಮಂಗಳೂರು ವಿಭಾಗ ಪ್ರಮುಖ್ ಡಾ. ಕೇಶವ ಬಂಗೇರ ಅವರು ವಹಿಸಿದ್ದರು. ವೇದಿಕೆಯಲ್ಲಿ ಕೃತಿಯ ಲೇಖಕರಾದ ಡಾ. ಸುಧಾಕರ ಹೊಸಳ್ಳಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಭಾಸಾಪ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶೈಲೇಶ್ ಕುಲಾಲ್, ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಅಧ್ಯಕ್ಷೆ ವೀಣಾ ಶೆಟ್ಟಿ, ಸಹ ಕಾರ್ಯದರ್ಶಿ ಗೀತಾ ಲಕ್ಷ್ಮೀಶ್ ಉಪಸ್ಥಿತರಿದ್ದರು. ಸಮಿತಿಯ ಸಹಕಾರ್ಯದರ್ಶಿ ಶ್ರೀಲಕ್ಷ್ಮಿ ಮಠದಮೂಲೆ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


